8 ವರ್ಷಗಳ ಬಳಿಕ ಭಾರತಕ್ಕೆ ಹಾಕಿ ಏಷ್ಯಾ ಕಪ್‌ ಕಿರೀಟ, ವಿಶ್ವಕಪ್‌ಗೆ ಅರ್ಹತೆ

Date:

Advertisements

ಏಷ್ಯಾಕಪ್ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇತಿಹಾಸ ಬರೆದಿದ್ದು, ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಮಣಿಸಿ 8 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದೆ.

ಬಿಹಾರದ ರಾಜಗೀರ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರಂಭದಿಂದಲೂ ಅಕ್ರಮಣಕಾರಿ ಆಟಕ್ಕೆ ಮಂದಾದ ಆತಿಥೇಯ ತಂಡ ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ.

2025ರ ಹಾಕಿ ಏಷ್ಯಾಕಪ್ ಫೈನಲ್​ನಲ್ಲಿ ಹರ್ಮನ್​​ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡ, ಈ ಟೂರ್ನಿಯಲ್ಲಿ ಅಜೇಯ ತಂಡವಾಗಿ ಫೈನಲ್​ ಪ್ರವೇಶಿಸಿ 8 ವರ್ಷಗಳ ಬಳಿಕ ನಾಲ್ಕನೇ ಬಾರಿಗೆ ಏಷ್ಯಾಕಪ್ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ಮುಂದಿನ ವರ್ಷ ನಡೆಯಲಿರುವ ಹಾಕಿ ವಿಶ್ವಕಪ್ ಗೆ ಅರ್ಹತೆಯನ್ನೂ ಪಡೆದಿದೆ.

2003, 2007 ಹಾಗೂ 2017ರಲ್ಲಿ ಚಾಂಪಿಯನ್‌ ಆಗಿದ್ದ ಭಾರತ, ಈಗ 8 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೂ ನೀಗಿಸುವ ಮೂಲಕ 4ನೇ ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಭಾರತ ತಂಡ ತನ್ನ ಹಾಕಿ ಸ್ವರ್ಣಯುಗವನ್ನು ಮತ್ತೆ ನೆನಪಿಸಿದೆ.

ಭಾರತ ತಂಡದ ಪರ ದಿಲ್‌ಪ್ರೀತ್‌ಸಿಗ್‌ (28, 45ನೇ ನಿಮಿಷ) ಅವರಲ್ಲದೆ, ಸುಖ್‌ಜೀತ್‌ ಸಿಂಗ್‌(1ನೇ ನಿ.) ಮತ್ತು ಅಮಿತ್‌ ರೋಹಿದಾಸ್‌(50ನೇ ನಿ.) ತಲಾ ಒಂದು ಗೋಲ್‌ ಗಳಿಸಿ ಜಯದ ರೂವಾರಿಯೆನಿಸಿದರು. ಅತ್ತ ಕೊರಿಯಾ ಪರ ಡಯಾನ್‌ ಸನ್‌(51) ಏಕೈಕ ಗೋಲ್‌ ಗಳಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಆಯ್ಕೆ; ಯಾರಿವರು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ...

ಶೀತಲ್ ದೇವಿಗೆ ಐತಿಹಾಸಿಕ ಚಿನ್ನ; ವಿಶ್ವ ಪ್ಯಾರಾ ಆರ್ಚರಿಯಲ್ಲಿ ಭಾರತದ ಹೆಮ್ಮೆ

ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ನಡೆದ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ...

Asia CUP2025 | ‘ಸೂಪರ್ ಓವರ್’ ಪಂದ್ಯದಲ್ಲಿ ಲಂಕಾ ಮಣಿಸಿ, ಫೈನಲ್‌ಗೆ ಭಾರತ ಲಗ್ಗೆ

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಏಷ್ಯಾ ಕಪ್‌ ಕ್ರಿಕೆಟ್‌...

Download Eedina App Android / iOS

X