ಐಪಿಎಲ್‌ 2023 | ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 200 ರನ್‌ ಗುರಿ

Date:

Advertisements

ಆರಂಭಿಕರಾದ ಯಶಸ್ವಿ ಜೈಸ್ವಾಲ್‌ ಮತ್ತು ಜಾಸ್‌ ಬಟ್ಲರ್‌ ಗಳಿಸಿದ ಅರ್ಧ ಶತಕದ ಬಲದಲ್ಲಿ ಮಿಂಚಿದ ರಾಜಸ್ಥಾನ ರಾಯಲ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 200 ರನ್‌ ಗೆಲುವಿನ ಗುರಿ ಮುಂದಿಟ್ಟಿದೆ.

ಗುವಾಹಟಿಯಲ್ಲಿ ನಡೆಯುತ್ತಿರುವ ಐಪಿಎಲ್‌ 16ನೇ ಆವೃತ್ತಿಯ 11ನೇ ಪಂದ್ಯದ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌, ಸಂಜು ಸ್ಯಾಮ್ಸನ್‌ ಬಳಗವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು.

ಇನ್ನಿಂಗ್ಸ್‌ ಆರಂಭಿಸಿದ್ದ  ಯಶಸ್ವಿ ಜೈಸ್ವಾಲ್‌ 60 ರನ್‌ ಮತ್ತು ಜಾಸ್‌ ಬಟ್ಲರ್‌ 79 ರನ್‌ (ಇಬ್ಬರೂ ತಲಾ 11 ಬೌಂಡರಿ ಮತ್ತು 1 ಸಿಕ್ಸರ್)‌ಮೊದಲ ವಿಕೆಟ್‌ಗೆ 8.3 ಓವರ್‌ಗಳಲ್ಲೇ 98 ರನ್‌ ಗಳಿಸಿತ್ತು. ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ಸಂಜು ಸ್ಯಾಮ್ಸನ್‌ ಖಾತೆ ತರೆಯುವ ಮುನ್ನವೇ ಕಲ್‌ದೀಪ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು.

ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ 21 ಎಸೆತಗಳಲ್ಲಿ 4 ಸಿಕ್ಸರ್‌ ಮತ್ತು ಒಂದು ಬೌಂಡರಿ ಮೂಲಕ 39 ರನ್‌ಗಳಿಸಿ ರಾಯಲ್ಸ್‌ ಮೊತ್ತವನ್ನು 199ಕ್ಕೆ ಕೊಂಡೊಯ್ದರು. ಡೆಲ್ಲಿ ಪರ ಮುಕೇಶ್‌ ಕುಮಾರ್‌ 2 ಮತ್ತು ಕುಲ್‌ದೀಪ್‌ ಯಾದವ್‌ ಮತ್ತು ರೋವ್‌ಮನ್‌ ಪೊವೆಲ್‌ ತಲಾ ಒಂದು ವಿಕೆಟ್‌ ಪಡೆದರು.

ಐಪಿಎಲ್‌ ಪ್ರಸಕ್ತ ಆವೃತ್ತಿಯಲ್ಲಿ ಸತತ 2 ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌, ಮೂರನೇ ಪಂದ್ಯದಲ್ಲಿ ಹ್ಯಾಟ್ರಿ ಸೋಲು ತಪ್ಪಿಸಿಕೊಳ್ಳಬೇಕದಾದ ಒತ್ತಡದಲ್ಲಿದೆ. ಆದರೆ ರಾಜಸ್ಥಾನ ತಂಡ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಟೂರ್ನಿಯಲ್ಲಿ ಹೈದರಾಬಾದ್‌ ತಂಡದ ವಿರುದ್ಧ ಭರ್ಜರಿ ಗೆಲುವಿನ ಆರಂಭ ಪಡೆದಿದ್ದ ರಾಯಲ್‌, ಎರಡನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಹೋರಾಡಿ ಶರಣಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರೀಡಾ ಮೈದಾನದಲ್ಲೂ ಆಪರೇಷನ್ ಸಿಂಧೂರ: ಪಾಕಿಸ್ತಾನದ ಕಾಲೆಳೆದ ಪ್ರಧಾನಿ ಮೋದಿ

ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಏಷ್ಯಾ ಕಪ್ ಗೆದ್ದ ಬೆನ್ನಲ್ಲೇ ಪ್ರಧಾನಿ...

ಏಪ್ಯಾ ಕಪ್ ಫೈನಲ್ : ಪಾಕ್ ವಿರುದ್ಧ ಟೀಮ್ ಇಂಡಿಯಾಗೆ ರೋಚಕ ಜಯ; 9ನೇ ಬಾರಿ ಚಾಂಪಿಯನ್

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಏಪ್ಯಾ ಕಪ್ ಫೈನಲ್...

ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಆಯ್ಕೆ; ಯಾರಿವರು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ...

ಶೀತಲ್ ದೇವಿಗೆ ಐತಿಹಾಸಿಕ ಚಿನ್ನ; ವಿಶ್ವ ಪ್ಯಾರಾ ಆರ್ಚರಿಯಲ್ಲಿ ಭಾರತದ ಹೆಮ್ಮೆ

ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ನಡೆದ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ...

Download Eedina App Android / iOS

X