ಎಲ್ಲ ಭಾಷೆಯ ಚಿತ್ರಗಳಲ್ಲಿ ತಾವೇ ಭಾವಪೂರ್ಣವಾಗಿ ಸಂಭಾಷಣೆ ಒಪ್ಪಿಸಿ ಅಭಿನಯಿಸುತ್ತಿದ್ದ ಬಿ. ಸರೋಜಾದೇವಿ ಅವರು ಕಲಿಕೆಗೂ ಮಾದರಿಯೆನಿಸಿದ್ದರು. ಇದೇ ಕಾರಣಕ್ಕೆ ರಸಿಕರು ಅವರಿಗೆ 1962ರಲ್ಲಿ ನೀಡಿದ 'ಚತುರ್ಭಾಷಾ ತಾರೆ' ಅವರ ವ್ಯಕ್ತಿತ್ವಕ್ಕೆ ಒಪ್ಪುವಂತಹ ಬಿರುದು...
ಕನ್ನಡ ನಾಡಲ್ಲಿ...
50ರ ದಶಕದಲ್ಲಿ, ಹಳೆಯ ರಂಗಭೂಮಿ ನಟಿಯರು ನೇಪಥ್ಯಕ್ಕೆ ಸರಿದು, 'ಹರಿಣಿ' ಪ್ರಯೋಗದಿಂದಾಗಿ ಎಳೆಯ ನವ ನಟಿಯರಿಗಾಗಿ ಹುಡುಕಾಟ ಆರಂಭವಾಯಿತು. ಅನ್ಯಭಾಷೆಯಲ್ಲಿ ಯಶಸ್ಸು ಪಡೆದ ನಟಿಯರನ್ನು ಕರೆತರುವ ಪರಿಪಾಟ ಮೊದಲಾಯಿತು. ಇಂಥ ಪ್ರಯೋಗಗಳ ಫಲವಾಗಿ...