2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬೇಡಿ; 11 ಮಕ್ಕಳ ಸಾವಿನ ಬಳಿಕ ಎಚ್ಚೆತ್ತ ಕೇಂದ್ರ

Date:

Advertisements

ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 11 ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳ ಸಾವಿನ ಬಳಿಕ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರವು, ‘2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬೇಡಿ’ ಎಂದು ಎಚ್ಚರಿಕೆ ನೀಡಿದೆ.

ಈ ಬಗ್ಗೆ ಆರೋಗ್ಯ ಸೇವೆಗಳ ನಿರ್ದೇಶನಾಲಯ(DGHS) ಪ್ರಕಟಣೆ ಹೊರಡಿಸಿದೆ. “ನಿರ್ದೇಶನವು ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ. ಮಕ್ಕಳಿಗೆ ತೀರಾ ಅಗತ್ಯವಿದ್ದರೆ ಮಾತ್ರ ಕೆಮ್ಮಿನ ಸಿರಪ್ ನೀಡಬೇಕು. ಇಲ್ಲದಿದ್ದಲ್ಲಿ, ಕೆಮ್ಮಿನ ಸಿರಪ್‌ ನೀಡುವುದನ್ನು ‘ಅವಾಯ್ಡ್’ ಮಾಡಬೇಕು” ಎಂದು ಸೂಚಿಸಿದೆ.

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಕೆಮ್ಮಿನ ಸಿರಪ್ ಸೇವಿಸಿ 9 ಮಕ್ಕಳ ಸಾವನ್ನಪ್ಪಿದ್ದಾರೆ. ಅಂತೆಯೇ, ರಾಜಸ್ಥಾನದ ಸಿಕಾರ್‌ನಲ್ಲಿ ಇದೇ ರೀತಿ ಇಬ್ಬರು ಮಕ್ಕಳು ಸಾವಪ್ಪಿದ ಘಟನೆಗಳು ವರದಿಯಾಗಿವೆ.

Advertisements

ಇದು ತೀವ್ರ ಕಳವಳ ಉಂಟುಮಾಡಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆದಾಗ್ಯೂ, ಮಧ್ಯಪ್ರದೇಶ ಮತ್ತು ನೆರೆಯ ರಾಜಸ್ಥಾನದ ಆರೋಗ್ಯ ಅಧಿಕಾರಿಗಳು, ಇದಕ್ಕೆ ಕಲುಷಿತ ಕೆಮ್ಮಿನ ಸಿರಪ್‌ಗಳ ಸೇವನೆ ಕಾರಣ ಎಂದು ಶಂಕಿಸಿದ್ದಾರೆ.

“ಸಾಮಾನ್ಯವಾಗಿ ಐದು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಸಿರಪ್ ನೀಡುವ ಅಗತ್ಯ ಇಲ್ಲ. ತೀರಾ ಅಗತ್ಯವಿದ್ದಾಗ ಮಾತ್ರ ಸೂಕ್ತ ಪ್ರಮಾಣದಲ್ಲಿ ಅತ್ಯಂತ ಕಡಿಮೆ ಅವಧಿಗೆ ಸಿರಪ್ ನೀಡಬೇಕು” ಎಂದು DGHS ಸೂಚಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸರ್ಕಾರಿ ವಾಹನ ದುರುಪಯೋಗ ಶಿಸ್ತು ಕ್ರಮಕ್ಕೆ ; ಅಂಬೇಡ್ಕರ್ ಸೈನ್ಯ ಒತ್ತಾಯ

ಜಿಲ್ಲಾ ಮ್ಯಾನೇಜರ್ (ಡಿ.ಎಂ.) ರವರು ತಮ್ಮ ಕುಟುಂಬಕ್ಕಾಗಿ ಖಾಸಗಿ ಉಪಯೋಗಕ್ಕೆ ಸರಕಾರಿ...

ರಾಯಚೂರು | ಗ್ರಾಮಸ್ಥ ಮೇಲೆ ಪಿಡಿಒ ಹಲ್ಲೆ ; ಅಮಾನತಿಗೆ ಆಗ್ರಹ : ಪ್ರಕರಣ ದಾಖಲು

ಮೇಲಾಧಿಕಾರಿಗೆ ದೂರು ನೀಡಿದ್ದ ಕಾರಣಕ್ಕೆ ಗ್ರಾಮಸ್ಥನೊಬ್ಬನ ಮೇಲೆ ಪಿಡಿಒ ಹಲ್ಲೆ ನಡೆಸಿದ...

ರಾಯಚೂರು |ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ನಿರ್ಲಕ್ಷ್ಯ : ಅಧಿಕಾರಿ ಅಮಾನತು

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಡಿ ತಾಲ್ಲೂಕು...

ಚಿಕ್ಕಮಗಳೂರು l ಹದಗೆಟ್ಟ ರಸ್ತೆ; ಅಧಿಕಾರಿಗಳ ನಿರ್ಲಕ್ಷ್ಯ; ಸುಮೊಟೊ ಪ್ರಕರಣ ದಾಖಲು

ಮಲೆನಾಡಿನ ಭಾಗಗಳಲ್ಲಿ ಅದೆಷ್ಟೋ ರಸ್ತೆಗಳು ಹಳ್ಳ ಗುಂಡಿಗಳ ರೀತಿಯಲ್ಲಿ ಕಾಣಿಸುತ್ತಿದೆ, ವಾಹನ...

Download Eedina App Android / iOS

X