ಸುರಿದ ಧಾರಾಕಾರ ಮಳೆಗೆ ಮೇಲ್ಚಾವಣೆ ಗೋಡೆ ಕುಸಿದು ವೃದ್ದೆ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ನಗರದ ಗಂಜ್ ವೃತ್ತದ ಬಳಿ ಮಧ್ಯಾಹ್ನ ನಡೆದಿದೆ.
ಮೃತಪಟ್ಟ ವೃದ್ಧೆಯನ್ನು ಈಶಮ್ಮ ಅಂದಾಜು(60) ಎಂದು ಹೇಳಲಾಗಿದ್ದು, ಮನೆಯಲ್ಲಿ ತಾಯಪ್ಪ ಹಾಗೂ ಇನ್ನೊಬ್ಬ ಮಹಿಳೆ ಬದುಕುಳಿದಿದ್ದಾರೆ.
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಗೋಡೆಯು ಕುಸಿದು ಬಿದ್ದಿದೆ ಎನ್ನಲಾಗಿದೆ. ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ಠಾಣೆಯ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಿಸಿದ್ದು ವಯಸ್ಸಾದ ಈಶಮ್ಮ ಕಟ್ಟಡದ ಅವಶೇಷಗಳಡಿ ಸಿಲುಕಿ ಅವರು ತೀವ್ರಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಿಗಮ-ಮಂಡಳಿ ನೇಮಕಾತಿಯಲ್ಲಿ ಜಿಲ್ಲೆಗೆ ಅನ್ಯಾಯ
ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಸಂಗಮೇಶ, ಪವನ್, ಸಾಬಣ್ಣ, ದೇವರಾಜ ಪಾಲ್ಗೊಂಡಿದ್ದರು.
