ʼʼಜಿಲ್ಲಾ ವಾಲ್ಮೀಕಿ ಯುವ ಘಟಕದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಅಕ್ಟೋಬರ್ 7ರಂದು ದಾವಣಗೆರೆಯಲ್ಲಿ ನಡೆಯಲಿದ್ದು ಇದರ ಪ್ರಯುಕ್ತ ಜನಜಾಗೃತಿಗಾಗಿ ಎಂಟನೇ ವರ್ಷದ ಐತಿಹಾಸಿಕ ಬೃಹತ್ ಬೈಕ್ ರ‍್ಯಾಲಿಯನ್ನು ಅ. 5ರ ಭಾನುವಾರ ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆʼʼ ಎಂದು ದಾವಣಗೆರೆ ಜಿಲ್ಲಾ ವಾಲ್ಮೀಕಿ ಯುವ ಘಟಕದ ಮುಖಂಡರಾದ ಶ್ರೀನಿವಾಸ್ ದಾಸ ಕರಿಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ʼʼಭಾನುವಾರ ನಡೆಯಲಿರುವ ಬೈಕ್ ರ‍್ಯಾಲಿಯನ್ನು ರಾಜನಹಳ್ಳಿ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಉದ್ಘಾಟನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಜಗಳೂರು ಶಾಸಕರಾದ ದೇವೇಂದ್ರಪ್ಪ ಮಾಜಿ ಶಾಸಕರುಗಳಾದ ಎಸ್ ವಿ ರಾಮಚಂದ್ರ. ಹೆಚ್ ಪಿ ರಾಜೇಶ್. ಜಿಲ್ಲಾ ಅಧ್ಯಕ್ಷ ಬಿ ವೀರಣ್ಣ ಹದಡಿ ಹಾಲಪ್ಪ ನಿಟ್ಟುವಳ್ಳಿ ಆರ್. ಎಸ್. ಶೇಖರಪ್ಪ ಸೇರಿದಂತೆ ಸಮಾಜದ ಅನೇಕ ಗಣ್ಯ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆʼʼ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ತೋಟದ ಬಸವರಾಜ್ ಮಾತನಾಡಿ ʼʼಬೈಕ್ ರ‍್ಯಾಲಿಯು ರಾಜವೀರ ಮದಕರಿನಾಯಕ ವೃತ್ತದಿಂದ ಹೊಂಡದ ವೃತ್ತ, ದುರ್ಗಾಂಬಿಕ ದೇವಿ ದೇವಸ್ಥಾನ. ಹಗೆದಿಬ್ಬ ಸರ್ಕಲ್. ಅರಳಿಮರ ವೃತ್ತ. ಬಂಬೂ ಬಜಾರ್. ಎಪಿಎಂಸಿ. ಪಿಬಿ ರಸ್ತೆ. ಅರುಣಾ ಟಾಕೀಸ್. ವಿನೋಬನಗರ ಎರಡನೇ ಕ್ರಾಸ್, ಚರ್ಚ್ ರಸ್ತೆ. ರಾಂ ಅಂಡ್ ಕೋ ಸರ್ಕಲ್. ಅಂಬೇಡ್ಕರ್ ಸರ್ಕಲ್. ಶಿವಪ್ಪಯ್ಯ ಸರ್ಕಲ್. ಕೆ.ಟಿ.ಜೆ ನಗರ. ಎಚ್ ಕೆ ಆರ್ ಸರ್ಕಲ್. ನಿಟ್ವುವಳ್ಳಿ ದುರ್ಗಾಂಬಿಕಾ ದೇವಿ ದೇವಸ್ಥಾನ. ಬಳಿ ಕೊನೆಗೊಳ್ಳಲಿದೆʼʼ ಎಂದು ತಿಳಿಸಿದರು.
ʼʼಬೃಹತ್ ಬೈಕ್ ರ‍್ಯಾಲಿಗೆ ಸಮಾಜದ ಎಲ್ಲಾ ಯುವಕರು, ಮುಖಂಡರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಬೈಕ್ ರಾಲಿ ಮುಗಿದ ನಂತರ ಸಮಾಜದ ಯುವಕರಿಗೆ ಸಮಾಜದ ಸ್ಥಿತಿಗತಿ ಆಗು ಹೋಗುಗಳು ಮತ್ತು ಆರ್ಥಿಕ , ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜ ಸಂಘಟನೆಯ ಹಿತದೃಷ್ಟಿಯಿಂದ ಅವರನ್ನು ಜಾಗೃತಿ ಗೊಳಿಸಲಾಗುವುದು ಎಂದು ಆರ್. ಲಕ್ಷ್ಮಣ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನಿಗಮ ಮಂಡಳಿಗೆ ಪರಿಗಣಿಸದೇ ಅನ್ಯಾಯ: ಕಾಂಗ್ರೆಸ್ಸಿನ ಆರ್ ಕೆ ಸರ್ದಾರ್ ಬೆಂಬಲಿಗರ ಆಕ್ರೋಶ
ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ಪಚ್ಚಿ, ಮಾಜಿ ಮಹಾಪೌರರಾದ ವಿನಾಯಕ ಪೈಲ್ವಾನ್, ಪ್ರವೀಣ್ ಹುಲುಮನಿ, ಪ್ರವೀಣ್ ಶಾಮನೂರು, ಜಗದೀಶ್ ಎನ್. ಎಚ್., ಹಾಲೇಶ್, ಪ್ರವೀಣ್ ದೇವರಮನಿ, ನಾಗೇಶ್ ಅವರಗೆರೆ, ಸುರೇಶ್, ಶಶಿ, ಸತೀಶ್, ಪರಶುರಾಮ್ ಪಣಿಯಾಪುರ, ಲಿಂಗರಾಜ್ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.