ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ತೇವರೇಚಟ್ನಳ್ಳಿಯ ಸೇತುವೆ ನಿರ್ಮಾಣವಾಗಿ ನಾಲ್ಕೇ ವರ್ಷಕ್ಕೆ ಶಿಥಿಲಗೊಂಡಿದೆ. ಸೇತುವೆಯ ತಡೆಗೋಡೆಗಳು ಬಿರುಕು ಬಿಟ್ಟಿವೆ. ಸೇತುವೆ ಯಾವಾಗ ಕುಸಿಯಾತ್ತದೋ ಎಂಬ ಆತಂಕದಲ್ಲೇ ಸಾರ್ವಜನಿಕರು ಸೇತುವೆಯನ್ನು ಬಳಸುತ್ತಿದ್ದಾರೆ.
ಸೇತುವೆಯು ತೇವರೇಚಟ್ನಳ್ಳಿಯಿಂದ ರಾಗಿಗುಡ್ಡ, ನವುಲೇ...