ಮಹಾರಾಜ್ ಸಿನಿಮಾ, "ಧರ್ಮವನ್ನು ಅಪವ್ಯಾಖ್ಯಾನ ಮಾಡಲಾಗಿದೆ. ಧರ್ಮಗ್ರಂಥಗಳಲ್ಲಿ ಇಲ್ಲದ ಅನಾಚಾರಗಳನ್ನೆಲ್ಲ ಜಾರಿಗೆ ತರಲಾಗಿದೆ" ಎಂದು ಪ್ರತಿಪಾದಿಸುತ್ತಲೇ, ಗೀತೆಯು ಹೇಳುವ ಕರ್ಮಸಿದ್ಧಾಂತದ ನಿಜ ಸ್ವರೂಪವನ್ನು ಮರೆಮಾಚುತ್ತದೆ ಮತ್ತು ಧಾರ್ಮಿಕ ಮೂಲಭೂತವಾದಿಗಳನ್ನು ಮೆಚ್ಚಿಸಲು ಅಪವ್ಯಾಖ್ಯಾನವನ್ನೇ ನಿಜಪ್ರತಿಪಾದನೆ...