ಐಸಿಸಿ ಪುರುಷರ ಟೆಸ್ಟ್ ಶ್ರೇಯಾಂಕದಲ್ಲಿ ಇತ್ತೀಚೆಗೆ ಅಗ್ರಸ್ಥಾನ ಕಳೆದುಕೊಂಡಿದ್ದ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಅವರು ಮತ್ತೆ ಅಗ್ರಸ್ಥಾನಿಯಾಗಿ ಮರಳಿದ್ದಾರೆ. ಅದೂ ಕೇವಲ ಒಂದೇ ವಾರದಲ್ಲಿ ಅಗ್ರಸ್ಥಾನವನ್ನು ಮರಳಿ ಪಡೆದಿದ್ದಾರೆ.
ದುಬೈನಲ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದೆ. ಪಟ್ಟಿಯಲ್ಲಿ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ 34ನೇ ಸ್ಥಾನಕ್ಕೆ ಏರಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರನೇ ಪಂದ್ಯದಲ್ಲಿ 104 ರನ್‌ಗಳನ್ನು ಗಳಿಸಿದ ರೂಟ್ ಇಂಗ್ಲೆಂಡ್ ಗೆಲುವಿಗೆ ಪ್ರಧಾನ ಪಾತ್ರ ವಹಿಸಿದರು. ಮಾತ್ರವಲ್ಲದೆ, ಪಟ್ಟಿಯಲ್ಲಿ ತಮ್ಮ ಅಗ್ರಸ್ಥಾನವನ್ನು ಮರಳಿ ಪಡೆದರು.
34 ವರ್ಷದ ರೂಟ್ ಅವರು 2014ರ ಡಿಸೆಂಬರ್‌ನಲ್ಲಿ ಕುಮಾರ್ ಸಂಗಕ್ಕಾರ್ ಅವರ ದಾಖಲೆಯನ್ನು ಮುರಿದು, ನಂ.1 ಟೆಸ್ಟ್ ಬ್ಯಾಟ್ಸ್‌ಮನ್ ಸ್ಥಾನ ಪಡೆದುಕೊಂಡಿದ್ದರು. ಇತ್ತೀಚೆಗೆ, ಹ್ಯಾರಿ ಬ್ರೂಕ್ ಅವರು ರೂಟ್ ಅವರನ್ನು ಹಿಂದಿಕ್ಕಿ, ಅಗ್ರಸ್ಥಾನಕ್ಕೆ ಏರಿದ್ದರು. ಆದರೆ, ಒಂದೇ ವಾರದಲ್ಲಿ ರೂಟ್ ಮತ್ತೆ ಅಗ್ರಸ್ಥಾನ ಗಳಿಸಿದ್ದಾರೆ. ಇನ್ನು, ಕೇನ್ ವಿಲಿಯಮ್ಸನ್ 2ನೇ ಸ್ಥಾನಕ್ಕೆ ಜಿಗಿದಿದ್ದರೆ, ಹ್ಯಾರಿ ಬ್ರೂಕ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 72 ರನ್ ಮತ್ತು 61 ರನ್‌ಗಳನ್ನು ಗಳಿಸಿದ ಜಡೇಜಾ ಅವರು ಐದು ಸ್ಥಾನಗಳ ಜಿಗಿತ ಕಂಡಿದ್ದು, 34ನೇ ಸ್ಥಾನಕ್ಕೆ ಏರಿದ್ದಾರೆ. 100 ಮತ್ತು 39 ರನ್ ಗಳಿಸಿದ್ದ ಕೆ.ಎಲ್ ರಾಹುಲ್ 35ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ವೇಗಿ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಅಗ್ರಸ್ಥಾನದಲ್ಲಿ ಭದ್ರವಾಗಿದ್ದಾರೆ.