ರಾಯಚೂರು | ಅಪ್ರಾಪ್ತೆಯರ ಅಪಹರಣಕ್ಕೆ ಯತ್ನ ಆರೋಪ – ಸಾರ್ವಜನಿಕರಿಂದ ವ್ಯಕ್ತಿಗೆ ಥಳಿತ

Date:

Advertisements

ಅಪ್ರಾಪ್ತೆ ಹೆಣ್ಣುಮಕ್ಕಳನ್ನು ಅಪಹರಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರೇ ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಮಾನ್ವಿ ತಾಲ್ಲೂಕು ಕುರ್ಡಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿ ರಾಯಚೂರು ತಾಲೂಕಿನ ದಿನ್ನಿ ಗ್ರಾಮದವನು ಎಂದು ತಿಳಿದುಬಂದಿದೆ. ಸಂಜೆ ವೇಳೆ ಕುರ್ಡಿ ಗ್ರಾಮದ ಕುರಿಗಾಹಿಯೊಬ್ಬರ 5ನೇ ತರಗತಿ ಹಾಗೂ 2ನೇ ತರಗತಿ ಓದುತ್ತಿರುವ ಇಬ್ಬರು ಹೆಣ್ಣುಮಕ್ಕಳ ಬಳಿ ಅಪರಿಚಿತ ವ್ಯಕ್ತಿ ಬಂದು “ನಿಮ್ಮ ತಂದೆ ಕರೆದಿದ್ದಾರೆ” ಎಂದು ಹೇಳಿ ಬೈಕ್ ಮೇಲೆ ಕೂರಿಸಿಕೊಂಡು ಹೋಗಿದ್ದಾನೆ.

ಮಕ್ಕಳು ಅನುಮಾನಗೊಂಡು, “ತಂದೆ ಕುರಿ ಮೇಯಿಸುವ ದಾರಿಯಲ್ಲಿ ಹೋಗುತ್ತಿಲ್ಲ” ಎಂದು ಕೇಳಿದರೂ ಆರೋಪಿ ಸ್ಪಂದಿಸದೆ ಮುಂದುವರಿದಿದ್ದಾನೆ. ಈ ವೇಳೆ ಕಂಬಲತ್ತಿ ಗ್ರಾಮ ತಲುಪಿದಾಗ, ಬಾಲಕಿಯರಲ್ಲಿ ಒಬ್ಬಳು ಕಿರುಚಿ ಬೈಕ್‌ನಿಂದ ಜಿಗಿದು ತಪ್ಪಿಸಿಕೊಂಡಿದ್ದಾಳೆ. ಬಳಿಕ ಸ್ಥಳೀಯರ ಸಹಾಯದಿಂದ ತಂದೆಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾಳೆ.

Advertisements

ಘಟನೆಯ ಬಗ್ಗೆ ಮಾಹಿತಿ ದೊರೆತ ತಕ್ಷಣ ಬಾಲಕಿಯ ತಂದೆ ಸಂಬಂಧಿಕರನ್ನು ವಿಷಯ ತಿಳಿಸಿದಾಗ ಆರೋಪಿಯನ್ನು ಹಿಡಿದು ಮತ್ತೊಬ್ಬ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಳಿಕ ಗ್ರಾಮಸ್ಥರ ಆಕ್ರೋಶ ತಾಳಲಾರದಂತಾಗಿದ್ದು ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಮಾನ್ವಿ ಠಾಣೆಯ ಪಿಎಸ್ ಐ ಅವರಿಗೆ ಕೇಳಿದಾಗ ಅಪಹರಣದ ಯತ್ನ ಸುಳ್ಳು, ಬಾಲಕಿಯರೇ ಡ್ರಾಪ್ ಕೇಳಿದ್ದರಿಂದ ಬೈಕ್ ಹತ್ತಿಸಿಕೊಂಡಿದ್ದ, ಸಾರ್ವಜನಿಕರಿಗೆ ಅನ್ಯಥಾ ಭಾವಿಸಿ ಥಳಿಸಿ ಠಾಣೆಗೆ ಕರೆತಂದಿದ್ದಾರೆ. ವಿಚಾರಣೆ ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಮೂರು ದಿನದಲ್ಲಿ ಸಮೀಕ್ಷೆ ಮುಕ್ತಾಯ : ಶಿಕ್ಷಕನ ಕಾರ್ಯಕ್ಕೆ ಜಿಲ್ಲಾಡಳಿತ ಪ್ರಶಂಸೆ

ಈ ಕುರಿತು ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಕುಡಿದ ಮತ್ತಿನಲ್ಲಿ ಇದ್ದ ಎನ್ನಲಾಗಿದ್ದು ದಿನ್ನಿ ಗ್ರಾಮಸ್ಥರು ಹಾಗೂ ಬಾಲಕಿಯ ತಂದೆ,ಸಂಬಂಧಿಕರ ಸಮ್ಮುಖದಲ್ಲಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಡಲಾಗಿದೆ ಎಂದು ಕುರ್ಡಿ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು ದಸರಾ : ಸಚಿವರಿಂದ ವಿಶೇಷ ಪೂಜೆ

ತುಮಕೂರು ದಸರಾ ಉತ್ಸವದ ಕಡೆಯ ದಿನವಾದ ವಿಜಯದಶಮಿಯಂದು ಗೃಹ ಹಾಗೂ ಜಿಲ್ಲಾ...

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

Download Eedina App Android / iOS

X