(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
"ನೋಡಪ್ಪ, ಇದೆಲ್ಲ ಸೇರಿ ಐದ್ ಸಾವಿರ ಬಂಡವಾಳ. ಬೆಳಗ್ಗೆ ಆರಕ್ಕೊಂಟ್ರೆ ಸಂಜೆ ಆರಾಯ್ತದೆ, ಮನಗೋಗದು. ಎಲ್ಲಾ ಖಾಲಿಯಾದ್ರೆ...
ಕೋಕಿಲಮ್ಮ ಪುಟ್ಟ ಹುಡುಗಿಯಾಗಿದ್ದಾಗ ಅಮ್ಮನ ಹೂ ವ್ಯಾಪಾರಕ್ಕೆ ನೆರವಾಗುತ್ತ, ಬಿಡುವು ಸಿಕ್ಕಾಗ ಆಡುತ್ತ, ದಣಿವಾರಿಸಿಕೊಳ್ಳುತ್ತ ಇದ್ದ ಜಾಗವದು. ಹೀಗೆ ಕೂತು 50 ವರ್ಷಗಳೇ ಉರುಳಿಹೋಗಿವೆ. ಬೆಂಗಳೂರು ಬೇಕಾದಷ್ಟು ಬದಲಾಗಿದೆ. ಆದರೆ, ಕೋಕಿಲಮ್ಮನವರು ಮಾತ್ರ...
"...ಒಬ್ಬರೆ ಅಂದ್ರೆ... ಏನ್ಮಾಡ್ಲಿ? ನನ್ನ ಕರ್ಮ... ಯಾರ್ ಕೇಳ್ತರೆ? ನನ್ನ ಗಂಡ್ ಇದ್ದ, ಪಿ ರಾಜನ್ ಅಂತ. ಸಿನಿಮಾ ಥಿಯೇಟರ್‌ನಲ್ಲಿ ಆಪರೇಟರ್ ಆಗಿದ್ರು. ರಾಜಕುಮಾರ್ ಸಂಬಂಧಿಕ ಗೋವಿಂದರಾಜು ಇದಾನಲ್ಲ, ಅವರ ಥಿಯೇಟರ್‌ನಲ್ಲಿ ಕೆಲಸ...