2025ರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಇಂದು ತನ್ನ ಮೊದಲ ಹೆಜ್ಜೆಯನ್ನು ಇಟ್ಟಿದೆ. ಆತಿಥೇಯ ಯುಎಇ ವಿರುದ್ಧದ ಎರಡನೇ ಲೀಗ್ ಪಂದ್ಯದಲ್ಲಿ ಭಾರತ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯದಲ್ಲಿ ಭಾರತ ಯಶಸ್ವಿ ಆರಂಭ ನೀಡುವ ಕನಸಿನಲ್ಲಿ ಕಣಕ್ಕಿಳಿಯಲಿದೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕರಾಗಿ ಸ್ಫೋಟಕ ಆಟಗಾರ ಅಭಿಷೇಕ್ ಶರ್ಮಾ ಅವರುಆಡಲಿದ್ದಾರೆ. ಅವರ ಜೊತೆಗೆ ಶುಭಮನ್ ಗಿಲ್ರು ಜೋಡಿಯಾಗಿ ಬರಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಆಡಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್‌ಗಳಾಗಿ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷ್‌ದೀಪ್ ಸಿಂಗ್ ಬಲ ನೀಡುತ್ತಿದ್ದಾರೆ. ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಇದನ್ನು ಓದಿದ್ದೀರಾ? ಕ್ರಿಕೆಟ್‌ಗೆ ಅಮಿತ್ ಮಿಶ್ರಾ ವಿದಾಯ; ಐಪಿಎಲ್‌ನಲ್ಲಿ 3 ಬಾರಿ ಹ್ಯಾಟ್ರಿಕ್ ಪಡೆದ ಏಕೈಕ ಬೌಲರ್
ಇದು ಭಾರತ ಮತ್ತು ಯುಎಇ ನಡುವಿನ ಎರಡನೇ ಟಿ20 ಅಂತರರಾಷ್ಟ್ರೀಯ ಪಂದ್ಯವಾಗಿದ್ದು, ಮೊದಲ ಪಂದ್ಯ 2016 ರ ಏಷ್ಯಾ ಕಪ್‌ನಲ್ಲಿ ನಡೆಯಿತ್ತು. ಅಲ್ಲಿ ಭಾರತ ತಂಡ 9 ವಿಕೆಟ್‌ಗಳಿಂದ ಸುಲಭ ಜಯ ದಾಖಲಿಸಿತ್ತು.
ಈ ಬಾರಿ ಯುಎಇ ತಂಡವನ್ನು ಲಘುವಾಗಿ ನಿರ್ವಹಿಸಲಾಗದು. ನಾಯಕ ಮುಹಮ್ಮದ್ ವಾಸಿಂ ನೇತೃತ್ವದ ಯುಎಇ ಉತ್ತಮ ಸಾಮರ್ಥ್ಯ ಹೊಂದಿದೆ. ಆದರೆ ತಂಡದ ಅನುಭವ ಹಾಗೂ ಸಮತೋಲನದ ಆಧಾರದ ಮೇಲೆ ಟೀಂ ಇಂಡಿಯಾ ಪ್ರಬಲ ತಂಡವಾಗಿದೆ.
ಉಭಯ ತಂಡಗಳ ಆಡುವ ಬಳಗ
ಭಾರತ:
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ.
ಯುಎಇ:
ಮುಹಮ್ಮದ್ ವಾಸಿಂ (ನಾಯಕ), ಅಲಿಶಾನ್ ಶರಾಫು, ಆರ್ಯನ್ಶ್ ಶರ್ಮಾ, ಆಸಿಫ್ ಖಾನ್, ಧ್ರುವ್ ಪರಾಶರ್, ಎಥಾನ್ ಡಿಸೋಜಾ, ಹೈದರ್ ಅಲಿ, ಹರ್ಷಿತ್ ಕೌಶಿಕ್, ಜುನೈದ್ ಸಿದ್ದಿಕಿ, ಮತಿಯುಲ್ಲಾ ಖಾನ್, ಮುಹಮ್ಮದ್ ಫಾರೂಕ್, ಮುಹಮ್ಮದ್ ಜವಾದುಲ್ಲಾ, ಮುಹಮ್ಮದ್ ಜೊಹೈಬ್, ರಾಹುಲ್ ಖಾನ್ ಚೋಪ್ರಾ, ರೋಹಿತ್.