ಶ್ರೇಷ್ಠ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್, ಹಿಂದೊಮ್ಮೆ ಗೋಧ್ರಾ ಘಟನೆ ಕುರಿತು ಮಾತನಾಡಿದ್ದರು. ಒಡಲಾಳದಲ್ಲಿ ಅವಿತಿದ್ದ ಅಣೆಕಟ್ಟು ಒಡೆದು ಒಮ್ಮೆಲೆ ನುಗ್ಗತೊಡಗಿದ ಆ ಮಾತುಗಳು ಇಲ್ಲಿವೆ...
ಈ ಕ್ಷಣದಲ್ಲಿ ಏನೇಳೋದು... ಕತ್ತು ಬಗ್ಗಿಸಿಕೊಂಡು...
ನಮ್ಮ ನಡುವಿನ ಹಿರಿಯ ಜೀವ, ರಾಜೀವ್ ತಾರಾನಾಥ್ ಅವರಿಗೆ ಈಗ ಒಂಬತ್ತು ದಶಮಾನ. ಪ್ರತಿಭಾವಂತ ಕಲಾವಿದರ ನಿಡಿದಾದ ಬಾಳು, ದೀರ್ಘಾಯುವಿಗೆ ಮಾತ್ರ ಸಂಬಂಧಿಸಿರುವುದಿಲ್ಲ. ಪರಂಪರೆಯ ಯಾನಕ್ಕೆ, ಅದರೊಳಗಿನ ಸೃಜನಶೀಲ ಪ್ರಯೋಗ ಮತ್ತು ಸಾಹಸಗಳಿಗೆ...