ಸಿದ್ಧಲಿಂಗಯ್ಯನವರ ಕವಿತೆಗಳಿಗೆ ಮುಖಾಮುಖಿಯಾಗುವುದು ಎಂದರೆ, 1970 ರ ದಶಕದ ಜನಪರ ಚಳವಳಿಗಳು, ಹೋರಾಟಗಳೊಂದಿಗೆ ಮುಖಾಮುಖಿಯಾಗುವುದು; ಈ ನೆಲದ ಅಸ್ಪೃಶ್ಯರ, ದಮನಿತರ, ಶ್ರಮಿಕರ, ನೊಂದವರ ನಿಟ್ಟುಸಿರು ಅಕ್ಷರದ ಮೂಲಕ ಜೀವತಳೆದಿರುವ ಆದಿಮ ಪರಂಪರೆಯೊಂದಿಗೆ ಅನುಸಂಧಾನ...
ಯಾವುದೇ ಚಳವಳಿಗಳು ಆ ಕಾಲದ ಒತ್ತಡಗಳಿಂದ ರೂಪುಗೊಳ್ಳುತ್ತವೆ. ಕಾಲ ಗರ್ಭದಲ್ಲಿ ಹೂತುಹೋದ ಪ್ರತಿರೋಧದ ದನಿಗಳು ಮೊಳಕೆಯೊಡೆಯಲೂ ತಕ್ಕ ಕಾಲಕ್ಕೆ ಕಾಯುತ್ತವೆ ಎಂದು ಕಾಣುತ್ತದೆ. ಶತಮಾನಗಳ ದಲಿತ ಸಮುದಾಯದ ನೋವು-ಯಾತನೆಗಳು ಸ್ವಾಭಿಮಾನಿ, ಸಾಂಸ್ಕೃತಿಕ, ಸಾಮಾಜಿಕ...