ಟಿ20 ವಿಶ್ವಕಪ್ | ಬಲಿಷ್ಠ ತಂಡಗಳನ್ನು ಬಿಟ್ಟು ಅಫ್ಘಾನ್, ಬಾಂಗ್ಲಾ, ಅಮೆರಿಕ ಸೂಪರ್ 8 ಪ್ರವೇಶ

Date:

ವೆಸ್ಟ್‌ ಇಂಡೀಸಿನ ಅರ್ನೋಸ್ ವೇಲ್ ಕ್ರೀಡಾಂಗಣ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಡಿ ಗುಂಪಿನ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ನೇಪಾಳ ವಿರುದ್ಧ 21 ರನ್‌ಗಳ ಜಯ ದಾಖಲಿಸಿದೆ. ಇದರೊಂದಿಗೆ ಬಾಂಗ್ಲಾ ಅಧಿಕೃತವಾಗಿ ಸೂಪರ್-8 ಹಂತ ಪ್ರವೇಶಿಸಿದೆ.

- Advertisement -

ಪ್ರಮುಖ ಪ್ರಬಲ ತಂಡಗಳಿಲ್ಲದೆ ಈ ಬಾರಿ ಮೂರು ಸಾಮಾನ್ಯ ತಂಡಗಳು ಸೂಪರ್‌ 8 ಪ್ರವೇಶಿಸಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಅತಿಥೇಯ ಅಮೆರಿಕ ತಂಡ ಸೂಪರ್‌ 8 ಪ್ರವೇಶಿಸಿದ ಪ್ರಮುಖ ತಂಡಗಳಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಬಲಿಷ್ಠ ತಂಡಗಳಾದ ಶ್ರೀಲಂಕಾ, ನ್ಯೂಜಿಲೆಂಡ್‌ ಹಾಗೂ ಪಾಕಿಸ್ತಾನ ಸೂಪರ್‌ 8 ಹಂತವನ್ನು ಪ್ರವೇಶಿಸಿಲ್ಲ. ಸೂಪರ್‌ 8 ಪಂದ್ಯಗಳು ಜೂ.19 ರಿಂದ ವೆಸ್ಟ್‌ ಇಂಡೀಸ್‌ನ ಕ್ರೀಡಾಂಗಣಗಳಲ್ಲಿ ಆರಂಭವಾಗಲಿವೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿತ್ತು. ಅನುಭವಿ ಶಕಿಬ್ ಉಲ್ ಹಸನ್ ಇನ್ನಿಂಗ್ಸ್‌ನ ಸರ್ವಾಧಿಕ 17 ರನ್ ಗಳಿಸಿದರು. ಇನ್ನುಳಿದಂತೆ ಆರಂಭಿಕ ಆಟಗಾರ ಲಿಟನ್ ದಾಸ್ 10, ಮೊಹಮುದುಲ್ಲಾ 13, ಜಕರ್ ಅಲಿ 12, ರಿಶದ್ ಹೊಸೇನ್ 13 ಹಾಗೂ ವೇಗಿ ಟಸ್ಕಿನ್ ಅಹ್ಮದ್ ಅಜೇಯ 12 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು

ಆರಂಭಿಕ ಆಟಗಾರ ತಂಜಿದ್ ಹಸನ್ (0) ಖಾತೆ ತೆರೆಯದೇ ಔಟಾದರೆ, ನಾಯಕ ಶಾಂಟೊ 4, ತೊವ್ಹಿದ್ ಹೃದೋಯ್ 9, ಹಸನ್ ಶಕೀಬ್ 3 ಹಾಗೂ ಮುಸ್ತಾಫಿಜರ್ 3 ರನ್‌ಗೆ ವಿಕೆಟ್ ಒಪ್ಪಿಸಿದರು. ಬಾಂಗ್ಲಾದೇಶ 19.3 ಓವರ್‌ಗಳಲ್ಲಿ 106 ರನ್‌ಗಳಿಗೆ ಆಲೌಟ್ ಆಯಿತು. ನೇಪಾಳ ಪರ ಸೋಂಪಾಲ್ ಕಾಮಿ, ದಿಪೆಂದ್ರ ಸಿಂಗ್, ರೋಹಿತ್ ಪೌಡೆಲ್ ಹಾಗೂ ಸಂದೀಪ್ ಲಮಿಶಾನೆ ತಲಾ 2 ವಿಕೆಟ್ ಕಬಳಿಸಿದರು.

107 ರನ್ ಗುರಿ ಬೆನ್ನಟ್ಟಿದ ನೇಪಾಳದ ಇನ್ನಿಂಗ್ಸ್ ಕೂಡ ಸವಾಲಿನಿಂದ ಕೂಡಿರಲಿಲ್ಲ. 26 ರನ್ ಆಗುವಷ್ಟರಲ್ಲೇ ತಂಡದ ಅರ್ಧ ಬ್ಯಾಟರ್‌ಗಳು ಔಟಾದರು. ಕುಶಾಲ್ ಭುರ್ಟೆಲ್ 4, ವಿಕೆಟ್ ಕೀಪರ್ ಆಸಿಫ್ ಶೇಖ್ 17, ನಾಯಕ ರೋಹಿತ್ ಪೌಡೆಲ್ 1, ಅನಿಲ್ ಸಾಹ್ 0, ಸಂದೀಪ್ ಜೊರಾ 1 ರನ್ ಔಟಾಗಿ ನಿರಾಸೆ ಮೂಡಿಸಿದರು. ಬಾಂಗ್ಲಾ ತಂಡ ಭರ್ಜರಿ ಗೆಲುವಿನ ವಿಶ್ವಾಸದಲ್ಲಿತ್ತು.

ಈ ಹಂತದಲ್ಲಿ ಒಂದಾದ ಕುಶಾಲ್ ಮಲ್ಲಾ (27) ಹಾಗೂ ದಿಪೆಂದ್ರ ಸಿಂಗ್ (25) 6ನೇ ವಿಕೆಟ್‌ಗೆ 52 ರನ್ ಜೊತೆಯಾಟವಾಡಿ ನೇಪಾಳಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಆದರೆ, ಈ ವೇಳೆ ದಾಳಿಗಿಳಿದ ಮುಸ್ತಾಫಿಜರ್ ಈ ಇಬ್ಬರನ್ನೂ ಔಟ್ ಮಾಡುವ ಮೂಲಕ ನೇಪಾಳಕ್ಕೆ ಆಘಾತ ನೀಡಿದರು.

ಬಳಿಕ ಕೆಳ ಕ್ರಮಾಂಕದ ಆಟಗಾರರಲ್ಲಿ ಮೂವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರಿಂದ ನೇಪಾಳ 85 ರನ್‌ಗೆ ಆಲೌಟ್ ಆಗುವ ಮೂಲಕ ಮತ್ತೊಂದು ಆಘಾತಕಾರಿ ಸೋಲು ಕಂಡಿತು. ಈ ಹಿಂದಿನ ಪಂದ್ಯದಲ್ಲಿಯೂ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 1 ರನ್ ಅಂತರದಿಂದ ಸೋತಿತ್ತು.

ಬಾಂಗ್ಲಾ ಪರ ತಂಜಿಮ್ ಹಸನ್ ಶಕಿಬ್ 7/4, ಮುಸ್ತಾಫಿಜರ್ ರಹ್ಮಾನ್ 7/ 3 ಹಾಗೂ ಶಕಿಬ್ ಉಲ್ ಹಸನ್ 2 ವಿಕೆಟ್ ಪಡೆದು ಗೆಲುವಿನ ರೂವಾರಿಯಾಯಿತು.

ಬಾಂಗ್ಲಾದೇಶ ತಂಡವು ಸೂಪರ್ – 8 ಹಂತದಲ್ಲಿ ಭಾರತ, ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಪ್ಯಾರಾ ಗೇಮ್ಸ್‌ | 192 ಕೆಜಿ ಭಾರ ಎತ್ತಿ ಬೆಳ್ಳಿ ಗೆದ್ದ ಅಶೋಕ್ ಮಲಿಕ್

ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ 65 ಕೆಜಿ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ...

‘ಜೈಲರ್ 2’ ಸಿನಿಮಾ ವೀಕ್ಷಿಸಲು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ ಸಂಜು ಸ್ಯಾಮ್ಸನ್!

ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ಚಿತ್ರ 'ಜೈಲರ್ 2' ಸಿನಿಮಾವನ್ನು...

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ: ಮೊದಲ ದಿನವೇ 4 ಚಿನ್ನ ಸೇರಿ 11 ಪದಕಗಳ ಸಾಧನೆ!

ಜಪಾನ್‌ನ ಐಚಿ–ನಾಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತ ಭರ್ಜರಿ...

ವಿಶ್ವಕಪ್ ಸಿದ್ಧತೆಗೆ ಕಿವೀಸ್ ಸರಣಿ ಪರೀಕ್ಷೆ: ಗಿಲ್– ಶ್ರೇಯಸ್ ನಾಯಕತ್ವದಲ್ಲಿ ಟೀಂ ಇಂಡಿಯಾ ಸಜ್ಜು

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಬಹುನಿರೀಕ್ಷಿತ ಕ್ರಿಕೆಟ್ ಸರಣಿಗೆ ಕ್ಷಣಗಣನೆ ಆರಂಭವಾಗಿದೆ....