ಶಿವಮೊಗ್ಗದಲ್ಲಿ ರಘುನಂದನ ಅವರ ಕಾವ್ಯದ ಅರಿಕೆ: ದರದು ಅಸಲು

Date:

20 ಜನವರಿ 2026ರಂದು ಶಿವಮೊಗ್ಗದಲ್ಲಿ ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ನಾನು ಸತ್ತ ಮೇಲೆ ಕವನ ಸಂಗ್ರಹದ ಕವಿತೆಗಳ ಓದು ಮತ್ತು ಪರಿಚಯದ ಕಾರ್ಯಕ್ರಮ ನಡೆಯಲಿದೆ.

- Advertisement -

ದರದು ಅಸಲು ಎಂಬ ಈ ಕಾವ್ಯದ ಅರಿಕೆಯ ಕಾರ್ಯಕ್ರಮವನ್ನು ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ ಮತ್ತು ಪ್ರಜ್ಞಾ ಬುಕ್ ಗ್ಯಾಲರಿ, ಶಿವಮೊಗ್ಗ, ಇವರು ಏರ್ಪಡಿಸಿದ್ದು ಸಭೆ ಪ್ರಜ್ಞಾ ಬುಕ್ ಗ್ಯಾಲರಿ, ಸರಕಾರಿ ನೌಕರರ ಭವನ, ನೆಲಮಾಳಿಗೆ, ಹಳೇ ಆರ್.ಟಿ.ಒ. ರಸ್ತೆ, ಬಸವನಗುಡಿ, ಶಿವಮೊಗ್ಗ, ಇಲ್ಲಿಇಂದಿನ ಸಂಜೆ 5.30ಕ್ಕೆ ನಡೆಯಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ...

ನಾಟಕಕಾರ, ಬರಹಗಾರ ಅಡ್ಡಂಡ ಕಾರ್ಯಪ್ಪ ಹಿಂದಿನಿಂದಲೂ ಒಂದಲ್ಲೊಂದು ಕಾರಣಕ್ಕೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿರುವ ಹೆಸರು. ಇತಿಹಾಸದ ನಿರೂಪಣೆ, ರಂಗಭೂಮಿಯ ಬಳಕೆ, ಧಾರ್ಮಿಕ ಮತ್ತು ರಾಜಕೀಯ ವಿಚಾರಗಳ ಅಭಿವ್ಯಕ್ತಿ ಹಾಗೂ ಕೋಮು ಸೌಹಾರ್ದದ...

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ...

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕಲೆ ಮತ್ತೊಮ್ಮೆ ಅತ್ಯಂತ ಸುಂದರವಾಗಿ ಸಾಬೀತುಪಡಿಸಿದೆ. ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು 'ಮಹಿಷಾಸುರ...

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ...

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ ಮತದಾನ ಅಕ್ಟೋಬರ್ 23ರಂದು ನಡೆಯಲಿದೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆರಿಸಲು ಪ್ರಾಶಸ್ತ್ಯ ಮತದಾನ ಪದ್ಧತಿಯನ್ನು ಅನುಸರಿಸಬೇಕು. ಈ ಸಂದರ್ಭದಲ್ಲಿ...

ರಘುನಂದನ ಅವರೇ ತಮ್ಮ ಕವಿತೆಗಳನ್ನು ಅರಿಕೆ ಮಾಡುತ್ತಾರೆ. ಜೊತೆಗೆ, ಬೇಂದ್ರೆಯವರ ಕಾವ್ಯವನ್ನು ಕುರಿತ ಜಿಜ್ಞಾಸೆಯಿಂದ ತೊಡಗಿ ವಿಶಾಲವಾದ ಕಾವ್ಯಮೀಮಾಂಸೆ ಮತ್ತು ಲೋಕಮೀಮಾಂಸೆಯ ತೊಡಗುವ ತಮ್ಮ ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ ಪುಸ್ತಕದ ಪರಿಚಯವನ್ನು ಕೂಡ ಮಾಡಿಕೊಡುತ್ತಾರೆ.

ನಾನು ಸತ್ತ ಮೇಲೆ ಕವನಸಂಕಲನದಲ್ಲಿ ರಘುನಂದನ ಅವರ ಸ್ವರಚಿತ ಕವಿತೆಗಳಲ್ಲದೆ, ಅವರು ಕನ್ನಡಿಸಿರುವ ಬೇರೆ ಭಾಷೆಗಳ ಕೆಲವು ಕವಿತೆಗಳಿವೆ ಹಾಗೂ ಅವರು ನಾಟಕಗಳಿಗಾಗಿ ಬರೆದ ಹಾಡುಗಳು ಹಾಗೂ ಪದ್ಯ ಭಾಗಗಳು ಇವೆ. ರಘುನಂದನ ಅವರು ತಮ್ಮ ಕವಿತೆಗಳ ಅರಿಕೆಯನ್ನು ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಧಾರವಾಡ, ತುಮಕೂರು ವಿಶ್ವವಿದ್ಯಾಲಯಗಳಲ್ಲಿ ಮಾಡಿದ್ದು, ಶಿವಮೊಗ್ಗದಲ್ಲಿ ನಡೆಯುತ್ತಿರುವುದು ಅವರ ಕಾವ್ಯಸಂಚಾರದ ಏಳನೆಯ ಕಾರ್ಯಕ್ರಮವಾಗಿದೆ.

ರಘುನಂದನ ಅವರ ಸಂಕೀರ್ಣ, ಸ್ನಿಗ್ಧವಾದ ಕವಿತೆ ಹಾಗೂ ಕಾವ್ಯಮೀಮಾಂಸೆಯು ಈಗಾಗಲೇ ಕಾವ್ಯ ಮತ್ತಿತರ ಸಾಹಿತ್ಯದ ಓದುಗರಲ್ಲಿ ಗಹನವಾದ ಚರ್ಚೆಗೆ ಒಳಗಾಗಿವೆ. ಅವರ ಕೆಲವು ಕವಿತೆಗಳು ಈದಿನ ತಾಣದಲ್ಲಿ ಪ್ರಕಟವಾಗಿವೆ. ಅವರ ಎರಡೂ ಪುಸ್ತಕಗಳ ಅರಿಕೆಯು ಈದಿನ ಹಾಗೂ ಅವಧಿ ಜಾಲತಾಣಗಳಲ್ಲಿ ಪ್ರಕಟವಾಗಿವೆ.

ಅವುಗಳ ಕೊಂಡಿ ಇಲ್ಲಿದೆ: https://eedina.com/opinion/theatre-personality-raghunandana-new-two-books-release-1004/2024-05-09/ಮತ್ತು https://tinyurl.com/mua295mp ಮತ್ತು https://tinyurl.com/49pws5f8

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂಟರ್ನೆಟ್‌ನಿಂದ AIವರೆಗೆ.. ದಶಕಗಳ ಹಿಂದೆಯೇ ಜಗತ್ತಿನ ಭವಿಷ್ಯ ಕಂಡಿದ್ದ ಗೀತೆಗಳಿವು!

ತಂತ್ರಜ್ಞಾನ ನಮ್ಮ ಕೈಸೇರುವ, ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗುವ ದಶಕಗಳ ಹಿಂದೆಯೇ,...

ದೇವಾ: ಸಂಗೀತ ಲೋಕದ ‘ತೇನಿಸೈ ತೆಂಡ್ರಲ್’

ಅಪಾರ ಶ್ರಮ, ನಿರಂತರ ಅಧ್ಯಯನ ಹಾಗೂ ಸತತ ಪ್ರಯತ್ನಗಳಿಂದ ಸಂಗೀತ ಕ್ಷೇತ್ರಕ್ಕೆ...

ಜಿರಳೆ ಪ್ರತಿಕೃತಿ ದಹನದ ನೆಪದಲ್ಲಿ ಯುವ ದನಿಯನ್ನು ಹತ್ತಿಕ್ಕುವ ಮೋದಿ ಸರ್ಕಾರದ ದಮನಕಾರಿ ನೀತಿ

ದೆಹಲಿಯ ಪೀತಾಂಪುರದಲ್ಲಿ ಮಂಗಳವಾರ ನಡೆದ ದಸರಾ ಆಚರಣೆಯು ಈ ಬಾರಿ ಧಾರ್ಮಿಕ...