ನಿರ್ಭೀತ ಪತ್ರಿಕೋದ್ಯಮಕ್ಕೆ ಜಾಗತಿಕವಾಗಿ ಮಾದರಿಯಾಗಿದ್ದ ಅಮೆರಿಕದಲ್ಲಿ ಮಾಧ್ಯಮಗಳು ಇಂದು ಅಧಿಕಾರದ ದರ್ಪದಲ್ಲಿ ಮೆರೆಯುತ್ತಿರುವ ನಿರ್ಲಜ್ಜ ಬಂಡವಾಳಶಾಹಿಗಳಿಗೆ ಶರಣಾಗುತ್ತಿರುವುದು ಅಲ್ಲಿಯ ನಾಗರಿಕರು ಹೆಮ್ಮೆಪಡುತ್ತಿದ್ದ 'ಅಭಿವ್ಯಕ್ತಿ ಸ್ವಾತಂತ್ರ್ಯ' ಅಪಾಯದಲ್ಲಿರುವುದನ್ನು ಸೂಚಿಸುತ್ತಿದೆ. 1972ರಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ...