ಗುತ್ತಿಗೆದಾರರಿಗೆ ಅನ್ಯಾಯ ಗುತ್ತಿಗೆ ಪರವಾನಗಿ ಸರ್ಕಾರಕ್ಕೆ ವಾಪಸು ಕೊಡುವ ಮೂಲಕ ಪ್ರತಿಭಟನೆ,

Date:

Advertisements

ಕೋಲಾರ: ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಪ್ಯಾಕೇಜ್ ಕಾಮಗಾರಿಗಳಿಂದ ಆಗುತ್ತಿರುವ ಅನ್ಯಾಯ ಹಾಗೂ ಗುತ್ತಿಗೆ ಮೀಸಲಾತಿ ಆದೇಶವನ್ನು ಹರಿದುಹಾಕಿ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ಎಸ್ಸಿ ಎಸ್ಟಿ ಗುತ್ತಿಗೆದಾರರ ಸಂಘದಿಂದ ಬುಧವಾರ ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಿಂದ ಬೈಕ್ ರ್ಯಾಲಿ ಪ್ರಾರಂಭವಾಗಿ ಕ್ಲಾಕ್ ಟವಕ್, ಹೊಸ ಬಸ್ ನಿಲ್ದಾಣ ಮೆಕ್ಕೆ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿದ ಪ್ರತಿಭಟನಾಕಾರರು ಸರ್ಕಾರದ ಕ್ರಮವನ್ನು ಖಂಡಿಸಿ ಘೋಷಣೆ ಕೂಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡುವ ಮೂಲಕ ಒತ್ತಾಯಿಸಿದರು

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಾರ್ಜೆನಹಳ್ಳಿ ಬಾಬು ಮಾತನಾಡಿ ಜಿಲ್ಲೆಯಲ್ಲಿ 5 ರಿಂದ 6 ಕಾಮಗಾರಿಗಳನ್ನು ಒಂದು ಪ್ಯಾಕೇಜ್ ರೀತಿಯಲ್ಲಿ ಕಾಮಗಾರಿ ಮಾಡಿ ಅದಕ್ಕೆ 5 ಕೋಟಿ ಅನುದಾನ ನೀಡಲು ಅಧಿಕಾರಿಗಳು ಟೆಂಡರ್ ಕರೆದಿದ್ದಾರೆ ಇದರಿಂದಾಗಿ ಜಿಲ್ಲೆಯ ಸಾಮಾನ್ಯ ಗುತ್ತಿಗೆದಾರರು ಕಾಮಗಾರಿಗಳನ್ನು ಪಡೆಯಲು ಸಾಧ್ಯವಿಲ್ಲ ಬೇರೆ ಬೇರೆ ಜಿಲ್ಲೆಗಳ ಪ್ರಭಾವಿಗಳಿಗೆ ಟೆಂಡರ್ ನೀಡಿ ಜಿಲ್ಲೆಯ ಗುತ್ತಿಗೆದಾರರನ್ನು ವಂಚನೆ ಮಾಡಿದ್ದಾರೆ ಎಂದು‌ ಆರೋಪಿಸಿದರು.

ದಲಿತ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹಿಂದೆ ಸಿದ್ದರಾಮಯ್ಯ ಅವರು ಸುಮಾರು ಒಂದು ಕೋಟಿವರಗೂ ಮೀಸಲಾತಿ ಆಧಾರದಲ್ಲಿ ಗುತ್ತಿಗೆ ನೀಡಿದ್ದರು ಇದರಿಂದಾಗಿಯೇ ಅಹಿಂದ ವರ್ಗಗಳು ಆರ್ಥಿಕಾಭಿವೃದ್ಧಿ ಸಾಧಿಸಲು ಸಾಧ್ಯವಾಗಿತ್ತು ಇವತ್ತು ಅಧಿಕಾರಿ ವರ್ಗ ಮತ್ತು ಕೆಲವು ಪ್ರಭಾವಿ ಜನಪ್ರತಿನಿಧಿಗಳು ಈ ಆದೇಶವನ್ನು ಪ್ಯಾಕೇಜ್ ಮಾಡಿ ಅವಕಾಶದಿಂದ ವಂಚಿತರಾಗಿ ಮಾಡಿದ್ದಾರೆ ಈ ವಿಷಯವಾಗಿ ಎಸ್ಟಿ, ಎಸ್ಸಿ ಹಾಗೂ ಒಬಿಸಿ ಗುತ್ತಿಗೆದಾರರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಲ್ಲ ಎಂದು ಆರೋಪಿಸಿದರು.

ದಲಿತರ ಅಭಿವೃದ್ಧಿಗೆ ಅವಕಾಶಗಳಿಗಾಗಿ ಸರ್ಕಾರವೇ ಸಾಮಾಜಿಕ ನ್ಯಾಯದಡಿ ಗುತ್ತಿಗೆದಾರರಿಗೆ ಮೀಸಲಾತಿ ನೀಡಿದೆ. ಆದರೆ ಅಧಿಕಾರಿಗಳು ನಮಗೆ ವಂಚಿಸುತ್ತಿದ್ದಾರೆ ಇದರಿಂದಾಗಿ ನಮ್ಮ ಪಾಲಿಗೆ ಮರಣ ಶಾಸನವಾಗಿದೆ ಸರ್ಕಾರ ಕೊಟ್ಟಿರುವ ಪರವಾನಿಗೆ ವಾಪಸು ನೀಡಿದ್ದು ಮೀಸಲಾತಿಯ ಪ್ರತಿಯನ್ನು ಹರಿದು ಹಾಕಲಾಗಿದೆ ಕೂಡಲೇ ಪ್ಯಾಕೇಜ್ ಕಾಮಗಾರಿ ರದ್ದು ಮಾಡಬೇಕು ಇಲ್ಲದೇ ಹೋದರೆ ಮುಂದೆ ಉಗ್ರವಾದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು

ಇದನ್ನು ಓದಿದ್ದೀರಾ…? ಶ್ರೀನಿವಾಸಪುರ | ಬಲಾಢ್ಯರಿಂದ ನಿರಂತರ ಕಿರುಕುಳ: ದಯಾಮರಣಕ್ಕೆ ಅರ್ಜಿ ಹಾಕಿದ ದಲಿತ ಕುಟುಂಬ!

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್, ಉಪಾಧ್ಯಕ್ಷ ವೆಂಕಟರೆಡ್ಡಿ, ಹಿಂದುಳಿದ ವರ್ಗದ ಜಯರಾಮ್, ತಾಲೂಕು ಅಧ್ಯಕ್ಷರಾದ ಮೋಹನ್ ಕಾಂತ್, ರಾಮಪ್ಪ, ಗಣೇಶ್, ಗೋವಿಂದರಾಜು, ಅಮರೇಶ್, ಕೃಷ್ಣಪ್ಪ, ಮುಖಂಡರಾದ ಅಂಬರೀಷ್, ಪ್ರಕಾಶ್, ನರಸಿಂಹ ಮೂರ್ತಿ ಮುಂತಾದವರು ಇದ್ದರು.

WhatsApp Image 2025 06 24 at 16.24.21 6207fd1d
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

ಉಡುಪಿ | ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ದೇಶದಲ್ಲಿ ಸಮಾನತೆಯನ್ನು ಬಯಸಿದ್ದೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು, ಶೂದ್ರ ಮತ್ತು ಅತ್ಯಂತ...

Download Eedina App Android / iOS

X