"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು ಅನುಮಾನಿಸಬಹುದೇ? ಭೈರಪ್ಪನವರ ಮಕ್ಕಳು ಮುಂದೆ ತಕರಾರು ತೆಗೆದರೆ, ಕಾನೂನಾತ್ಮಕ ಸಮಸ್ಯೆಗಳು ಬರದಂತೆ ವಿಲ್ ಬರೆಸಲಾಗಿದೆಯೇ?"
ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ಬರೆದಿಟ್ಟಿರುವ ವಿಲ್...
ಭೈರಪ್ಪನವರು ಬಹುದೊಡ್ಡ ಕಲಾಕಾರರಾಗಿದ್ದರೂ ಅವರ ವೈಚಾರಿಕತೆ ಮತೀಯವಾದಕ್ಕೆ ಶರಣಾದ ಕಾರಣ ಓದುಗ ಲೋಕದ ಪ್ರಶ್ನಾತೀತ ಆರಾಧ್ಯ ಮೂರ್ತಿಯಾಗುವುದು ಸಾಧ್ಯವಾಗಲಿಲ್ಲ. 2029ಕ್ಕೂ ಮೋದಿಯೇ ಪ್ರಧಾನಿಯಾಗಲಿ ಎಂದು ಆಶಿಸುತ್ತಿದ್ದ, ಆಗ್ರಹಿಸುತ್ತಿದ್ದ ಭೈರಪ್ಪನವರಿಗೆ ಅದು ಮುಖ್ಯವೂ ಆಗಲಿಲ್ಲ...