ಚೀನಾಕ್ಕೆ ಶೇ 155 ಸುಂಕದ ಬೆದರಿಕೆಯೊಡ್ಡಿದ ಟ್ರಂಪ್

Date:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಚೀನಾದ ಮೇಲಿನ ವಾಣಿಜ್ಯ ಒತ್ತಡವನ್ನು ಮತ್ತೊಮ್ಮೆ ಹೆಚ್ಚಿಸಿದ್ದು, “ನ್ಯಾಯಸಮ್ಮತ ವಾಣಿಜ್ಯ ಒಪ್ಪಂದ” ಕೈಗೊಳ್ಳದಿದ್ದಲ್ಲಿ ಚೀನಾದ ಸರಕುಗಳ ಮೇಲೆ ಶೇ 155 ರಷ್ಟು ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.

- Advertisement -

ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಶ್ವೇತ ಭವನದಲ್ಲಿ “ಕ್ರಿಟಿಕಲ್ ಮಿನರಲ್ಸ್ ಒಪ್ಪಂದ”ಕ್ಕೆ ಸಹಿ ಹಾಕಿದ ನಂತರ ಟ್ರಂಪ್ ಈ ಹೇಳಿಕೆ ನೀಡಿದರು. ಈ ಒಪ್ಪಂದದ ಉದ್ದೇಶ ಅಮೆರಿಕಾದ ಸರಬರಾಜು ಸರಪಳಿಯನ್ನು ಬಲಪಡಿಸುವುದು ಮತ್ತು ಚೀನಾದ ಅವಲಂಬನೆಯನ್ನು ಕಡಿಮೆ ಮಾಡುವುದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

“ಚೀನಾ ನಮ್ಮೊಂದಿಗೆ ಗೌರವದಿಂದ ವರ್ತಿಸುತ್ತಿದೆ. ಅವರು ಈಗಾಗಲೇ 55 ಶೇಕಡಾ ಸುಂಕವನ್ನು ಪಾವತಿಸುತ್ತಿದ್ದಾರೆ. ಅದು ತುಂಬಾ ದೊಡ್ಡ ಮೊತ್ತ. ಆದರೆ ನವೆಂಬರ್ 1ರೊಳಗೆ ನ್ಯಾಯಸಮ್ಮತ ಒಪ್ಪಂದ ಆಗದಿದ್ದರೆ, ಆ ಸುಂಕವನ್ನು ಶೇ. 155 ಕ್ಕೆ ಏರಿಸುತ್ತೇವೆ,” ಎಂದು ಅವರು ಎಚ್ಚರಿಸಿದರು.

ಅಮೆರಿಕ ಕಳೆದ ಕೆಲವು ತಿಂಗಳಲ್ಲಿ ಹಲವು ರಾಷ್ಟ್ರಗಳೊಂದಿಗೆ ಹೊಸ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಟ್ರಂಪ್ ತಿಳಿಸಿದ್ದಾರೆ. “ಹಿಂದೆ ಅಮೆರಿಕದ ಮೇಲೆ ಅನ್ಯಾಯವಾಗಿ ಲಾಭ ಪಡೆದಿದ್ದ ರಾಷ್ಟ್ರಗಳು ಈಗ ಅದನ್ನು ಮಾಡಲಾಗುವುದಿಲ್ಲ, ತನ್ನ ಆಡಳಿತವು ಅನ್ಯಾಯ ವಾಣಿಜ್ಯ ಕ್ರಮಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು

ಇದಕ್ಕೂ ನಡುವೆ, ಚೀನಾ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕಾದಿಂದ ಒಂದು ಸಿಂಗಲ್ ಸೋಯಾಬೀನ್ ಸರಕನ್ನು ಕೂಡ ಆಮದು ಮಾಡಿಲ್ಲ ಎಂಬ ವರದಿ ಹೊರಬಿದ್ದಿದೆ. 2018ರ ನಂತರ ಇದೇ ಮೊದಲ ಬಾರಿಗೆ ಈ ರೀತಿಯ ಸ್ಥಿತಿ ಉಂಟಾಗಿದೆ ಎಂದು ವರದಿ ತಿಳಿಸಿದೆ.

ಟ್ರಂಪ್ ಈಗಾಗಲೇ ನವೆಂಬರ್ 1ರಿಂದ ಚೀನಾದ ಸರಕುಗಳ ಮೇಲೆ 100 ಶೇಕಡಾ ಹೊಸ ಸುಂಕಗಳು ಮತ್ತು ಕ್ರಿಟಿಕಲ್ ಸಾಫ್ಟ್‌ವೇರ್‌ಗಳ ಮೇಲೆ ಹೊಸ ರಫ್ತು ನಿರ್ಬಂಧಗಳು ಜಾರಿಗೆ ಬರುವುದಾಗಿ ಘೋಷಿಸಿದ್ದರು.

“ಚೀನಾದ ಅಧ್ಯಕ್ಷ ಜಿನ್‌ಪಿಂಗ್ ನಡುವಿನ ಸಂಬಂಧ ಅತ್ಯಂತ ಉತ್ತಮವಾಗಿದೆ. ನಾವು ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೂ, ಪರಸ್ಪರ ಗೌರವವಿದೆ. ಅವರು ಸುಂಕದ ಮೂಲಕ ಅಮೆರಿಕಾಗೆ ಬಹಳಷ್ಟು ಹಣ ಪಾವತಿಸುತ್ತಿದ್ದಾರೆ. ಅದನ್ನು ಕಡಿಮೆ ಮಾಡಲು ಅವರಿಗೆ ಬಯಕೆ ಇದೆ, ಆದರೆ ಅದಕ್ಕಾಗಿ ನಮಗೂ ಅನುಕೂಲಕರವಾದ ಬದಲಾವಣೆಗಳು ಬೇಕು,” ಎಂದು ಟ್ರಂಪ್‌ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕ ಹಿಂದಿಕ್ಕಿ ಭಾರತದ ನಂ.1 LNG ಪೂರೈಕೆದಾರನಾದ ಓಮನ್‌!

ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಅನಿಲ ಪೂರೈಕೆಯಲ್ಲಿ...

ರಷ್ಯಾದಿಂದ ತೈಲ ಖರೀದಿಸಿದ ಅಮೆರಿಕ -ಜಾಗತಿಕ ಸೋಜಿಗ

ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿ,...

ಲಡಾಖ್ ಭಾರತದ ಅವಿಭಾಜ್ಯ ಅಂಗ, ಚೀನಾ ನಿರಾಕರಿಸಿದರೂ‌ ಇದೇ ಸತ್ಯ; ಡ್ರ್ಯಾಗನ್‌ಗೆ ಭಾರತ ತಿರುಗೇಟು!

ಲಡಾಖ್ ಕೇಂದ್ರಾಡಳಿತ ಪ್ರದೇಶದ 28 ಪ್ರಮುಖ ಹಾಗೂ ಕಾರ್ಯತಂತ್ರದ (Strategic) ಸ್ಥಳಗಳಿಗೆ...