ಆಗಸ್ಟ್ 19ರಂದು ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡಲು ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡಿ ಅಂಗೀಕರಿಸಲು ಸದನದಲ್ಲಿ ಮಂಡನೆ ಮಾಡಬೇಕು. ಅಂದು ನಾಗಮೋಹನ ದಾಸ್ ಅವರ ಒಳಮೀಸಲಾತಿ ವರದಿ ಯಥಾವತ್ ಜಾರಿಯಾಗದಿದ್ದರೆ ರಕ್ತಪಾತದದ ಹೋರಾಟ ನಡೆಯುತ್ತದೆ ಎಂದು ಮಾದಿಗ ಜಾತಿ ಉಪಜಾತಿ ಸಂಘಟನೆಗಳ ಜಿಲ್ಲಾ ಪ್ರಧಾನ ಸಂಚಾಲಕ ಣೇಶ ಹೊರತಟ್ನಾಳ ಎಚ್ಚರಿಸಿದರು.
ನಾಗಮೋಹನ ದಾಸ್ ಅವರ ವೈಜ್ಞಾನಿಕ ಒಳಮೀಸಲಾತಿ ಯಥಾವತ್ ಜಾರಿಗೊಳಿಸಲು ಚರ್ಚಿಸುವಂತೆ ಒತ್ತಾಯಿಸಿ ಜಾತಿ ಉಪಜಾತಿ ಸಂಘಟನೆಗಳ ಕೊಪ್ಪಳ ಜಿಲ್ಲಾ ಒಕ್ಕೂಟ ಹಾಗೂ ಮಾದಿಗ ಮಹಾಸಭಾದ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಬಳಿಕ ನಗರದ ಅಶೋಕ ವೃತ್ತದಿಂದ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನಿವಾಸದವರೆಗೂ ತಮಟೆ ಭಾರಿಸುವುದರ ಮೂಲಕ ತೆರಳಿ ಶಾಸಕರ ಅನುಪಸ್ಥಿತಿಯಲ್ಲಿ ಸಹೋದರ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದರು.
"ನಾಗಮೋಹನದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವಂತೆ ಸಂಪುಟ ಸಭೆಯಲ್ಲಿ ಚರ್ಚೆ...