14 ಎಸೆತಗಳಲ್ಲಿ ಅರ್ಧಶತಕ: ಮೆಕ್‌ಗರ್ಕ್‌ ಸಿಡಿಲಾಟ, ವೈಭವ್‌ ವಿಶ್ವದಾಖಲೆ ಅಬಾಧಿತ

Date:

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದೇಶೀಯ ಏಕದಿನ ಕಪ್‌ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕದ ದಾಖಲೆ ನಿರ್ಮಿಸಿದ್ದಾರೆ. ಶನಿವಾರ ಇಲ್ಲಿನ ಕರೆನ್‌ ರೋಲ್ಟನ್‌ ಓವಲ್‌ನಲ್ಲಿ ಕ್ವೀನ್ಸ್‌ಲ್ಯಾಂಡ್‌ ವಿರುದ್ಧ ದಕ್ಷಿಣ ಆಸ್ಟ್ರೇಲಿಯಾ ಪರ ಆಡಿದ ಅವರು, ಆರಂಭದಿಂದಲೇ ಬಿರುಸಿನ ಹೊಡೆತಗಳ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

- Advertisement -

ಆದರೆ, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕದ ವಿಶ್ವದಾಖಲೆ ಭಾರತದ ವೈಭವ್‌ ಸೂರ್ಯವಂಶಿ ಹೆಸರಿನಲ್ಲೇ ಉಳಿದಿದೆ. ಅವರು ಜೂನ್‌ 21ರಂದು ದಂಬುಲ್ಲಾದಲ್ಲಿ ಶ್ರೀಲಂಕಾ ಎ ವಿರುದ್ಧ ನಡೆದ ತ್ರಿಕೋನ ಸರಣಿ ಫೈನಲ್‌ನಲ್ಲಿ ಭಾರತ ಎ ಪರ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಆ ಪಂದ್ಯದಲ್ಲಿ ವೈಭವ್‌ 29 ಎಸೆತಗಳಲ್ಲಿ 94 ರನ್‌ ಗಳಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಮೆಕ್‌ಗರ್ಕ್‌ ತಮ್ಮ ಸ್ಫೋಟಕ ಆಟವನ್ನು ಶತಕವಾಗಿಯೂ ಪರಿವರ್ತಿಸಿದರು. 49 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಒಟ್ಟು 63 ಎಸೆತಗಳಲ್ಲಿ 122 ರನ್‌ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 9 ಸಿಕ್ಸರ್‌ಗಳಿದ್ದವು. ಇದು ಆಸ್ಟ್ರೇಲಿಯಾದ ದೇಶೀಯ ಏಕದಿನ ಟೂರ್ನಿಯ ಮೂರನೇ ಅತಿವೇಗದ ಶತಕವಾಗಿದ್ದು, ತಂಡಕ್ಕೆ ದೊಡ್ಡ ಮೊತ್ತ ಕಲೆಹಾಕಲು ಭದ್ರ ಬುನಾದಿ ಒದಗಿಸಿತು.

ಮೊದಲ 21 ಎಸೆತಗಳಲ್ಲೇ 74 ರನ್‌ ಗಳಿಸಿದ್ದ ಮೆಕ್‌ಗರ್ಕ್‌, ನಂತರದ 28 ಎಸೆತಗಳಲ್ಲಿ 26 ರನ್‌ ಸೇರಿಸಿ ಶತಕ ತಲುಪಿದರು. ಇದೇ ಮೈದಾನದಲ್ಲಿ 2023ರಲ್ಲಿ ಟಾಸ್ಮೇನಿಯಾ ವಿರುದ್ಧ 29 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅವರ ವಿಶ್ವದಾಖಲೆಯೂ ಅಬಾಧಿತವಾಗಿದೆ. ಆರಂಭಿಕ ಜೊತೆಗಾರ ಮೆಕೆಂಜಿ ಹಾರ್ವಿ ಅವರೊಂದಿಗೆ ಮೊದಲ ವಿಕೆಟ್‌ಗೆ 129 ರನ್‌ಗಳ ಜೊತೆಯಾಟವನ್ನೂ ಅವರು ಕಟ್ಟಿದರು.

ನಾಯಕ ನಾಥನ್‌ ಮೆಕ್‌ಸ್ವೀನಿ 106 ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಜೇಕ್‌ ಲೆಹ್ಮನ್‌ 58 ಹಾಗೂ ಹಾರ್ವಿ 35 ಎಸೆತಗಳಲ್ಲಿ 46 ರನ್‌ಗಳ ಕೊಡುಗೆ ನೀಡಿದರು. ಮೆಕ್‌ಸ್ವೀನಿ ಮತ್ತು ಲೆಹ್ಮನ್‌ ಐದನೇ ವಿಕೆಟ್‌ಗೆ 115 ರನ್‌ ಸೇರಿಸಿದರು. ದಕ್ಷಿಣ ಆಸ್ಟ್ರೇಲಿಯಾ 7 ವಿಕೆಟ್‌ಗೆ 397 ರನ್‌ ಕಲೆಹಾಕಿತು. ಇದು ತಂಡದ ಮೂರನೇ ಗರಿಷ್ಠ ಏಕದಿನ ಮೊತ್ತವಾಗಿದೆ.

398 ರನ್‌ಗಳ ಗುರಿ ಬೆನ್ನತ್ತಿದ ಕ್ವೀನ್ಸ್‌ಲ್ಯಾಂಡ್‌ 40.1 ಓವರ್‌ಗಳಲ್ಲಿ 271 ರನ್‌ಗೆ ಆಲೌಟ್‌ ಆಯಿತು. ಲ್ಯಾಕ್ಲನ್‌ ಹರ್ನ್‌ 121 ರನ್‌ ಗಳಿಸಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ದಕ್ಷಿಣ ಆಸ್ಟ್ರೇಲಿಯಾದ ಎಡಗೈ ವೇಗಿ ಸ್ಪೆನ್ಸರ್‌ ಜಾನ್ಸನ್‌ 59 ರನ್‌ಗೆ 5 ವಿಕೆಟ್‌ ಕಬಳಿಸಿ ಜೀವನಶ್ರೇಷ್ಠ ಸಾಧನೆಗೈದರು. ಇದರೊಂದಿಗೆ ದಕ್ಷಿಣ ಆಸ್ಟ್ರೇಲಿಯಾ 126 ರನ್‌ಗಳ ಭರ್ಜರಿ ಜಯ ಸಾಧಿಸಿ, ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ ಸಿಗದ ಎಬಿವಿಪಿ ಪಾತ್ರದ ಪ್ರಶ್ನೆಗಳು

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ...

ಶಿವಮೊಗ್ಗ | ಮಾದಕ ದ್ರವ್ಯಗಳ ಸೇವನೆ ವಿರುದ್ದ ಪ್ರತಿಜ್ಞೆಗೆ ಕರೆ

ಮಾದಕ ದ್ರವ್ಯಗಳ ದುರುಪಯೋಗವು ವ್ಯಕ್ತಿಯ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ...

ಪತ್ರಕರ್ತರ ಮೇಲಿನ ಪೊಲೀಸ್‌ ದಾಳಿಗೆ ಡಿಎಸ್‌ಜೆಎ ಖಂಡನೆ; ಪ್ರೆಸ್ ಕೌನ್ಸಿಲ್‌ನಿಂದ ಮಾರ್ಗಸೂಚಿ ಪ್ರಕಟ

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಪೊಲೀಸ್ ಕ್ರಮಗಳನ್ನು ವರದಿ ಮಾಡುತ್ತಿರುವ ಪತ್ರಕರ್ತರ...

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ ಸುರಕ್ಷತೆಗೆ ಬೇಕಿದೆ ತುರ್ತು ಕ್ರಮ

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ...