“ಡಿಜಿಟಲ್ ಸ್ವಾತಂತ್ರ” ಅಭಿಯಾನದ ಅಂಗವಾಗಿ ರಾಜ್ಯವ್ಯಾಪಿಯಾಗಿ ಕೈಗೊಂಡಿರುವ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಶುಕ್ರವಾರ ಸಿಂಧನೂರಿನ ಬಸವ ವೃತ್ತ ಹಾಗೂ ಟಿಪ್ಪು ಸುಲ್ತಾನ್ ವೃತ್ತ ಬಡಿಬಸ್‌ನಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹ್ಯಾಕಿಂಗ್, ಕಳ್ಳತನ ಹಾಗೂ ಡಿಜಿಟಲ್ ಮೋಸಗಳಿಂದ ಎಚ್ಚರಿಸುವುದು ಮತ್ತು ಸುರಕ್ಷಿತವಾಗಿ ಆನ್‌ಲೈನ್ ವಲಯವನ್ನು ಬಳಸಲು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನಗರದ ಕೆಲವು ವೃತ್ತಗಳಲ್ಲಿ ಜಾಗೃತ ಮೂಡಿಸುವ ಮಳಿಗೆಗಳು ವಿಶೇಷವಾಗಿ ಸ್ಥಾಪಿಸಲಾಯಿತು.
ರಾಜ್ಯದಲ್ಲಿ ಸೈಬರ್ ವಂಚನೆ, ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ಹಾಗೂ ಗೇಮಿಂಗ್ ವ್ಯಸನದಿಂದ ಹೆಚ್ಚುತ್ತಿರುವ ಅಪಾಯಗಳ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇವು ಕೇವಲ ಮನರಂಜನೆ ಎಂಬ ನೆಪದಲ್ಲಿ ಪ್ರವೇಶಿಸಿ, ಜೀವನವನ್ನು ಹಾಳುಮಾಡುವುದು, ಕುಟುಂಬದ ಉಳಿತಾಯವನ್ನು ನಾಶಮಾಡುವುದು, ಜನರನ್ನು ಸಾಲದ ಬಲೆಗೆ ಸಿಲುಕಿಸುವುದು ಹಾಗೂ ಆತ್ಮಹತ್ಯೆಗಳ ಮಟ್ಟಿಗೆ ಕರೆದೊಯ್ಯುತ್ತಿದೆ ಇಂತಹ ಜಾಲೆಯಿಂದ ದೂರವನ್ನಾಗಿಡುವುದು ಜಾಗೃತಿ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಂಘಟಕರು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸೈಬರ್ ವಂಚನೆ, ಜೂಜಾಟ, ವ್ಯಸನದ ವಿರುದ್ಧ ಸಾಲಿಡಾರಿಟಿ ಜಾಗೃತಿ ಅಭಿಯಾನ : ಸೈಯದ್ ತನ್ವೀರ್
ಸ್ಥಳೀಯ ಜನರು ಈ ಜಾಗೃತಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದು, ಇಂತಹ ಅಭಿಯಾನಗಳು ಸಮಾಜದಲ್ಲಿ ಹೆಚ್ಚಾಗಿ ನಡೆಯಬೇಕು. ಇಂತಹ ಕಾರ್ಯಕ್ರಮದಿಂದ ಡಿಜಿಟಲ್ ಜಾಗೃತಿಯನ್ನು ಬೆಳೆಸಲು ಸಹಾಯಕವಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ತಾಲ್ಲೂಕು ಅಧ್ಯಕ್ಷ ಅಬ್ಯುಲೈಸ್ ನಾಯ್ಕ, ಡಾ. ವಾಸೀಮ್, ತನ್ವೀರ್, ಸಿರಾಜ್ ಪಾಷಾ, ನಯೀಮ್, ಇರ್ಫಾನ್, ಫಾರೂಖ್ ಅತ್ತರ್ ಇಂತಿಯಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

