ಕುಡಿದ ಮತ್ತಿನಲ್ಲಿ ಪ್ರವಾಸಿಗರ ನಡುವೆ ಹೊಡೆದಾಟ ಆಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ನಗರದ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿ ಭಾನುವಾರ ನಡೆದಿದೆ.
ಭಾನುವಾರ (ಜೂ.29) ರಾತ್ರಿ 11 ಗಂಟೆ ಸಮಾರಿಗೆ ಈ ಘಟನೆ ನಡೆದಿದ್ದು, ನಡುರಸ್ತೆಯಲ್ಲೇ ಪ್ರವಾಸಿಗರು ಹೊಡೆದಾಡಿಕೊಂಡಿದ್ದಾರೆ. ಸ್ಥಳೀಯರು ಗಲಾಟೆ ಬಿಡಿಸಲು ಎಷ್ಟೇ ಪ್ರಯತ್ನಿಸಿದರು ಮತ್ತೆ-ಮತ್ತೆ ಪ್ರವಾಸಿಗರ ಬಡಿದಾಡಿಕೊಂಡಿರುವ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ನಕಲಿ UPI: ಮೆಡಿಕಲ್ ಮಾಲೀಕನಿಗೆ ವಂಚನೆ
ಮೂವರು ಯುವಕರು ಹೊಡೆದಾಡಿಕೊಂಡಿದ್ದು, ಪ್ರವಾಸಿಗರ ಗಲಾಟೆಯ ಬಗ್ಗೆ ಸ್ಥಳೀಯರು ಮೂಡಿಗೆರೆ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ.