ಝೀ ನ್ಯೂಸ್‌ನ ‘ಮೆಹೆಂದಿ ಜಿಹಾದ್’ ಕಾರ್ಯಕ್ರಮ ತೆಗೆದು ಹಾಕಲು NBDSA ನಿರ್ದೇಶನ

Date:

Advertisements

ಕಳೆದ ವರ್ಷ ಪ್ರಸಾರಗೊಂಡ ‘ಮೆಹೆಂದಿ ಜಿಹಾದ್’ ಕುರಿತ ಕಾರ್ಯಕ್ರಮಗಳನ್ನು ತಕ್ಷಣವೇ ತೆಗೆದುಹಾಕುವಂತೆ NBDSAಯು ಝೀ ನ್ಯೂಸ್ ಚಾನೆಲ್‌ ಗೆ ಸೂಚನೆ ನೀಡಿದೆ.

ಮುಸ್ಲಿಂ ವಿರೋಧಿ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಝೀ ನ್ಯೂಸ್ ಚಾನೆಲ್ ವಿರುದ್ಧ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟಾಂಡರ್ಡ್ಸ್ ಅಥಾರಿಟಿ (NBDSA) ಈ ಕ್ರಮ ಕೈಗೊಂಡಿದೆ.

ಝೀ ನ್ಯೂಸ್ ಪ್ರಸಾರ ಮಾಡಿದ್ದ ಕಾರ್ಯಕ್ರಮದಲ್ಲಿ, ‘ಕರ್ವಾ ಚೌತ್’ ಹಬ್ಬದ ಸಂದರ್ಭ ಹಿಂದೂ ಮಹಿಳೆಯರಿಗೆ ಮೆಹೆಂದಿ ಹಚ್ಚುವ ಮೊದಲು ಮುಸ್ಲಿಂ ಕಲಾವಿದರು ಉಗುಳುತ್ತಾರೆ ಎಂಬ ಆಧಾರರಹಿತ ಹಾಗೂ ದ್ವೇಷ ಹರಡುವ ವಿಷಯಗಳನ್ನು ಒಳಗೊಂಡಿತ್ತು. NBDSA ಈ ಕಾರ್ಯಕ್ರಮವು ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಸ್ಪಷ್ಟವಾಗಿ ಹೇಳಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು

ನ್ಯಾಯಮೂರ್ತಿ (ನಿವೃತ್ತ) ಎ.ಕೆ. ಸಿಕ್ರಿ ಅವರ ನೇತೃತ್ವದ NBDSA, ಝೀ ನ್ಯೂಸ್ ಗೆ ಎಚ್ಚರಿಕೆ ನೀಡಿದ್ದು, ಭವಿಷ್ಯದಲ್ಲಿ ಇಂತಹ ವಿಷಯಗಳನ್ನು ಪ್ರಸಾರ ಮಾಡುವಾಗ ವೃತ್ತಿಪರ ಜವಾಬ್ದಾರಿಯನ್ನು ಪಾಲಿಸಲು ಸೂಚನೆ ನೀಡಿದೆ.

2024ರ ಅಕ್ಟೋಬರ್‌ನಲ್ಲಿ ಈ ಕಾರ್ಯಕ್ರಮ ಪ್ರಸಾರವಾದ ಬಳಿಕ ಇಂದ್ರಜೀತ್ ಘೋರ್ಪಡೆ (@jeetxg) ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ಡಿಜಿಟಲ್ ಸ್ವಾತಂತ್ರ ಜಾಗೃತಿ ಅಭಿಯಾನ

“ಡಿಜಿಟಲ್ ಸ್ವಾತಂತ್ರ” ಅಭಿಯಾನದ ಅಂಗವಾಗಿ ರಾಜ್ಯವ್ಯಾಪಿಯಾಗಿ ಕೈಗೊಂಡಿರುವ ಸಾಲಿಡಾರಿಟಿ ಯೂತ್ ಮೂವ್ಮೆಂಟ್...

ರಾಯಚೂರು | ಅಪ್ರಾಪ್ತೆಯರ ಅಪಹರಣಕ್ಕೆ ಯತ್ನ ಆರೋಪ – ಸಾರ್ವಜನಿಕರಿಂದ ವ್ಯಕ್ತಿಗೆ ಥಳಿತ

ಅಪ್ರಾಪ್ತೆ ಹೆಣ್ಣುಮಕ್ಕಳನ್ನು ಅಪಹರಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಬಳಿಕ...

ಉತ್ತರ ಕನ್ನಡ | ಜಿಲ್ಲೆಯಲ್ಲಿ ಸಮೀಕ್ಷೆ ಚುರುಕು: ರಾಜ್ಯದಲ್ಲಿ 6ನೇ ಸ್ಥಾನ ಪಡೆದ ಜಿಲ್ಲೆ

ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ...

Download Eedina App Android / iOS

X