ಕ್ರಿಸ್‌ ಗೇಲ್‌ಗೆ ಐಪಿಎಲ್‌ನಲ್ಲಿ ಕಹಿ ಅನುಭವ: ಕಣ್ಣೀರಿಟ್ಟು ತಂಡ ತೊರೆದಿದ್ದ ದಿಗ್ಗಜ ಆಟಗಾರ

Date:

Advertisements

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸ್ಪೋಟಕ ಆಟಗಾರ ಕ್ರಿಸ್‌ ಗೇಲ್‌ ಅವರು ಈ ಹಿಂದೆ ಐಪಿಎಲ್‌ ನಲ್ಲಿ ಕಮಾಲ್‌ ಮಾಡಿದವರು. ಕೋಲ್ಕತ್ತಾ ನೈಟ್‌ ರೈಡರ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ಪರವಾಗಿ ಗೇಲ್‌ ಐಪಿಎಲ್‌ ಆಡಿ ಹಲವು ದಾಖಲೆಗಳನ್ನು ಬರೆದಿದ್ದರು. ಆದರೆ ಅಂತಿಮ ಹಂತದಲ್ಲಿ ಅವರಿಗಾದ ಕಹಿ ಅನುಭವದ ಬಗ್ಗೆ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ತಂಡದಿಂದ ನಿವೃತ್ತಿ ಹೊಂದಿರುವ 45ರ ಹರೆಯದ ಜಮೈಕದ ಆಟಗಾರ ಗೇಲ್‌, ತಾನು ಹಿಂದೆ ಆಡಿದ್ದ ಫ್ರಾಂಚೈಸಿ ಬಗ್ಗೆ ಮಾತನಾಡಿದ್ದಾರೆ. ಅಲ್ಲಿ ಆದ ಅವಮಾನದ ಬಗ್ಗೆ ಶುಭಾಂಕರ್‌ ಮಿಶ್ರಾ ಪಾಡ್‌ಕಾಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಗೇಲ್ ಟಿ20 ಕ್ರಿಕೆಟ್‌ನಲ್ಲಿ ಐಕಾನ್ ಆಗಿ ಉಳಿದಿದ್ದರೂ, ಪಂಜಾಬ್ ಕಿಂಗ್ಸ್ ತಂಡದಿಂದ ‘ಅಗೌರವ’ ಅನುಭವಿಸಿದ್ದಾರೆಂದು ಅವರು ಹೇಳಿಕೊಂಡರು. ಗೇಲ್ ಮುಖ್ಯವಾಗಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 2018 ರಿಂದ 2021 ರವರೆಗೆ ಪಂಜಾಬ್‌ ಕಿಂಗ್ಸ್ ಪರ ಆಡಿದ್ದರು. ಪಂಜಾಬ್‌ ಪರ ಗೇಲ್ ಒಟ್ಟು 41 ಪಂದ್ಯಗಳನ್ನು ಆಡಿದ್ದರು. ಈ ವೇಳೆ ಸರಾಸರಿ 40.75 ಮತ್ತು 148.65 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 1,304 ರನ್ ಗಳಿಸಿದ್ದರು. ಈ ಸಮಯದಲ್ಲಿ ಅವರು ಒಂದು ಶತಕ ಮತ್ತು 11 ಅರ್ಧ ಶತಕ ಬಾರಿಸಿದ್ದರು.

ಗೇಲ್ ಟಿ20 ಕ್ರಿಕೆಟ್‌ನಲ್ಲಿ ಐಕಾನ್ ಆಗಿ ಉಳಿದಿದ್ದರೂ, ಪಂಜಾಬ್ ಕಿಂಗ್ಸ್ ತಂಡದಿಂದ ‘ಅಗೌರವ’ ಅನುಭವಿಸಿದ್ದಾರೆಂದು ಅವರು ಹೇಳಿಕೊಂಡರು. ಗೇಲ್ ಮುಖ್ಯವಾಗಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 2018 ರಿಂದ 2021 ರವರೆಗೆ ಕಿಂಗ್ಸ್ ಪರ ಆಡಿದ್ದರು. ಪಂಜಾಬ್‌ ಪರ ಗೇಲ್ ಒಟ್ಟು 41 ಪಂದ್ಯಗಳನ್ನು ಆಡಿದ್ದರು. ಈ ವೇಳೆ ಸರಾಸರಿ 40.75 ಮತ್ತು 148.65 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 1,304 ರನ್ ಗಳಿಸಿದ್ದರು. ಈ ಸಮಯದಲ್ಲಿ ಅವರು ಒಂದು ಶತಕ ಮತ್ತು 11 ಅರ್ಧ ಶತಕ ಬಾರಿಸಿದ್ದರು.

ಇದನ್ನು ಓದಿದ್ದೀರಾ? ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಇತಿಹಾಸ ನಿರ್ಮಿಸಿ ಪದಕ ಗೆದ್ದ ಸಾತ್ವಿಕ್‌–ಚಿರಾಗ್

ತಂಡದ ಆಗಿನ ಕೋಚ್‌ ಅನಿಲ್‌ ಕುಂಬ್ಳೆ ಜೊತೆಗಿನ ಸಂಭಾಷಣೆಯೊಂದರಲ್ಲಿ ಗೇಲ್‌ ಭಾವುಕರಾಗಿ ಕಣ್ಣೀರಿಟ್ಟಿದ್ದಾಗಿ ಬಹಿರಂಗಪಡಿಸಿದ್ದಾರೆ. “ನಾನು ಅನಿಲ್‌ ಕುಂಬ್ಳೆ ಜೊತೆ ಮಾತನಾಡುವಾಗ ಕಣ್ಣೀರಿಟ್ಟೆ. ತಂಡದ ವ್ಯವಸ್ಥೆ ಮತ್ತು ನನ್ನನ್ನು ನಡೆಸಿಕೊಂಡ ರೀತಿಯಿಂದ ನಾನು ನಿಜವಾಗಿಯೂ ನೊಂದಿದ್ದೆ,” ಎಂದು ಗೇಲ್‌ ಹೇಳಿದ್ದಾರೆ.

ತಮ್ಮನ್ನು “ಚಿಕ್ಕ ಮಕ್ಕಳಂತೆ” ಪರಿಗಣಿಸಲಾಯಿತು. ತಮ್ಮ ಹಿರಿತನದ ಸ್ಥಾನಮಾನ ಮತ್ತು ಐಪಿಎಲ್‌ಗೆ ನೀಡಿದ ಕೊಡುಗೆಗೆ ಗೌರವ ದೊರಕಲಿಲ್ಲ. ಈ ಅವಮಾನದಿಂದ ಮಾನಸಿಕವಾಗಿ ಕುಗ್ಗಿದ್ದಾಗಿ ಗೇಲ್ ಹೇಳಿಕೊಂಡಿದ್ದಾರೆ.

2021ರ ಐಪಿಎಲ್‌ ಆವೃತ್ತಿಯಲ್ಲಿ, ಕೋವಿಡ್‌-19ರ ಕಾರಣದಿಂದಾಗಿ ಬಯೋ-ಬಬಲ್‌ ನಿರ್ಬಂಧಗಳಲ್ಲಿ ಆಡುವಾಗ ಗೇಲ್‌ ಮಾನಸಿಕ ಒತ್ತಡಕ್ಕೊಳಗಾಗಿದ್ದರು. ಆಗಿನ ತಂಡದ ನಾಯಕ ಕೆ.ಎಲ್‌. ರಾಹುಲ್‌, ಗೇಲ್‌ ಅವರನ್ನು ಉಳಿಯಲು ಒತ್ತಾಯಿಸಿದರೂ, “ನಿಮಗೆ ಶುಭವಾಗಲಿ” ಎಂದು ಹೇಳಿ, ಗೇಲ್‌ ತಮ್ಮ ಬ್ಯಾಗ್‌ ಪ್ಯಾಕ್‌ ಮಾಡಿ ತಂಡವನ್ನು ತೊರೆದಿರುವುದಾಗಿ ಹೇಳಿದ್ದಾರೆ.

“ಆ ಸಂದರ್ಭದಲ್ಲಿ ಹಣಕ್ಕಿಂತ ಮಾನಸಿಕ ಆರೋಗ್ಯವೇ ಮುಖ್ಯವಾಯಿತು. ನಾನು ಒಳಗಿನಿಂದ ಕುಸಿಯುತ್ತಿದ್ದೆ,” ಎಂದು ಅವರು ತಿಳಿಸಿದ್ದಾರೆ.

ಆದರೆ, ಪಂಜಾಬ್‌ ಕಿಂಗ್ಸ್‌ನಿಂದ ಕೊನೆಗೊಂಡ ಅವರ ಐಪಿಎಲ್‌ ಪಯಣವು ಕಹಿ ಗಾಯಗಳನ್ನು ಉಂಟುಮಾಡಿದೆ. “ನಾನು ಮೊದಲ ಬಾರಿಗೆ ಖಿನ್ನತೆಗೆ ಒಳಗಾಗಿದ್ದೆ. ಒಳಗಿನಿಂದ ನಾನು ಕುಗ್ಗಿ ಹೋಗಿದ್ದೆ,” ಎಂದು ಗೇಲ್‌ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

ಗೇಲ್‌ ಐಪಿಎಲ್‌ನಲ್ಲಿ ಒಟ್ಟು 142 ಪಂದ್ಯಗಳಲ್ಲಿ 4,965 ರನ್‌ ಗಳಿಸಿದ್ದಾರೆ, ಇದರಲ್ಲಿ ಐಪಿಎಲ್‌ ಇತಿಹಾಸದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್‌ ಅಜೇಯ 175 ಸೇರಿದೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳೊಂದಿಗಿನ ಯಶಸ್ಸು ಅವರನ್ನು ಟಿ20 ದಂತಕಥೆಯನ್ನಾಗಿ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಆಯ್ಕೆ; ಯಾರಿವರು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ...

ಶೀತಲ್ ದೇವಿಗೆ ಐತಿಹಾಸಿಕ ಚಿನ್ನ; ವಿಶ್ವ ಪ್ಯಾರಾ ಆರ್ಚರಿಯಲ್ಲಿ ಭಾರತದ ಹೆಮ್ಮೆ

ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ನಡೆದ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ...

Asia CUP2025 | ‘ಸೂಪರ್ ಓವರ್’ ಪಂದ್ಯದಲ್ಲಿ ಲಂಕಾ ಮಣಿಸಿ, ಫೈನಲ್‌ಗೆ ಭಾರತ ಲಗ್ಗೆ

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಏಷ್ಯಾ ಕಪ್‌ ಕ್ರಿಕೆಟ್‌...

Download Eedina App Android / iOS

X