ಉತ್ತರ ಕನ್ನಡ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಸಲುವಾಗಿ ಸಾರ್ವಜನಿಕರಲ್ಲಿ ರಸ್ತೆ ಅಪಘಾತದ ಬಗ್ಗೆ ಮತ್ತು ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರವಾರದಲ್ಲಿ ಪೊಲೀಸ್ ಇಲಾಖೆ ಇಂದು ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ಆಯೋಜಿಸಿದ್ದರು.
ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಸವಾರಿ ಯಿಂದ ಅಪಘಾತವಾದಾಗ ಸಾವುಗಳು ಹೆಚ್ಚಾಗಿ ಸಂಭವಿಸುತ್ತವೆ. ಪ್ರತಿ ಮನೆಯಲ್ಲಿಯೂ ದ್ವಿಚಕ್ರ ವಾಹನಗಳಿದ್ದು, 18 ವರ್ಷ ತುಂಬಿದ ಕೂಡಲೇ ಮಕ್ಕಳಿಗೆ ವಾಹನ ಕೊಡಿಸುತ್ತಾರೆ. ಆದರೆ ಪಾಲಕರು ಹೆಲ್ಮೆಟ್ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದಿಲ್ಲ. ಮನೆಗೆ ಆಧಾರವಾಗಿರುವವರೆ ರಸ್ತೆ ಅಪಘಾತದಿಂದ ಮೃತರಾದರೆ ಆ ಕುಟುಂಬಗಳು ಬೀದಿಗೆ ಬರುತ್ತವೆ ಆದ್ದರಿಂದ ಈ ಜಾಗೃತಿ ಮೂಡಿಸುತ್ತಿದ್ದೆವೆ. ಹಾಗೂ ಮುಂದಿನ ತಿಂಗಳಿಂದ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವರಿಗೆ ದಂಡ ಹಾಕುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರು ಹೇಳಿದರು.
ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ, ಈ ವರ್ಷ ಜಿಲ್ಲೆಯಾದ್ಯಂತ 33,111 IMV (Indian Motor Vehicle) ಪ್ರಕರಣಗಳು ದಾಖಲಾಗಿದ್ದು, 1,169 ಜನರಿಗೆ ಗಂಭೀರ ಗಾಯಗಳಾಗಿವೆ. 2024 ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 260 ಹಾಗೂ ಒಟ್ಟು 37,151 ಪ್ರಕರಣಗಳು ದಾಖಲಾಗಿದ್ದವು. 2025ರಲ್ಲಿ ಈಗಾಗಲೇ 33 ಸಾವಿರ ಪ್ರಕರಣಗಳು ದಾಖಲಾಗಿದ್ದು 179 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಈಜು ಸ್ಪರ್ಧೆಯಲ್ಲಿ ಡಬಲ್ ಗೋಲ್ಡ್; ರಾಜ್ಯಮಟ್ಟಕ್ಕೆ ಆಯ್ಕೆಯಾದ ಮಾರಿಕಾಂಬ ಕಾಲೇಜು ವಿದ್ಯಾರ್ಥಿನಿ
ಅತೀವೇಗದ ವಾಹನ ಚಲಾವಣೆ, ಮದ್ಯಪಾನ ಮಾಡಿ ಡ್ರೈವಿಂಗ್ ಮಾಡಿರುವ ಪ್ರಕರಣಗಳು ಸಹ ಹೆಚ್ಚಾಗಿದ್ದು, ಒಟ್ಟು 307 ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು 14.90 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಜೊತೆಗೆ 150 ಜನರ ಚಾಲನಾ ಪರವಾನಗಿಯನ್ನು (DL) ರದ್ದುಪಡಿಸಲಾಗಿದೆ. ಎಂದು ಅಧಿಕಾರಿಗಳು ಮಾಹಿತಿ ನೀಡಿದರು.