ಕಾರ್ಲೋಸ್‌ ಅಲ್ಕರಾಜ್‌ಗೆ ಅಮೆರಿಕ ಓಪನ್‌ ಟೆನಿಸ್ ಕಿರೀಟ; ಸೋತರೂ ವಿಶ್ವದಾಖಲೆ ಸ್ಥಾಪಿಸಿದ ಸಿನ್ನರ್

Date:

Advertisements

ಅಮೆರಿಕ ಓಪನ್‌ ಗ್ರ್ಯಾಂಡ್‌ ಸ್ಲ್ಯಾಮ್‌ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಸ್ಪೇನ್‌ ಸ್ಟಾರ್‌ ಆಟಗಾರ ಕಾರ್ಲೋಸ್‌ ಅಲ್ಕರಾಜ್‌ ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರನ್ನು ಮಣಿಸಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದಾರೆ.

ಭಾನುವಾರ ತಡ ರಾತ್ರಿ ನಡೆದ ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ಅಲ್ಕರಾಜ್ 6-2, 3-6, 6-1, 6-4 ಸೆಟ್‌ಗಳಿಂದ ಇಟಲಿಯ 24 ವರ್ಷದ ಸಿನ್ನರ್‌ ಅವರನ್ನು 2 ಗಂಟೆ 42 ನಿಮಿಷ ನಡೆದ ಹಣಾಹಣಿಯಲ್ಲಿ ಮಣಿಸಿದರು. ಈ ಮೂಲಕ ಸ್ಪೇನ್‌ನ ಅಲ್ಕರಾಜ್‌ ಆರನೇ ಗ್ರ್ಯಾನ್‌ ಸ್ಲ್ಯಾಮ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ಸಿನ್ನರ್‌ 4ನೇ ಗ್ರ್ಯಾನ್‌ ಸ್ಲ್ಯಾಮ್‌ ಟೆನಿಸ್ ಟೂರ್ನಿಯನ್ನು ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದರು. ಅಲ್ಕರಾಜ್‌ 2024, 2025 ರಲ್ಲಿ ಫ್ರೆಂಚ್‌ ಓಪನ್‌ ಟೂರ್ನಿ, 2023, 2024 ರಲ್ಲಿ ವಿಂಬಲ್ಡನ್‌ ಚಾಂಪಿಯನ್ ಹಾಗೂ ಅಮೆರಿಕ ಓಪನ್‌ ಪ್ರಶಸ್ತಿಯನ್ನು 2022, 2025ರಲ್ಲಿ ಪಡೆದಿದ್ದಾರೆ.

ಇದನ್ನು ಓದಿದ್ದೀರಾ? ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಇತಿಹಾಸ ನಿರ್ಮಿಸಿ ಪದಕ ಗೆದ್ದ ಸಾತ್ವಿಕ್‌–ಚಿರಾಗ್

ಸಿನ್ನರ್ ಬಾರಿ ಪ್ರಶಸ್ತಿ ಗೆಲ್ಲದಿದ್ದರೂ ಈ ವರ್ಷದ 4 ಗ್ರ್ಯಾನ್‌ ಸ್ಲ್ಯಾಮ್ ಫೈನಲ್‌ಗಳನ್ನು ಆಡಿದ ದಾಖಲೆ ಹೊಂದಿದ್ದಾರೆ. ಈ ಮೂಲಕ ಇವರು ಒಂದು ವರ್ಷದಲ್ಲಿ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಫೈನಲ್‌ಗಳನ್ನು ಆಡಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ರಾಡ್ ಲೇವರ್ (1969), ರೋಜರ್ ಫೆಡರರ್ (2006, 2007, 2008) ಮತ್ತು ನೊವಾಕ್ ಜೊಕೊವಿಕ್ (2015, 2021, 2023) ಈ ಸಾಧನೆ ಮಾಡಿದ್ದರು.

ಈ ಸೋಲಿನೊಂದಿಗೆ ಸಿನ್ನರ್ ಅವರ ಹಾರ್ಡ್ ಕೋರ್ಟ್‌ನಲ್ಲಿ 27 ಪಂದ್ಯಗಳ ಗೆಲುವಿನ ಸರಣಿಗೆ ತಡೆ ಬಿದ್ದಿದೆ. ಅಮೆರಿಕ ಓಪನ್ 2025 ಚಾಂಪಿಯನ್ ಆದ ಕಾರ್ಲೋಸ್ ಅಲ್ಕರಾಜ್‌ಗೆ ಭಾರೀ ಬಹುಮಾನ ದೊರಕಿದೆ. ಇವರು ಅಮೆರಿಕ ಓಪನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಿರುವಂತೆ 5 ಮಿಲಿಯನ್ ಅಮೆರಿಕ ಡಾಲರ್ (ಸುಮಾರು ರೂ. 42 ಕೋಟಿ) ಬಹುಮಾನ ಗೆದ್ದಿದ್ದಾರೆ. ರನ್ನರ್ ಅಪ್‌ ಯಾನಿಕ್ ಸಿನ್ನರ್ ಸುಮಾರು 2.5 ಮಿಲಿಯನ್ ಡಾಲರ್ (ಸುಮಾರು ರೂ. 22 ಕೋಟಿ) ಬಹುಮಾನ ಪಡೆದಿದ್ದಾರೆ.

ಈ ಬಾರಿ ಅಮೆರಿಕ ಓಪನ್‌ಗಾಗಿ ಆಯೋಜಕರು 90 ಮಿಲಿಯನ್ ಡಾಲರ್ (ಸುಮಾರು ರೂ. 750 ಕೋಟಿ) ಬಹುಮಾನ ಮೊತ್ತವನ್ನು ಘೋಷಿಸಿದ್ದರು. ಇದು ಕಳೆದ ಬಾರಿಗೆ ಹೋಲಿಸಿದರೆ ಶೇ. 20 ರಷ್ಟು ಹೆಚ್ಚಾಗಿದೆ. 2024ರಲ್ಲಿ ಯುಎಸ್‌ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಆಟಗಾರ 3.6 ಮಿಲಿಯನ್ ಯುಎಸ್‌ ಡಾಲರ್ ಪಡೆದಿದ್ದರು. ಬಹುಮಾನ ಮೊತ್ತ ಈ ಬಾರಿ ಸುಮಾರು ಶೇ 39 ರಷ್ಟು ಹೆಚ್ಚಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರೀಡಾ ಮೈದಾನದಲ್ಲೂ ಆಪರೇಷನ್ ಸಿಂಧೂರ: ಪಾಕಿಸ್ತಾನದ ಕಾಲೆಳೆದ ಪ್ರಧಾನಿ ಮೋದಿ

ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಏಷ್ಯಾ ಕಪ್ ಗೆದ್ದ ಬೆನ್ನಲ್ಲೇ ಪ್ರಧಾನಿ...

ಏಪ್ಯಾ ಕಪ್ ಫೈನಲ್ : ಪಾಕ್ ವಿರುದ್ಧ ಟೀಮ್ ಇಂಡಿಯಾಗೆ ರೋಚಕ ಜಯ; 9ನೇ ಬಾರಿ ಚಾಂಪಿಯನ್

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಏಪ್ಯಾ ಕಪ್ ಫೈನಲ್...

ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಆಯ್ಕೆ; ಯಾರಿವರು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ...

ಶೀತಲ್ ದೇವಿಗೆ ಐತಿಹಾಸಿಕ ಚಿನ್ನ; ವಿಶ್ವ ಪ್ಯಾರಾ ಆರ್ಚರಿಯಲ್ಲಿ ಭಾರತದ ಹೆಮ್ಮೆ

ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ನಡೆದ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ...

Download Eedina App Android / iOS

X