ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿದೆ ಕೆ.ಸಿ ಜನರಲ್ ಆಸ್ಪತ್ರೆ: ರೋಗಿಗಳ ಮೇಲೆ ನರ್ಸ್‌, ಸೆಕ್ಯೂರಿಟಿಗಳದ್ದೇ ದರ್ಪ

Date:

Advertisements
ಈ ಆಸ್ಪತ್ರೆಯಲ್ಲಿ ರೋಗಿಗಳ ಮೇಲೆ ನರ್ಸ್‌ಗಳು ಸೇರಿದಂತೆ ಸೆಕ್ಯೂರಿಟಿ ಗಾರ್ಡ್‌ಗಳು ನಿತ್ಯ ರೇಗಾಡುವುದು ಪರಿಪಾಠವಾಗಿದೆ. ಜತೆಗೆ, ಕೆ.ಸಿ ಜನರಲ್‌ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ.

ರಾಜ್ಯ ರಾಜಧಾನಿ ಬೆಂಗಳೂರಿನ ಹೃದಯಭಾಗದಲ್ಲಿರುವ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆ ಹಳೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿದೆ. ಈ ಆಸ್ಪತ್ರೆಯನ್ನು ಮಹಾರಾಜ ಜಯಚಾಮರಾಜೇಂದ್ರ ಒಡೆಯರ ಅವರ ತಾಯಿ ಕೆಂಪು ಚೆಲುವರಾಜಮ್ಮಣ್ಣಿ ಅವರ ಹೆಸರಿನಲ್ಲಿ 1941ರಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವ ದೃಷ್ಟಿಯಿಂದ ಆರಂಭಿಸಲಾಯಿತು. ಆದರೆ, ಇದೀಗ, ಈ ಆಸ್ಪತ್ರೆ ಮಹಾರಾಜರ ಆಶಯದಂತೆ ನಡೆದುಕೊಂಡು ಹೋಗುತ್ತಿದಿಯಾ ಎಂಬುದನ್ನು ಮೆಲುಕು ಹಾಕಬೇಕಾಗಿದೆ.

ಹೌದು, ಈ ಪ್ರತಿಷ್ಠಿತ ಆಸ್ಪತ್ರೆ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದೆ. ಬಡವರು, ಮಧ್ಯಮ ವರ್ಗದವರು ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ. ಬೆಂಗಳೂರಿನವರು ಮಾತ್ರವಲ್ಲದೇ, ದೂರದ ಊರುಗಳಿಂದ ರೋಗಿಗಳು ಇಲ್ಲಿ ಚಿಕಿತ್ಸೆಗೆ ಬರುವುದೂ ಉಂಟು. ಬರೋಬ್ಬರಿ 503 ಹಾಸಿಗೆಗಳುಳ್ಳ ಈ ಆಸ್ಪತ್ರೆಗೆ 5 ಜನ ಕಾವಲುಗಾರರು. ಈ ಆಸ್ಪತ್ರೆಯಲ್ಲಿ ರೋಗಿಗಳ ಮೇಲೆ ನರ್ಸ್‌ಗಳು ಸೇರಿದಂತೆ ಸೆಕ್ಯೂರಿಟಿ ಗಾರ್ಡ್‌ಗಳು ನಿತ್ಯ ರೇಗಾಡುವುದು ಪರಿಪಾಠವಾಗಿದೆ. ಜತೆಗೆ, ಕೆ.ಸಿ ಜನರಲ್‌ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ.

ಈ ಕೆ.ಸಿ ಜನರಲ್ ಆಸ್ಪತ್ರೆ ಆವರಣದಲ್ಲಿ 4ಕ್ಕೂ ಹೆಚ್ಚು ಕಟ್ಟಡಗಳಿವೆ. ಕಾರ್ಡಿಯಾಲಜಿ, ಕ್ಯಾನ್ಸರ್ ಕೇರ್, ನ್ಯೂರಾಲಜಿ, ನೆಫ್ರಾಲಜಿ, ಆರ್ಥೋಪೆಡಿಕ್ಸ್, ಮಿನಿಮಲ್ ಆಕ್ಸೆಸ್ ಸರ್ಜರಿ ಸೇರಿದಂತೆ ಹಲವಾರು ರೋಗಗಳಿಗೆ ಇಲ್ಲಿ ಚಿಕಿತ್ಸೆ ದೊರೆಯುತ್ತದೆ. ಹೆರಿಗೆ ವಿಭಾಗ, ಮಹಿಳೆಯರ ವಿಭಾಗ ಸೇರಿದಂತೆ ಹಲವಾರು ವಿಭಾಗಗಳಿವೆ. ಅಲ್ಲದೇ, ಇದು ಬೋಧನಾ ಆಸ್ಪತ್ರೆಯಾಗಿದ್ದು, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವೈದ್ಯರಿಗೆ ತರಬೇತಿ ನೀಡುತ್ತದೆ. ವಿಪರ್ಯಾಸ ಏನೆಂದರೇ, ಈ ಆಸ್ಪತ್ರೆಯಲ್ಲಿರುವ ಎಲ್ಲರಿಗೂ ಕುಡಿಯುವ ನೀರು ಸಿಗುವ ಸ್ಥಳ ಒಂದೆಡೆ ಮಾತ್ರ.

Advertisements
ಕೆ ಸಿ ಜನರಲ್ ಆಸ್ಪತ್ರೆ
ಕೆ ಸಿ ಜನರಲ್ ಆಸ್ಪತ್ರೆ

ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡ ಎಷ್ಟೇ ದೂರ ಇದ್ದರೂ, ಕುಡಿಯಲು ನೀರು ಬೇಂಕೆಂದರೆ, ರೋಗಿಯೂ ಒಂದು ಕಟ್ಟಡವನ್ನು ದಾಟಿ ಮುಂದಕ್ಕೆ ಬಂದು ನೀರು ತೆಗೆದುಕೊಂಡು ಹೋಗಬೇಕು. ರಾತ್ರಿಯ ಸಮಯದಲ್ಲಿ ಹಾದು ಹೋಗುವ ಕಟ್ಟಡಕ್ಕೆ ಬೀಗ ಬಿದ್ದರೇ, ಆ ರೋಗಿ ಕುಡಿಯುವ ನೀರು ತೆಗೆದುಕೊಳ್ಳಲು ಒಂದು ಕಿ.ಮೀನಷ್ಟು ಆವರಣ ಸುತ್ತು ಹೊಡೆದು ನೀರು ತರಬೇಕಾದ ದುಸ್ಥಿತಿ ಇದೆ. ಪ್ರತಿ ವಾರ್ಡ್‌ಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದೇ ಇರುವುದು ಆಡಳಿತ ಮಂಡಳಿಯ ವಿಫಲತೆಯನ್ನು ತೋರಿಸುತ್ತದೆ ಎಂದು ರೋಗಿಗಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಒಂದೆಡೆಯಾದರೇ, ನರ್ಸ್‌ಗಳು ಮತ್ತು ಸೆಕ್ಯೂರಿಟಿ ಗಾರ್ಡ್‌ಗಳು ರೋಗಿಗಳು ಮತ್ತು ಅವರ ಕುಟುಂಬಸ್ಥರ ಮೇಲೆ ತೋರುವ ದರ್ಪ ಇನ್ನೊಂದೆಡೆ…

ಹೆಸರಿಗೆ ಆಸ್ಪತ್ರೆಯಲ್ಲಿ 503 ಹಾಸಿಗೆಗಳಿವೆ. ಈ ಮಂಚಗಳು ಕಳಪೆ ಮಟ್ಟದ್ದಾಗಿವೆ ಎಂದು ಸ್ವತಃ ಸೆಕ್ಯೂರಿಟಿ ಗಾರ್ಡ್‌ಗಳೇ ಹೇಳುತ್ತಾರೆ. ಇನ್ನು ರೋಗಿಗಳ ಪೋಷಣೆಗಾಗಿ ಅವರ ಜತೆಗೆ ಬರುವ ಪೋಷಕರಿಗೆ ಕೂಡಲು ವಾರ್ಡ್‌ಗಳಲ್ಲಿ ಆಸನದ ವ್ಯವಸ್ಥೆಯಿಲ್ಲ. ರೋಗಿಗಳ ಬೆಡ್‌ ಬಳಿ ಒಂದೇ ಒಂದು ಕುರ್ಚಿಗಳೂ ಇಲ್ಲ. ಮಲಗಲು ವ್ಯವಸ್ಥೆಯಿಲ್ಲ.

ಆಸ್ಪತ್ರೆಯಲ್ಲಿರುವ ನರ್ಸ್‌ಗಳು ಸೇರಿದಂತೆ ಕಸ ಗುಡಿಸುವವರು, ಸೆಕ್ಯೂರಿಟಿ ಗಾರ್ಡ್‌ಗಳು ರೋಗಿಗಳ ಮೇಲೆ ಸುಖಾಸುಮ್ಮನೆ ಕಿರುಚಾಡುತ್ತಾರೆ. ರೋಗಿಗಳು ಏನೇ ಕೇಳಿದರೂ ಅದಕ್ಕೆ ಅವರ ಅರಚಾಟದ ಉತ್ತರದಿಂದಲೇ ಕೊನೆಯಾಗುತ್ತದೆ.

ಹೊರರೋಗಿಗಳು ಚಿಕಿತ್ಸೆಗಾಗಿ ಮೊದಲಿಗೆ ಓಪಿಡಿ ಬಳಿ ರಶೀದಿ ಪಡೆಯಲು ನಿಂತರೇ ಉದ್ದನೇಯ ಕ್ಯೂಗೆ ಜನ ಬೇಸತ್ತ ಬೇಕಾಗಿದೆ. ಊಟದ ಅವಧಿ ಮುಗಿದರೂ, ಜನರು ಉದ್ದನೇಯ ಸಾಲಿನಲ್ಲಿ ನಿಂತು ಕಾಯುತ್ತಿದ್ದರೂ ರಶೀದಿ ನೀಡಲು ಕೌಂಟರ್‌ನಲ್ಲಿ ಯಾರು ಇರುವುದಿಲ್ಲ. ಇಲ್ಲಿ ಕ್ಯೂ ನಲ್ಲಿ ನಿಂತಾಗ ಜನರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೇ ಇಲ್ಲ. ಇನ್ನು ಇಲ್ಲಿ ಕಾದು ಬೇಸತ್ತು ವೈದ್ಯರ ಬಳಿ ರೋಗಿಗಳು ಚಿಕಿತ್ಸೆಗೆ ತೆರಳಿದರೇ, ಅಲ್ಲಿಯೂ ಅದೇ ಕಥೆ. ಸ್ವತಃ ರೋಗಿಗಳೇ ಚಿಕಿತ್ಸೆಗೆಂದು ಕ್ಯೂನಲ್ಲಿ ನಿಲ್ಲಬೇಕಾಗಿದೆ.

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಹೆಸರು ಹೇಳಲಿಚ್ಚಿಸದ ರೋಗಿಯೊಬ್ಬರು, “ಕಳೆದ ಒಂದು ವಾರದಿಂದ ನಾನು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ವೈದ್ಯರು ತುಂಬಾ ಒಳ್ಳೆಯವರು. ಉತ್ತಮವಾದ ಚಿಕಿತ್ಸೆ ನೀಡುತ್ತಾರೆ. ಆದರೆ, ಇಲ್ಲಿಯ ನರ್ಸ್‌ಗಳು ಮತ್ತು ಸೆಕ್ಯೂರಿಟಿ ಗಾರ್ಡ್‌ಗಳು ರೋಗಿಗಳ ಮೇಲೆ ಅರಚಾಡುತ್ತಾರೆ. ಯಾರೂ ನಿಧಾನವಾಗಿ ಏನನ್ನೂ ಹೇಳುವುದಿಲ್ಲ” ಎಂದರು.

“ನಮ್ಮ ಬಳಿ ಹಣವಿಲ್ಲದ ಕಾರಣ ನಾವು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದೇವೆ. ಆದರೆ, ಇಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳು, ನರ್ಸ್‌ಗಳು ನಮ್ಮ ಮೇಲೆ ಅರಚಾಡುತ್ತಾರೆ. ಒಂದು ಕ್ಷಣ ಭಯವಾಗುತ್ತದೆ. ನಮ್ಮ ಬಳಿ ಹಣ ಇದ್ದಿದ್ದರೇ, ನಾವ್ಯಾಕೆ ಇಲ್ಲಿ ಚಿಕಿತ್ಸೆಗೆ ಬರುತ್ತಿದ್ದೆವು” ಎಂದು ಮತ್ತೋಬ್ಬ ರೋಗಿ ಈ ದಿನ.ಕಾಮ್‌ಗೆ ಹೇಳಿದರು.

ಈ ಸುದ್ದಿ ಓದಿದ್ದೀರಾ? ಆನೇಕಲ್ | ಪೋಷಕರಿಗೆ ಹೇಳದೆ ಬಾಲಕಿಗೆ ‘ಬಾಲ್ಯ ವಿವಾಹ’ ಮಾಡಿದ ದೊಡ್ಡಪ್ಪ; ದೂರು ದಾಖಲು

ಮತ್ತೋಬ್ಬ ರೋಗಿ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಚಿಕಿತ್ಸೆ ನೀಡುವ ಬಗ್ಗೆ ಎರಡು ಮಾತಿಲ್ಲ. ಆದರೆ, ಇಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಕುಡಿಯಲು ನೀರು ತರಲು ಒಂದು ಕಟ್ಟಡ ದಾಟಿ ತೆರಳಬೇಕು. ಶೌಚಾಲಯಗಳು ಸ್ವಚ್ಛತೆಯಿಂದ ಇಲ್ಲ. ನರ್ಸ್‌ಗಳು ಹೆಚ್ಚಾಗಿ ರೇಗಾಡುತ್ತಾರೆ. ನಮ್ಮ ಮನೆಯಿಂದ ಯಾರದರೂ ನಮ್ಮನ್ನು ನೋಡಲು ಬಂದರೇ, ಅವರಿಗೆ ಕುಳಿತುಕೊಳ್ಳಲು ಜಾಗವಿಲ್ಲ. ಒಂದು ಚೇರ್ ಅನ್ನು ಸಹ ಕುಳಿತುಕೊಳ್ಳಲು ಇಟ್ಟಿಲ್ಲ” ಎಂದು ಹೇಳಿದರು.

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಕೆ ಸಿ ಜನರಲ್ ಆಸ್ಪತ್ರೆಯ ಸೂಪರಿಡೆಂಟ್ ಇಂದಿರಾ ಕಬಾಡೆ, “ಪ್ರತಿ ವಾರ್ಡ್‌ಗಳಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಮಾಡುತ್ತೇನೆ. ಈಗಾಗಲೇ ಸುಮಾರು ಚೇರ್‌ಗಳನ್ನು ತರಿಸಿದ್ದೆ, ಆದರೂ ಏನಾಗಿದೆ ಎಂಬುದು ತಿಳಿದಿಲ್ಲ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ. ಯಾರೂ ರೋಗಿಗಳ ಮೇಲೆ ಕೂಗಾಡಿ ಅರಚಾಡುತ್ತಾರೆ ಅಂತಹವರ ವಿರುದ್ಧ ಈ ಹಿಂದೆಯೂ ಕ್ರಮ ಕೈಗೊಂಡಿದ್ದೇವೆ. ಈಗಲೂ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X