ಸರ್ಕಾರೇತರ ವಾಹನಗಳ ಮೇಲೆ ಸರ್ಕಾರಿ ಲಾಂಛನ, ಚಿಹ್ನೆ; 7 ವಿಶೇಷ ತಂಡ ರಚನೆ, ಕಾರ್ಯಾಚರಣೆಗಿಳಿದ ಇಲಾಖೆ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಾಹನಗಳನ್ನು ಹೊರತುಪಡಿಸಿ, ಕರ್ನಾಟಕ ಸರ್ಕಾರದ ಹೆಸರು, ಲಾಂಛನ ಹಾಗೂ ಚಿಹ್ನೆ ಬಳಸಲು ಸರ್ಕಾರದ ಅಧೀನದ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ಅವಕಾಶವಿರುವುದಿಲ್ಲ. ಆದರೂ, ನಗರದಲ್ಲಿ ಅನಧಿಕೃತವಾಗಿ ಚಿಹ್ನೆ ಹಾಗೂ ಲಾಂಛನ ಬಳಸಿರುವುದು ಕಂಡುಬಂದಿದೆ. ಈ ಹಿನ್ನೆಲೆ, ಇದಕ್ಕೆ ಕಡಿವಾಣ ಹಾಕಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಈಗಾಗಲೇ ಸಾರಿಗೆ ಇಲಾಖೆಯಲ್ಲಿ ಈ ಬಗ್ಗೆ ನೂರಾರು ಪ್ರಕರಣಗಳು ದಾಖಲಾಗಿದ್ದು, ಇಂತಹ ನೋಂದಣಿ ಫಲಕಗಳನ್ನು ತೆರವುಗೊಳಿಸಲು ರಾಜ್ಯ ಸಾರಿಗೆ ಇಲಾಖೆ ಏಳು ವಿಶೇಷ ತಂಡಗಳನ್ನು ರಚಿಸಿ, ಜೂನ್ ಒಂದರಿಂದ ಕಾರ್ಯಾಚರಣೆ ಆರಂಭಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಮೊದಲಿಗೆ ₹500, ಎರಡನೇ ಬಾರಿ ₹1,000 ಅದಾದ ನಂತರ ವಾಹನವನ್ನು ಸೀಜ್ ಮಾಡಲು ಇಲಾಖೆ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.

ಸಾರಿಗೆ ಇಲಾಖೆಯ ನಿಯಮದಂತೆ, ಕೇವಲ ಸರ್ಕಾರಿ ವಾಹನಗಳಿಗೆ ಅಂದರೆ, ಜಿ ಸಿರೀಸ್ ಇರೋ ನಂಬರ್ ಪ್ಲೇಟ್ ಇರುವ ವಾಹನಗಳಲ್ಲಿ ಮಾತ್ರ ಕರ್ನಾಟಕ ಸರ್ಕಾರದ ಹೆಸರು, ಲಾಂಛನ ಇರಬೇಕು. ಅದನ್ನು ಹೊರತು ಪಡಿಸಿ, ಸರ್ಕಾರದ ಅಧೀನದಲ್ಲಿ ಬರುವ ಸರ್ಕಾರಿ ನಿಗಮ, ಮಂಡಳಿ, ಸಂಸ್ಥೆ, ಲೋಕಲ್ ಬಾಡಿ, ಮುನ್ಸಿಪಲ್ ವಾಹನಗಳಲ್ಲಿಯೂ ಕೂಡ ಸರ್ಕಾರದ ಲಾಂಛನದ ಬಳಕೆಗೆ ಅವಕಾಶವಿಲ್ಲ‌.

ಈ ಸುದ್ದಿ ಓದಿದ್ದೀರಾ? ಪೊಲೀಸ್ ಸಿಬ್ಬಂದಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ವಾಸ್ಥ್ಯಕ್ಕಾಗಿ ಕ್ರಮ; ಪೊಲೀಸ್ ಆಯುಕ್ತ ಬಿ.ದಯಾನಂದ್

ಉದಾಹರಣೆಗೆ, ಕೆಎಸ್​ಆರ್​ಟಿಸಿ ನಿಗಮವಾದರೂ ಅಧಿಕಾರಿಗಳು ಸರ್ಕಾರದ ಚಿಹ್ನೆ, ಹೆಸರು ಬಳಸುವಂತಿಲ್ಲ. ಅನಧಿಕೃತವಾದ ಲಾಂಛನ ಅಥವಾ ಚಿಹ್ನೆ ಹೊಂದಿರುವ ವಾಹನಗಳ ವಿರುದ್ಧ ಮೋಟಾರು ವಾಹನಗಳ ಕಾಯ್ದೆಯಡಿ ಕ್ರಮ ಕೈಗೊಂಡು, ಪ್ರಕರಣ ದಾಖಲು ಮಾಡುವ ಎಚ್ಚರಿಕೆಯನ್ನು ಸಾರಿಗೆ ಇಲಾಖೆ ನೀಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಉದಯೋನ್ಮುಖ ಕವಿಗಳು ಕವಿತೆ ರಚಿಸಲು ಆದ್ಯತೆ ನೀಡಬೇಕು: ವಿ. ಕುಲಪತಿ ಮಲ್ಲಿಕಾ ಘಂಟಿ

'ಸಾಹಿತ್ಯದ ಕೆಲಸ ಸ್ಥಗಿತಗೊಂಡ ಜನರ ಬದುಕನ್ನು ಚಲನಶೀಲನಗೊಳಿಸುವಂತದ್ದಾಗಿದ್ದು, ಈ ದಿಸೆಯಲ್ಲಿ ಉದಯೋನ್ಮುಖ...

ಸೋಜುಗಾದ ಸೂಜು ಮಲ್ಲಿಗೆ ಹುಡುಗಿ ಹಾಡು : ಇಮ್ಮಡಿಯಾದ ಪ್ರೇಕ್ಷಕರ ಉತ್ಸಾಹ

 ಕಳೆದ 10 ದಿನಗಳಿಂದ ದಸರಾ ಉತ್ಸವ ಸಂಭ್ರಮದಲ್ಲಿ ಮುಳುಗಿದ್ದ ಪ್ರೇಕ್ಷಕರ ಉತ್ಸಾಹ...

ತುಮಕೂರು ದಸರಾ : ಸಚಿವರಿಂದ ವಿಶೇಷ ಪೂಜೆ

ತುಮಕೂರು ದಸರಾ ಉತ್ಸವದ ಕಡೆಯ ದಿನವಾದ ವಿಜಯದಶಮಿಯಂದು ಗೃಹ ಹಾಗೂ ಜಿಲ್ಲಾ...

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

Download Eedina App Android / iOS

X