ಶನಿವಾರ ಈದಿನ.ಕಾಮ್ ವಿಡಿಯೋವೊಂದನ್ನ ಬಯಲಿಗೆಳೆದಿತ್ತು. ಅದೇನೂ ಹೊಸ ವಿಡಿಯೋ ಅಲ್ಲ. ಆದರೆ, ಇವತ್ತಿನ ಸಂದರ್ಭದಲ್ಲಿ ಅದು ಬಹಳ ಮುಖ್ಯವಾದ ವಿಡಿಯೋ ಆಗಿತ್ತು. ಅದು ಈ ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದ್ದು....
ಈಗ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ಮತದಾರರನ್ನು ತನ್ನತ್ತ ಸೆಳೆಯಲು ಬಿಜೆಪಿಗೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವಿಚಾರಗಳು ಬೇಕು. ಅದಕ್ಕಾಗಿಯೇ, ವಕ್ಫ್ ಆಸ್ತಿ ವಿಚಾರವನ್ನು ವಿವಾದಕ್ಕೆ ಸಿಲುಕಿಸಿ, ರಾಜ್ಯದಲ್ಲಿ ಗದ್ದಲ ಸೃಷ್ಟಿಸುತ್ತಿದೆ....