ವ್ಯಂಗ್ಯವೆಂದರೆ, ಪ್ರಾಣಿದಯೆಯನ್ನು ತೋರುವ ಜನರು, ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ಮುಟ್ಟಿಸಿಕೊಂಡರೆ ಮೈಲಿಗೆಯಾಗುತ್ತದೆ ಎಂಬುದನ್ನು ವಿರೋಧಿಸುವುದಿಲ್ಲ; ಧರ್ಮದ ಹೆಸರಲ್ಲಿ ನಡೆಯುವ ಹಿಂಸೆಯನ್ನು ಬೆಂಬಲಿಸುತ್ತಾರೆ. ದೇಶರಕ್ಷಣೆಯ ಹೆಸರಲ್ಲಿ ನಡೆಯುವ ಮಿಲಿಟರಿ ಯುದ್ಧಗಳು ಹೆಂಗಸರು-ಮಕ್ಕಳನ್ನು ಕೊಲ್ಲುವುದನ್ನು ಶೌರ್ಯವೆಂದು...