ಜಗತ್ತು ಸಹನೆ ಕಳೆದುಕೊಳ್ಳುತ್ತಿದೆ. ಬಹಳಷ್ಟು 'ಅಗ್ರೆಸಿವ್' ಆಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಕೋಪಗೊಳ್ಳುವುದು, ಸ್ಮಿಮಿತ ಕಳೆದುಕೊಳ್ಳುವುದು, ಭಾವನೆಗಳ ಹತೋಟಿ ಇಲ್ಲದಿರುವುದು ಮನಸ್ಥಿತಿಯನ್ನು ಆವೇಗಗೊಳಿಸುತ್ತಿದೆ. ಈ ಮಾನಸಿಕ ಸ್ಥಿತಿಯು ಹಲ್ಲೆ, ಕೊಲೆಯಂತಹ ಹಿಂಸಾತ್ಮಕ ಕೃತ್ಯಗಳಿಗೆ ಕಾರಣವಾಗುತ್ತಿವೆ....