ಕೋಲಾರ : ದಸರಾ ದ ವಿಜಯ ದಶಮಿ ಪ್ರಯುಕ್ತ ನಗರದ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ಆವರಣದಲ್ಲಿ ಬನ್ನಿಮರ ಪೂಜೆಗೆ ಕೋಲಾರ ತಹಸೀಲ್ದಾರ್ ನಯನ ಹಾಗೂ ಉಪ ವಿಭಾಗಾಧಿಕಾರಿ ಡಾ. ಮೈತ್ರಿ ರಿಗೆ ನಿರಾಕರಿಸಿರವುದನ್ನು ಖಂಡಿಸಿ, ಭೀಮಸೇನೆ ಕರ್ನಾಟಕ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳರಿಗೆ ಮನವಿಯನ್ನು ಸಲ್ಲಿಸಿ ದರು.
ಈ ಸಂದರ್ಭದಲ್ಲಿ ಭೀಮಸೇನೆ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ಮಾತನಾಡಿ, ಅಕ್ಟೋಬರ್ 2 ರಂದು ಮುಜರಾಯಿ ಇಲಾಖೆ ಅಡಿಯಲ್ಲಿ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯ ನಡೆದ ಬನ್ನಿ ಮಂಟಪ ಪೂಜೆಯಲ್ಲಿ ತಹಸೀಲ್ದಾರ್ ನಯನ ಹಾಗೂ ಉಪ ವಿಭಾಗಾಧಿಕಾರಿ ಮಹಿಳೆಯರು ಎಂಬ ಕಾರಣಕ್ಕೆ ಪೂಜೆ ಸಲ್ಲಿಸಲು ಅವಕಾಶ ನಿರಾಕರಿಸಲಾಗಿವುದು ಖಂಡನೀಯ ಎಂದರು. 21ನೇ ಶತಮಾನದಲ್ಲೂ ಅಧಿಕಾರಿ ಗಳು ಅಧಿಕಾರಿಗಳು ಮಹಿಳೆಯರು ಎಂಬ ಕಾರಣಕ್ಕೆ ಪೂಜೆಗೆ ಅವಕಾಶ ಕೊಡದಿರುವುದು ಅಪರಾಧವೆ ಸರಿ ಎಂದು ದೂರಿದರು. ಇದು ಸಂವಿಧಾನಕ್ಕೆ ಎಸಗಿದ ಅಪಮಾನವಾಗಿದೆ. ಈ ತಪ್ಪನ್ನು ಕೂಡಲೇ ಸರಿಪಡಿಸಬೇಕಿದೆ. ಈ ಘಟನೆಗೆ ಕಾರಣರಾದವರನ್ನು ಕೂಡಲೇ ವಿಚಾರಣೆ ಗೆ ಒಳಪಡಿಸಿ ಕಾನೂನು ಕ್ರಮ ಕೈ ಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.
ಪ್ರಜಾಪ್ರಭುತ್ವ ದೇಶದಲ್ಲಿ ಮಹಿಳೆ ಅನ್ನುವ ಒಂದೇ ಕಾರಣಕ್ಕೆ ಬನ್ನಿ ಮಂಟಪದ ಪೊಜೆ ತಹಶೀಲ್ದಾರ್ ಮಾಡಬಾರದು ಅಂತ ಬೇರೆಯವರ ಕೈಯಲ್ಲಿ ಮಾಡಿಸಿರೋದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ. ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬಾರದು ಕೆಲವರು ವಿರೋಧ ಮಾಡಿದ್ರು ಸಹ ಸರ್ಕಾರ ಗಟ್ಟಿಯಾದ ತಿರ್ಮಾನ ಮಾಡಿತ್ತು. ಆದರೆ ಕೋಲಾರದಲ್ಲಿ ಈ ರೀತಿ ನಡೆದಿರೋದು ಬಹಳ ತಪ್ಪು ಮುಂದಿನ ದಿನಗಳಲ್ಲಿ ಈ ರೀತಿ ಆಗದ ಹಾಗೆ ನೋಡಿಕೊಳ್ಳಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ಗೀತಾ ಆಗ್ರಹಿಸಿದರು
ಇದನ್ನು ಓದಿದ್ದೀರಾ..?ಜಿ.ವಿ ಶ್ರೀ ರಾಮರೆಡ್ಡಿ ಬಡಾವಣೆಗೆ ತಹಶಿಲ್ದಾರ್ ಮನೀಷಾ ಎಸ್ ಪತ್ರಿ ಭೇಟಿ: ಮೂಲಭೂತ ಸೌಕರ್ಯ ಸಮಸ್ಯೆಗಳ ಪರಿಶೀಲನೆ
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಟಿ.ವಿಜಯಕುಮಾರ್, ಬೀರಜ್, ವೇಘಾಶ್ರೀ, ಓಂ.ಪ್ರಕಾಶ್, ಕರಿವಿ ಗೋಪಿ ಇತರ ರು ಇದ್ದರು.