ಕ್ರಿಕೆಟ್‌ ಸಂಭ್ರಮಕ್ಕೆ ಸಜ್ಜಾದ ಯುಎಇ | 20 ದಿನ, 8 ತಂಡಗಳು, 2 ಮೈದಾನ: ಚಾಂಪಿಯನ್ಸ್ ಯಾರು?

Date:

Advertisements
ಈ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಕ್ರಿಕೆಟ್ ಹಬ್ಬದ ಕೇಂದ್ರವಾಗಿದ್ದು, ಸೆಪ್ಟೆಂಬರ್ 9ರಿಂದ 28ರವರೆಗೆ ನಡೆಯಲಿದೆ. 20 ದಿನಗಳ ಕಾಲ ಕ್ರೀಡಾ ಪ್ರೇಮಿಗಳಿಗೆ ಸತತ ರೋಚಕ ಪಂದ್ಯಗಳ ಪರ್ವ ಏರ್ಪಟ್ಟಿದೆ.

ಕ್ರಿಕೆಟ್ ಪ್ರೇಮಿಗಳಿಗಾಗಿಯೇ ಕಾದು ಕಾದು ನೋಡುವಂತಹ ಟೂರ್ನಿಗಳಲ್ಲಿ ಏಷ್ಯಾ ಕಪ್ ಒಂದು ವಿಶೇಷ ಸ್ಥಾನಮಾನ ಹೊಂದಿದೆ. ಏಷ್ಯಾದ ಅತ್ಯುತ್ತಮ ತಂಡಗಳು ಪರಸ್ಪರ ಎದುರಾಗುವ ಈ ಕಪ್ ಇತಿಹಾಸದಲ್ಲಿ ಈಗಾಗಲೇ 16 ಆವೃತ್ತಿಗಳು ಪೂರ್ಣಗೊಂಡಿದ್ದು, 2025ರಲ್ಲಿ ನಡೆಯುತ್ತಿರುವುದು 17ನೇ ಆವೃತ್ತಿ. ಈ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಕ್ರಿಕೆಟ್ ಹಬ್ಬದ ಕೇಂದ್ರವಾಗಿದ್ದು, ಸೆಪ್ಟೆಂಬರ್ 9ರಿಂದ 28ರವರೆಗೆ ನಡೆಯಲಿದೆ. 20 ದಿನಗಳ ಕಾಲ ಕ್ರೀಡಾ ಪ್ರೇಮಿಗಳಿಗೆ ಸತತ ರೋಚಕ ಪಂದ್ಯಗಳ ಪರ್ವ ಏರ್ಪಟ್ಟಿದೆ.

ಏಷ್ಯಾ ಕಪ್‌ನ ಇತಿಹಾಸವು 1984ರಲ್ಲಿ ಆರಂಭವಾಗಿ, ಇದುವರಗೆ 16 ಆವೃತ್ತಿಗಳು ನಡೆದಿವೆ. ಈ ಟೂರ್ನಿಯು ಏಷ್ಯಾದ ಕ್ರಿಕೆಟ್‌ನ್ನು ವಿಶ್ವ ಮಟ್ಟಕ್ಕೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಭಾರತ ತಂಡವು ಈ ಟೂರ್ನಿಯಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ಒಟ್ಟು ಎಂಟು ಬಾರಿ ಚಾಂಪಿಯನ್ ಆಗಿದೆ. ಅದರಲ್ಲಿ ಏಳು ಬಾರಿ ಏಕದಿನ ಮಾದರಿಯಲ್ಲಿ ಮತ್ತು ಒಂದು ಬಾರಿ ಟಿ20 ಮಾದರಿಯಲ್ಲಿ ಗೆಲುವು ಸಾಧಿಸಿದೆ. ಶ್ರೀಲಂಕಾ ತಂಡವು ಎರಡನೇ ಸ್ಥಾನದಲ್ಲಿದ್ದು, ಆರು ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಪಾಕಿಸ್ತಾನ ತಂಡ 2 ಬಾರಿ ವಿಜೇತರಾಗಿದ್ದು, ಇತರ ತಂಡಗಳಾದ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಇಲ್ಲಿವರಗೆ ಯಾವುದೇ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.

ಈ ಟೂರ್ನಿಯು ಮೊದಲು ಶ್ರೀಲಂಕಾ, ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿ ನಡೆದಿದ್ದರೂ, ನಂತರದ ವರ್ಷಗಳಲ್ಲಿ ಯುಎಇಯಂತಹ ತಟಸ್ಥ ಸ್ಥಳಗಳಲ್ಲಿ ನಡೆಯುವುದು ಸಾಮಾನ್ಯವಾಗಿದೆ. 2023ರಲ್ಲಿ ಶ್ರೀಲಂಕಾದಲ್ಲಿ ನಡೆದ ಟೂರ್ನಿಯನ್ನು ಭಾರತ ಗೆದ್ದುಕೊಂಡಿತ್ತು, ಮತ್ತು ಈ ಬಾರಿ ಸಹ ಭಾರತವೇ ಗೆಲ್ಲುವ ತಂಡವೆನಿಸಿದೆ. ಆದರೂ ಇತರ ತಂಡಗಳನ್ನು ಈ ಬಾರಿ ಕಡೆಗಣಿಸುವಂತಿಲ್ಲ. ಟೂರ್ನಿಯ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳು ಯಾವಾಗಲೂ ಹೆಚ್ಚು ಆಸಕ್ತಿಯನ್ನು ಹುಟ್ಟಿಸಿವೆ, ಈ ಬಾರಿಯೂ ಅದೇ ಕುತೂಹಲ ಇಮ್ಮಡಿಸಲಿದೆ.

ಇದನ್ನು ಓದಿದ್ದೀರಾ? ಕ್ರಿಸ್‌ ಗೇಲ್‌ಗೆ ಐಪಿಎಲ್‌ನಲ್ಲಿ ಕಹಿ ಅನುಭವ: ಕಣ್ಣೀರಿಟ್ಟು ತಂಡ ತೊರೆದಿದ್ದ ದಿಗ್ಗಜ ಆಟಗಾರ

ಈ ಆವೃತ್ತಿಯ ಮಾದರಿ ಹೊಸತನದಿಂದ ಕೂಡಿದ್ದು, ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಒಮಾನ್, ಯುಎಇ, ಪಾಕಿಸ್ತಾನ ಮತ್ತು ಭಾರತ ತಂಡಗಳಿವೆ. ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಗ್‌ಕಾಂಗ್ ಮತ್ತು ಶ್ರೀಲಂಕಾ ತಂಡಗಳು ಸೇರಿವೆ. ಗುಂಪು ಹಂತದಲ್ಲಿ ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳು ಒಂದೊಂದು ಬಾರಿ ಎದುರಾಗಿ, ಒಟ್ಟು 12 ಪಂದ್ಯಗಳು ನಡೆಯುತ್ತವೆ. ಪ್ರತಿ ಗುಂಪಿನಿಂದ ಮೇಲಿನ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಮುನ್ನಡೆಯುತ್ತವೆ. ಸೂಪರ್ ಫೋರ್‌ನಲ್ಲಿ ನಾಲ್ಕು ತಂಡಗಳು ಒಂದೇ ಗುಂಪಾಗಿ ಆಡಿ, ಪ್ರತಿ ತಂಡ ಮತ್ತೊಂದು ಗುಂಪಿನ ಎರಡು ತಂಡಗಳನ್ನು ಎದುರಿಸಿ ನಾಲ್ಕು ಪಂದ್ಯಗಳು ನಡೆಯುತ್ತವೆ. ಈ ಹಂತದಲ್ಲಿ ಮೇಲಿನ ಎರಡು ತಂಡಗಳು ಸೆಪ್ಟೆಂಬರ್ 28ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಅಂತಿಮ ಪಂದ್ಯಕ್ಕೆ ತಲುಪುತ್ತವೆ. ಒಟ್ಟು 17 ಪಂದ್ಯಗಳು ನಡೆಯಲಿದ್ದು, ಗುಂಪು ಹಂತದಲ್ಲಿ 12, ಸೂಪರ್ ಫೋರ್ 4 ಮತ್ತು ಒಂದು ಫೈನಲ್‌ ಪಂದ್ಯ ನಡೆಯಲಿದೆ.

Asia cup 3

ಇಂದು ಅಫ್ಘಾನಿಸ್ತಾನ – ಹಾಂಗ್‌ಕಾಂಗ್ ಉದ್ಘಾಟನಾ ಪಂದ್ಯ

ಪಂದ್ಯಗಳು ಯುಎಇಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ ಮತ್ತು ಅಬುಧಾಬಿಯ ಶೇಖ್ ಜೈದ್ ನಗರಗಳಲ್ಲಿ ನಡೆಯಲಿದೆ. ದುಬೈ ಸ್ಟೇಡಿಯಂ ತನ್ನ ಆಧುನಿಕ ಸೌಲಭ್ಯಗಳು ಮತ್ತು ವೃತ್ತಾಕಾರದ ಆಕಾರದಿಂದ ಕ್ರಿಕೆಟ್ ಪ್ರಿಯರನ್ನು ಆಕರ್ಷಿಸುತ್ತದೆ. ಆದರೆ ಅಬುಧಾಬಿಯ ಶೇಖ್ ಜೈದ್ ಸ್ಟೇಡಿಯಂ ತನ್ನ ವಿಶಾಲತೆ ಮತ್ತು ಉತ್ತಮ ಪಿಚ್‌ಗಳಿಂದ ಪ್ರಸಿದ್ಧವಾಗಿದೆ. ಇಂದು ಅಫ್ಘಾನಿಸ್ತಾನ – ಹಾಂಗ್‌ಕಾಂಗ್ ನಡುವೆ ಅಬುಧಾಬಿಯಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು ಸಂಜೆ 8ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಬಹುಮಾನದ ಮೊತ್ತವು ಈ ಬಾರಿ ಗಮನಾರ್ಹವಾಗಿದ್ದು, ವಿಜೇತ ತಂಡಕ್ಕೆ 3,00,000 ಅಮೆರಿಕನ್ ಡಾಲರ್‌ಗಳು (ಸುಮಾರು 2.6 ಕೋಟಿ ರೂಪಾಯಿ) ನೀಡಲಾಗುತ್ತದೆ. ರನ್ನರ್-ಅಪ್ ತಂಡಕ್ಕೆ 1,50,000 ಡಾಲರ್‌ಗಳು (1.3 ಕೋಟಿ ರೂಪಾಯಿ) ಸಿಗುತ್ತದೆ. ಸರಣಿಯ ಉತ್ತಮ ಆಟಗಾರನಿಗೆ 12.5 ಲಕ್ಷ ರೂಪಾಯಿಗಳು ನೀಡಲಾಗುತ್ತದೆ.

ಭಾರತವೇ ಗೆಲ್ಲುವ ನೆಚ್ಚಿನ ತಂಡ

ತಂಡಗಳ ಬಗ್ಗೆ ಹೇಳುವುದಾದರೆ ಟೀಂ ಇಂಡಿಯಾ ಈ ಟೂರ್ನಿಯ ಗೆಲ್ಲುವ ತಂಡವಾಗಿದ್ದು, 2024ರ ಟಿ20 ವಿಶ್ವಕಪ್‌ ಗೆದ್ದ ನಂತರ ಉತ್ತಮ ಫಾರ್ಮ್‌ನಲ್ಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್‌ರೌಂಡರ್‌ಗಳಲ್ಲಿ ಸಮತೋಲನ ಕಾಯ್ದುಕೊಂಡಿದೆ.

ತಂಡದ ಸದಸ್ಯರು: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಮ್ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಜಸ್‌ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್‌ದೀಪ್‌ ಯಾದವ್, ಸಂಜು ಸ್ಯಾಮ್ಸನ್‌, ಹರ್ಷಿತ್ ರಾಣಾ, ರಿಂಕು ಸಿಂಗ್.

ಟೀಂ ಇಂಡಿಯಾ ಗುಂಪು ಎಯಲ್ಲಿ ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10ರಂದು ದುಬೈಯಲ್ಲಿ ಆಡಲಿದ್ದು, ಗೆಲುವು ಸಾಧಿಸುವ ನಿರೀಕ್ಷೆಯಿದೆ. ಸೆ.14 ರಂದು ಪ್ರಬಲ ಪಾಕಿಸ್ತಾನದ ವಿರುದ್ಧ ಆಡಲಿದೆ.

ಪಾಕಿಸ್ತಾನದಲ್ಲಿ ಯುವಕರ ತಂಡ

ಪಾಕಿಸ್ತಾನ ತಂಡವು ಸಲ್ಮಾನ್ ಅಘಾ ನಾಯಕತ್ವದಲ್ಲಿ ಹೊಸ ಆಟಗಾರರನ್ನು ಹೊಂದಿದೆ, ಅನುಭವಿಗಳಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಬಿಟ್ಟು ಯುವ ಆಟಗಾರರ ಮೇಲೆ ಒತ್ತು ನೀಡಿದೆ. ಇತ್ತೀಚಿಗೆ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸರಣಿಗಳನ್ನು ಗೆದ್ದಿದ್ದು, ಅಫ್ಘಾನಿಸ್ತಾನ ಮತ್ತು ಯುಎಇ ವಿರುದ್ಧದ ತ್ರಿಕೋನ ಸರಣಿಯ ಫೈನಲ್‌ನಲ್ಲಿ 75 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದು, ಟ್ರೋಫಿ ಗೆಲ್ಲುವ ಉತ್ಸಾಹವನ್ನು ಹೆಚ್ಚಿಸಿದೆ.

ತಂಡದ ಸದಸ್ಯರು: ಸಲ್ಮಾನ್ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶರಫ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೈನ್ ತಲತ್, ಖುಶ್ದೀಲ್ ಶಾ, ಮೊಹಮ್ಮದ್ ಹಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಸಹಿಬ್ಜಾದ ಫರ್ಹಾನ್, ಸೈಮ್ ಅಯುಬ್, ಸಲ್ಮಾನ್ ಮಿರ್ಜಾ, ಶಹೀನ್ ಅಫ್ರಿದಿ, ಸುಫಿಯನ್ ಮುಕೀಮ್, ಮೊಹಮ್ಮದ್ ವಾಸಿಮ್ ಜೂನಿಯರ್.

Asia cup 2

ಅಸಲಂಕಾ ನಾಯಕತ್ವದ ಶ್ರೀಲಂಕಾ ತಂಡ

ಶ್ರೀಲಂಕಾ ತಂಡವು ಚರಿತ್ ಅಸಲಂಕಾ ನಾಯಕತ್ವದಲ್ಲಿ ಸ್ಪಿನ್ ಬೌಲಿಂಗ್‌ನಲ್ಲಿ ಬಲಿಷ್ಠವಾಗಿದ್ದು, ಇತ್ತೀಚಿಗೆ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧ ಸರಣಿಗಳನ್ನು ಗೆದ್ದಿದೆ. ಆದರೆ ಟಿ20ರಲ್ಲಿ ಸ್ಥಿರತೆಯ ಕೊರತೆಯಿದೆ.

ತಂಡದ ಸದಸ್ಯರು: ಚರಿತ್ ಅಸಲಂಕಾ (ನಾಯಕ), ಪಥುಮ್ ನಿಸಾಂಕಾ, ಕುಸಲ್ ಮೆಂಡಿಸ್, ಕುಸಲ್ ಪೆರೇರಾ, ನುವಾನಿಡು ಫರ್ನಾಂಡೋ, ಕಮಿಂಡು ಮೆಂಡಿಸ್, ಕಮಿಲ್ ಮಿಶ್ರಾ, ದಸುನ್ ಶನಕಾ, ವಾನಿಂಡು ಹಸರಂಗಾ, ದುನಿತ್ ವೆಲ್ಲಾಲಗೆ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ದುಶ್ಮಂಥ ಚಮೀರಾ, ಬಿನುರಾ ಫರ್ನಾಂಡೋ, ನುವನ್ ಥುಶಾರಾ, ಮಥೀಶಾ ಪಥಿರಣ.

ಲಿಟನ್ ದಾಸ್ ನಾಯಕತ್ವದ ಬಾಂಗ್ಲಾದೇಶ ಪಡೆ

ಬಾಂಗ್ಲಾದೇಶ ತಂಡವು ಲಿಟನ್ ದಾಸ್ ನಾಯಕತ್ವದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ಇತ್ತೀಚಿಗೆ ಶ್ರೀಲಂಕಾ, ಪಾಕಿಸ್ತಾನ ಮತ್ತು ನೆದರ್‌ಲ್ಯಾಂಡ್ಸ್ ವಿರುದ್ಧ ಸರಣಿಗಳನ್ನು ಗೆದ್ದಿದೆ. ಮೊದಲ ಏಷ್ಯಾ ಕಪ್ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ.

ತಂಡದ ಸದಸ್ಯರು: ಲಿಟನ್ ದಾಸ್ (ನಾಯಕ), ತಾಂಜಿದ್ ಹಸನ್ ತಾಮಿಮ್, ಪರ್ವೇಜ್ ಹೊಸೈನ್ ಎಮನ್, ಸೈಫ್ ಹಸನ್, ತೌಹಿದ್ ಹೃದಯ್‌, ಜಾಕರ್ ಅಲಿ, ಶಮಿಮ್ ಹೊಸೈನ್, ನುರುಲ್ ಹಸನ್, ಮಹೇದಿ ಹಸನ್, ರಿಶದ್ ಹೊಸೈನ್, ನಾಸುಮ್ ಅಹ್ಮದ್, ಮುಸ್ತಫಿಜುರ್ ರಹಮನ್, ತಾಂಜಿಮ್ ಹಸನ್ ಸಕೀಬ್, ತಾಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮೊಹಮ್ಮದ್ ಸೈಫುದ್ದೀನ್.

ಇದನ್ನು ಓದಿದ್ದೀರಾ? ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಇತಿಹಾಸ ನಿರ್ಮಿಸಿ ಪದಕ ಗೆದ್ದ ಸಾತ್ವಿಕ್‌–ಚಿರಾಗ್

ರಶೀದ್ ಖಾನ್ ಸಾರಥ್ಯದ ಅಫ್ಘಾನ್‌ ತಂಡ

ಅಫ್ಘಾನಿಸ್ತಾನ ತಂಡವು ರಶೀದ್ ಖಾನ್ ನಾಯಕತ್ವದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, 2024ರ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ತಲುಪಿತ್ತು. ಸ್ಪಿನ್ ಬೌಲಿಂಗ್‌ನಲ್ಲಿ ಬಲಿಷ್ಠವಾಗಿದ್ದು, ಟೂರ್ನಿಯಲ್ಲಿ ಕುತೂಹಲ ಸೃಷ್ಟಿಸಬಲ್ಲದು.

ತಂಡದ ಸದಸ್ಯರು: ರಹ್ಮನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸೆದಿಕುಲ್ಲಾ ಅತಲ್, ಇಬ್ರಹಿಂ ಜದ್ರಾನ್, ದರ್ವಿಶ್ ರಸೂಲಿ, ಅಜ್ಮತುಲ್ಲಾ ಓಮರ್‌ಜೈ, ಮೊಹಮ್ಮದ್ ನಬಿ, ಕರೀಮ್ ಜನತ್, ರಶೀದ್ ಖಾನ್ (ನಾಯಕ), ನೂರ್ ಅಹ್ಮದ್, ಎಎಂ ಘಜನ್‌ಫರ್, ಫಜಲ್‌ಹಕ್ ಫರೂಕಿ, ಫರೀದ್ ಅಹ್ಮದ್ ಮಲಿಕ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮನ್, ಮೊಹಮ್ಮದ್ ಇಶಾಕ್, ಶರಫುದ್ದೀನ್ ಅಶರಫ್, ಗುಲ್ಬದೀನ್ ನೈಬ್.

ಮುಹಮ್ಮದ್ ವಸೀಮ್ ನಾಯಕತ್ವದ ಯುಎಇ ತಂಡ

ಯುಎಇ ತಂಡವು ಮುಹಮ್ಮದ್ ವಸೀಮ್ ನಾಯಕತ್ವದಲ್ಲಿ 2024ರ ಎಸಿಸಿ ಪ್ರೀಮಿಯರ್ ಕಪ್‌ನಲ್ಲಿ ಒಮಾನ್‌ನ್ನು 55 ರನ್‌ಗಳಿಂದ ಮಣಿಸಿ ಟೂರ್ನಿಗೆ ಸೇರ್ಪಡೆಯಾಗಿದೆ. ಇತ್ತೀಚಿನ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವಿರುದ್ಧ ಸೋತಿದ್ದರೂ, ಹೆಚ್ಚು ಅನುಭವ ಪಡೆದಿದೆ.

ತಂಡದ ಸದಸ್ಯರು: ಮುಹಮ್ಮದ್ ವಸೀಮ್ (ನಾಯಕ), ಅಲಿಶಾನ್ ಶರಫು, ಅರ್ಯನ್ಶ್ ಶರ್ಮಾ (ವಿಕೆಟ್ ಕೀಪರ್), ಅಸಿಫ್ ಖಾನ್, ಧ್ರುವ್ ಪರಾಶರ್, ಇಥನ್ ಡಿ’ಸೌಜಾ, ಹೈದರ್ ಅಲಿ, ಹರ್ಷಿತ್ ಕೌಶಿಕ್, ಜುನೈದ್ ಸಿದ್ದೀಕ್, ಮತಿಉಲ್ಲಾ ಖಾನ್, ಮುಹಮ್ಮದ್ ಫರೂಕ್, ಮುಹಮ್ಮದ್ ಜವಾದುಲ್ಲಾ, ಮುಹಮ್ಮದ್ ಝೋಹೈಬ್, ರಹುಲ್ ಚೋಪ್ರಾ (ವಿಕೆಟ್ ಕೀಪರ್), ರೋಹಿದ್ ಖಾನ್, ಸಿಮ್ರನ್‌ಜೀತ್ ಸಿಂಗ್, ಸಘೀರ್ ಖಾನ್.

ಒಮಾನ್‌ ತಂಡಕ್ಕೆ ಜತೀಂದರ್ ಸಿಂಗ್ ನಾಯಕ

ಒಮಾನ್ ತಂಡವು ಜತೀಂದರ್ ಸಿಂಗ್ ನಾಯಕತ್ವದಲ್ಲಿ ಪ್ರೀಮಿಯರ್ ಕಪ್‌ನಲ್ಲಿ ರನ್ನರ್-ಅಪ್ ಆಗಿ ಏಷ್ಯಾ ಕಪ್‌ ಟೂರ್ನಿ ಸೇರಿದೆ. ಫೆಬ್ರುವರಿ 2025ರಲ್ಲಿ ಅಮೆರಿಕ ವಿರುದ್ಧ 0-3 ಸೋಲು ಅನುಭವಿಸಿತ್ತು.

ತಂಡದ ಸದಸ್ಯರು: ಜತೀಂದರ್ ಸಿಂಗ್ (ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ, ಸುಫ್ಯಾನ್ ಯೂಸುಫ್, ಅಶಿಷ್ ಓಡೆಡರಾ, ಆಮಿರ್ ಕಲೀಮ್, ಮೊಹಮ್ಮದ್ ನದೀಮ್, ಸುಫ್ಯಾನ್ ಮೆಹ್ಮೂದ್, ಅರ್ಯನ್ ಬಿಷ್ಟ್, ಕರನ್ ಸೊನಾವಲೆ, ಝಿಕ್ರಿಯಾ ಇಸ್ಲಾಂ, ಹಸ್ನೈನ್ ಶಾ, ಫೈಸಲ್ ಶಾ, ಮುಹಮ್ಮದ್ ಇಮ್ರಾನ್, ನದೀಮ್ ಖಾನ್, ಶಕೀಲ್ ಅಹ್ಮದ್, ಸಮಯ್ ಶ್ರೀವಾಸ್ತವ.

ಹಾಂಗ್ಕಾಂಗ್ ತಂಡಕ್ಕೆ ಯಾಸಿಮ್ ಮುರ್ತಜಾ ನಾಯಕ

ಹಾಂಗ್‌ಕಾಂಗ್ ತಂಡವು ಯಾಸಿಮ್ ಮುರ್ತಜಾ ನಾಯಕತ್ವದಲ್ಲಿ ಪ್ರೀಮಿಯರ್ ಕಪ್‌ನಲ್ಲಿ ನೇಪಾಳ ತಂಡವನ್ನು ಸೋಲಿಸಿ ಮೂರನೇ ಸ್ಥಾನದೊಂದಿಗೆ  ಏಷ್ಯಾ ಕಪ್‌ ಟೂರ್ನಿಗೆ ಆಯ್ಕೆಯಾಗಿದೆ. ಏಷ್ಯಾ ಪೆಸಿಫಿಕ್ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್-ಅಪ್ ಕುಡ ಆಗಿದೆ.

ತಂಡದ ಸದಸ್ಯರು: ಯಾಸಿಮ್ ಮುರ್ತಜಾ (ನಾಯಕ), ಬಾಬರ್ ಹಯಾತ್, ಝೀಶಾನ್ ಅಲಿ, ನಿಯಾಜಕತ್ ಖಾನ್, ನಸ್ರುಲ್ಲಾ ರಾನಾ, ಮಾರ್ಟಿನ್ ಕೋಯೆಟ್‌ಜೀ, ಅನ್ಶುಮನ್ ರಾಥ್, ಕಲ್ಹನ್ ಚಲ್ಲು, ಅಯುಶ್ ಶುಕ್ಲಾ, ಐಝಾಜ್ ಖಾನ್, ಅತೀಕ್ ಇಕ್ಬಾಲ್, ಕಿಂಚಿತ್ ಶಾ, ಅಲಿ ಹಸನ್, ಶಹೀದ್ ವಸೀಫ್, ಮೊಹಮ್ಮದ್ ಘಜನ್‌ಫರ್, ಮೊಹಮ್ಮದ್ ವಹೀದ್, ಐಹಸನ್ ಖಾನ್.

ಒಟ್ಟು 8 ತಂಡಗಳು

  • ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಗಾನಿಸ್ತಾನ (ಪೂರ್ಣ ಸದಸ್ಯ ರಾಷ್ಟ್ರಗಳು)
  • ಯುಎಇ, ಓಮನ್, ಹಾಂಗ್‌ಕಾಂಗ್ (ACC ಪ್ರೀಮಿಯರ್ ಕಪ್ 2024ರಲ್ಲಿ ಮುಂಚೂಣಿಯಲ್ಲಿದ್ದ ತಂಡಗಳು)

ಗುಂಪು ಹಂತ

ಎರಡು ಗುಂಪುಗಳಾಗಿ ತಂಡಗಳನ್ನು ವಿಭಜಿಸಲಾಗಿದೆ:

  • ಗುಂಪು A – ಭಾರತ, ಪಾಕಿಸ್ತಾನ, ಯುಎಇ, ಓಮನ್
  • ಗುಂಪು B – ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಹಾಂಗ್‌ಕಾಂಗ್

ಪ್ರತಿ ತಂಡವು ತನ್ನ ಗುಂಪಿನ ಇತರ ಮೂರೂ ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಲಿದೆ. ಮೇಲಿನ ಎರಡು ತಂಡಗಳು ಸೂಪರ್ 4 ಹಂತಕ್ಕೆ ಅರ್ಹವಾಗುತ್ತವೆ. ಸೂಪರ್ 4 ಹಂತದಲ್ಲಿ ಪ್ರತಿ ತಂಡವು ಉಳಿದ ಮೂರರ ವಿರುದ್ಧ ಆಡುತ್ತದೆ. ಅಲ್ಲಿ ಅಗ್ರ ಎರಡು ತಂಡಗಳು ಅಂತಿಮ ಪಂದ್ಯಕ್ಕೆ ತಲುಪುತ್ತವೆ.

ಎಲ್ಲ ಪಂದ್ಯಗಳು ಸ್ಥಳೀಯ ಸಮಯದಲ್ಲಿ ಸಂಜೆ 6:00 ಗಂಟೆಗೆ (ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:00ಕ್ಕೆ) ಆರಂಭವಾಗುತ್ತವೆ.

ನೇರ ಪ್ರಸಾರ: ಸೋನಿ ಟೆನ್‌ ಸ್ಪೋರ್ಟ್ಸ್‌ ಚಾನಲ್‌ ಹಾಗೂ ಸೋನಿ ಲೈವ್‌ ಒಟಿಟಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯಾಕಪ್ ಟೂರ್ನಿಯ ಸಂಭಾವನೆ ಸೇನೆಗೆ ಸಮರ್ಪಿಸಿದ ಸೂರ್ಯಕುಮಾರ್ ಯಾದವ್

ಏಷ್ಯಾಕಪ್ ಜಯಿಸಿದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪಂದ್ಯದ ಕೊನೆಗೆ...

ಏಷ್ಯಾ ಕಪ್ | ಟೀಮ್ ಇಂಡಿಯಾ ಅವಮಾನಿಸಿದ್ದು ನಮ್ಮನ್ನಲ್ಲ, ಕ್ರೀಡೆಯನ್ನು: ಪಾಕ್ ನಾಯಕ ಸಲ್ಮಾನ್ ಅಲಿ

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ 2025ನೇ ಸಾಲಿನ ಏಷ್ಯಾ...

ಭಾರತಕ್ಕೆ ಏಷ್ಯಾ ಕಪ್: ಆಟಗಾರರಿಗೆ ಬಿಸಿಸಿಐಯಿಂದ 21 ಕೋಟಿ ರೂ. ಬಹುಮಾನ

ಏಷ್ಯಾ ಕಪ್ ಟೂರ್ನಿಯಲ್ಲಿ ಭಾನುವಾರ ದುಬೈನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್...

ನಖ್ವಿಯಿಂದ ಟ್ರೋಫಿ ಸ್ವೀಕರಿಸದ ಭಾರತ ತಂಡ, ಕಪ್‌ ಇಲ್ಲದೇ ಸಂಭ್ರಮಿಸಿದ ಆಟಗಾರರು

2025ರ ಏಷ್ಯಾಕಪ್ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ಆರಂಭದಿಂದಲೂ...

Download Eedina App Android / iOS

X