ಬಾಲ್ಯದಲ್ಲಿ ಗೋಕರ್ಣ ಹಾಗೂ ಗೋವೆಯ ಕಡಲನ್ನು, ಮಳೆಗಾಲದ ಭೋರ್ಗರೆಯುವ ರೌದ್ರತೆಯನ್ನೂ, ಬೇಸಿಗೆಯ ಹೊಂಬಣ್ಣದ ಸೊಬಗು, ಇಳಿಸಂಜೆಗೆ ಕಡಲ ಒಡಲಲ್ಲಿ ಲೀನವಾಗುವ ರವಿ, ಮೇಲೆ ಶುಭ್ರ ಆಗಸದಲ್ಲಿ ಬೆಳ್ಳಿಯ ಹಾಲು ನೊರೆಯುವ ಚಂದ್ರನ ಬೆಳದಿಂಗಳ...
ಇಲ್ಲಿ ಬೇಸಿಗೆಯಲ್ಲಿ ಹೆಚ್ಚಿನ ಜನ ಮನೆಯ ಅಂಗಳದಲ್ಲಿ ಇಲ್ಲಾ ತಾರಸಿಯ ಮೇಲೆ ಚಾರ್ಪಾಯಿ ಹಾಕಿಕೊಂಡು ಮಲಗುತ್ತಾರೆ. ತಂಪಾಗಿಸಲು ಸಾಯಂಕಾಲ ನೀರು ಹಾಕಿ ತೊಳೆದು ತಣಿಸಿದರೂ ಧಗೆ ಕಡಿಮೆಯಾಗಿರುವುದಿಲ್ಲ. ಸಂಜೆ ಬೇಗ ಅಡುಗೆ ಮಾಡಿ...