ಇತಿಹಾಸಕಾರರು ದಲಿತ ಹೋರಾಟಗಾಥೆಗಳನ್ನು ಪ್ರಾಮಾಣಿಕವಾಗಿ ಗಮನಿಸುವಲ್ಲಿ ವಿಫಲರಾಗಿದ್ದಾರೆ. ಅದೇ ರೀತಿಯಲ್ಲಿ, ಜೀವನದ ವಿವಿಧ ಕ್ಷೇತ್ರಗಳಿಗೆ ದಲಿತರ ಕೊಡುಗೆಗಳನ್ನೂ ಅಳಿಸಿಹಾಕಲಾಗಿದೆ. ತುಳಿತಕ್ಕೊಳಗಾದವರನ್ನು ಇತಿಹಾಸದಿಂದ ಹೊರಗಿಡುವುದು ಮತ್ತು ಅಮಾನ್ಯಗೊಳಿಸುವುದು ಯಾವ ಪ್ರಮಾಣದಲ್ಲಿದೆ ಎಂದರೆ, ಇತಿಹಾಸ ಓದುವ...