ಇರಾನ್‌ ಮೇಲಿನ ದಾಳಿಗೆ ಅಮೆರಿಕ ಹೊಂಚು; ತ್ರಿಶಂಕು ಸ್ಥಿತಿಯಲ್ಲಿ ಪಾಕ್

Date:

ಆರ್ಥಿಕ ಬಿಕ್ಕಟ್ಟಿನಿಂದ ಆಂತರಿಕ ಪ್ರತಿಭಟನೆಗಳನ್ನು ಎದುರಿಸುತ್ತಿರುವ, ಅತೀ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ಇರಾನ್‌ ಮೇಲೆ ದಾಳಿ ನಡೆಸಲು ಅಮೆರಿಕ ಹೊಂಚುಹಾಕುತ್ತಿದೆ. ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮ ಕೈಗೊಂಡರೆ, ಪರಿಸ್ಥಿತಿ ಬದಲಾಗುತ್ತದೆ ಎಂದು ಬೆದರಿಕೆಯೊಡ್ಡಿದೆ. ಜೊತೆಗೆ, ಇರಾನ್ ಮೇಲೆ ಆರ್ಥಿಕ ನಿರ್ಬಂಧ ಹೇರಿದೆ. ಮಾತ್ರವಲ್ಲ, ಇರಾನ್ ಜೊತೆ ವ್ಯವಹರಿಸುವ ರಾಷ್ಟ್ರಗಳ ಮೇಲೆ 25% ಸುಂಕ ಹೇರುವುದಾಗಿಯೂ ಬೆದರಿಕೆ ಹಾಕಿದೆ. ಆಂತರಿಕ ಪ್ರತಿಭಟನೆಗಳನ್ನೇ ನೆಪವಾಗಿಟ್ಟುಕೊಂಡು ಇರಾನ್ ಮೇಲೆ ದಾಳಿಗೂ ಮುಂದಾಗಿದೆ.

- Advertisement -

ಇರಾನ್‌ ಮೇಲೆ ಅಮೆರಿಕ ದಾಳಿ ನಡೆಸುವುದೇ ಆದರೆ, ಅದಕ್ಕಾಗಿ ಪಾಕಿಸ್ತಾನದ ವಾಯು ಪ್ರದೇಶ ಮತ್ತು ಸೇನಾ ನೆಲೆಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳೂ ಇವೆ. ಅಮೆರಿಕ ನೇತೃತ್ವದ ನ್ಯಾಟೋದಲ್ಲಿ ‘Major Non-NATO Ally’ (MNNA) ಸ್ಥಾನಮಾನ ಪಡೆದುಕೊಂಡಿರುವ ಪಾಕಿಸ್ತಾನ ತನ್ನ ಸೇನಾ ನೆಲೆಯನ್ನು ಅಮೆರಿಕದ ದಾಳಿಗಾಗಿ ಬಿಟ್ಟುಕೊಡಬೇಕಾದ ಒತ್ತಡ ಎದುರಾಗುವ ಸಧ್ಯತೆಗಳಿವೆ. ಇದು, ಅಮೆರಿಕ-ಇರಾನ್ ಜಗಳದಲ್ಲಿ ಪಾಕಿಸ್ತಾನವನ್ನು ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿಸಲಿದೆ. ಆದ್ದರಿಂದಲೇ, ಪರಿಸ್ಥಿತಿಗಳ ಬಗ್ಗೆ ಚರ್ಚಿಸಲು ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಈಗ ಪಾಕಿಸ್ತಾನಕ್ಕೆ ಮೂರು ರೀತಿಯ ಸವಾಲುಗಳಿವೆ.

ಒಂದು: ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ 30% ಶಿಯಾ ಪಂಗಡದ ಮುಸ್ಲಿಮರಿದ್ದಾರೆ. ಇರಾನ್ ಕೂಡ ಶಿಯಾ ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ರಾಷ್ಟ್ರ. ಪಾಕ್‌ನ ಶಿಯಾ ಸಮುದಾಯವು ಇರಾನ್ ಕುರಿತು ಸಹಾನುಭೂತಿ ಹೊಂದಿದೆ. ಇರಾನ್ ಮೇಲಿನ ಯಾವುದೇ ದಾಳಿ ಅಥವಾ ಸಂಭಾವ್ಯ ಆಡಳಿತ ಬದಲಾವಣೆಯ ಸನ್ನಿವೇಶವು ಪಾಕಿಸ್ತಾನದಾದ್ಯಂತ ವ್ಯಾಪಕ ಪ್ರತಿಭಟನೆಗಳನ್ನು ಹುಟ್ಟುಹಾಕಬಹುದು. ಇರಾನ್ ನಿರಾಶ್ರಿತರು ಪಾಕಿಸ್ತಾನದಲ್ಲಿ ಆಶ್ರಯಕ್ಕಾಗಿ ಬರಬಹುದು.

ಹೀಗಿರುವಾಗ, ಇರಾನ್‌ ಮೇಲಿನ ದಾಳಿಗೆ ಪಾಕ್ ತನ್ನ ಸೇನಾ ನೆಲೆಯನ್ನು ಅಮೆರಿಕಗೆ ಕೊಟ್ಟರೆ, ಪಾಕಿಸ್ತಾನದಲ್ಲಿಯೂ ಆಂತರಿಕ ಪ್ರತಿಭಟನೆಗಳು ಭುಗಿಲೇಳುವ ಆಂತಕವಿದೆ. ಕಳೆದ 10 ವರ್ಷಗಳಲ್ಲಿ ಪಾಕಿಸ್ತಾನ ಹಲವು ಬಾರಿ ಆಂತರಿಕ ಪ್ರತಿಭಟನೆ, ಹಿಂಸಾಚಾರಗಳನ್ನು ಎದುರಿಸಿದೆ. ಅಶಾಂತಿಯ ದಶಕವನ್ನು ಕಂಡಿದೆ. ನಿರಂತರ ಹಿಂಸಾಚಾರ ಎದುರಿಸಿರುವ ಪಾಕ್, ಮತ್ತೊಂದು ಪ್ರತಿಭಟನೆಯನ್ನು ಎದುರಿಸಲು ಸಿದ್ದವಾಗಿಲ್ಲ.

ಎರಡು: ಈಗಾಗಲೇ, ಪಾಕಿಸ್ತಾನವು ಅಫ್ಘಾನಿಸ್ತಾನದೊಂದಿಗೆ ಗಡಿ ವಿವಾದ, ದಾಳಿಗಳನ್ನು ಎದುರಿಸುತ್ತಿದೆ. ಜೊತಗೆ, ಇರಾನ್ ಜೊತೆ ಗಡಿಹಂಚಿಕೊಂಡಿರುವ ಪಾಕಿಸ್ತಾನದ ಬಲೂಚಿಸ್ತಾವೂ ಭಯೋತ್ಪಾದನೆಯಿಂದ ಬಳಲುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಇರಾನ್ ಮೇಲಿನ ದಾಳಿಯಲ್ಲಿ ಪಾಕಿಸ್ತಾನವು ಅಮೆರಿಕ ಜೊತೆ ನಿಂತರೆ, ಇರಾನ್-ಪಾಕ್ ಗಡಿಯೂ ಅಸ್ಥಿರವಾಗಲಿದೆ.  ಇರಾನ್ ನಿರಾಶ್ರಿತರ ಒಳಹರಿವಿಗೆ ಅಡ್ಡಿಯಾಗಲಿದೆ. ಇದು ಮತ್ತೊಂದು ಗಡಿ ಸಂಘರ್ಷಕ್ಕೆ ಕಾರಣವಾಗಲಿದೆ. ಜೊತೆಗೆ, ಇಸ್ಲಾಮಿಕ್ ಜಗತ್ತು ಪಾಕಿಸ್ತಾನವನ್ನು ದೂರವಿಡುವ ಸಾಧ್ಯತೆಗಳು ಹೆಚ್ಚಿವೆ. ಇದು, ಪಾಕಿಸ್ತಾನಕ್ಕೆ ಬೇಕಿಲ್ಲ.

ಮೂರು: ಅಮೆರಿಕಗೆ ನೆರವು ನೀಡದಿದ್ದರೆ, ಹುಚ್ಚು ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಟ್ರಂಪ್ ಅವರ ಕೆಂಗಣ್ಣಿಗೆ ಪಾಕ್ ಗುರಿಯಾಗುತ್ತದೆ. ದ್ವಿಪಕ್ಷೀಯ ಸಂಬಂಧಗಳಲ್ಲಿಗೆ ಅಪಾಯ ಉಂಟಾಗುತ್ತದೆ. ಭಾರತ-ಪಾಕ್ ಸಂಘರ್ಷದ ಸಮಯದಲ್ಲಿ ಅಮೆರಿಕಗೆ ಹತ್ತಿರವಾಗಿರುವ ಪಾಕಿಸ್ತಾನ, ಮತ್ತೆ ದೂರ ಉಳಿಯಬೇಕಾಗುತ್ತದೆ. ಈ ಮೂರು ಆಯಾಮಗಳಲ್ಲಿ ಚಿಂತಿರುಸುತ್ತಿರುವ ಪಾಕಿಸ್ತಾನ ತ್ರಿಶಂಕು ಸ್ಥಿತಿಯಲ್ಲಿದೆ.

ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ ಮೇಲೆ ಕೋಮುವಾದದ ಕರಿನೆರಳು!

ಮೂಲಗಳ ಪ್ರಕಾರ, ಇರಾನ್‌ ವಿಚಾರದಲ್ಲಾಗುತ್ತಿರುವ ಅಂತಾರಾಷ್ಟ್ರೀಯ ಬೆಳವಣಿಗೆ ಮತ್ತು ಪರಿಸ್ಥಿತಿಯನ್ನು ಗಮನಿಸಿ, ನಿರ್ಣಯಿಸಲು ಪಾಕ್ ಸೇನಾ ಮುಖ್ಯಸ್ಥ ಮುನೀರ್ ತಮ್ಮ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ. ಉಲ್ಬಣಗೊಳ್ಳುವ ಸಮಸ್ಯೆಯನ್ನು ಕಡಿಮೆ ಮಾಡಲು ಅಗತ್ಯ ಮಾರ್ಗಗಳನ್ನು ಹುಡುಕಲು ಇರಾನ್, ಟರ್ಕಿ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಸೌದಿ ಅರೇಬಿಯಾ ಹಾಗೂ ಅಮೆರಿಕದ ಭದ್ರತಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ಚರ್ಚಿಸಲು ನಿರ್ದೇಶಿಸಿದ್ದಾರೆ.

ಪಾಕಿಸ್ತಾನವು ತನ್ನ ವಾಯುನೆಲೆಗಳನ್ನು ಅಮೆರಿಕಕ್ಕೆ ಒದಗಿಸುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ, ಇರಾನ್ ಮೇಲಿನ ಅಮೆರಿಕ ದಾಳಿಯನ್ನು ತಡೆಯುವ ಕುರಿತು ಪಾಕಿಸ್ತಾನ ಚಿಂತಾಕ್ರಾಂತವಾಗಿದೆ. ಪಾಕಿಸ್ತಾನವು ಸೌದಿ ಅರೇಬಿಯಾ, ಕತಾರ್ ಹಾಗೂ ಟರ್ಕಿ ಜೊತೆ ಸೇರಿ ಇರಾನ್ ಮೇಲಿನ ದಾಳಿಯು ಇಡೀ ಪ್ರದೇಶವನ್ನು ಅಸ್ಥಿರಗೊಳಿಸಬಹುದು. ದಾಳಿಗಿಂತ ಪರ್ಯಾಯ ಮಾರ್ಗಗಳನ್ನು ಹುಡುಕಲು ಟ್ರಂಪ್‌ ಆಡಳಿತಕ್ಕೆ ಮನವಿ ಮಾಡಿದೆ ಎಂದು ವರದಿಗಳು ಹೇಳುತ್ತಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಟಾರ್ಕ್ಟಿಕದಲ್ಲಿ ಪೆಂಗ್ವಿನ್ ಎಣಿಸುವ ಅಪರೂಪದ ಉದ್ಯೋಗ: ಲಕ್ಷಗಳ ಸಂಭಾವನೆ, ಹೇಗಿರುತ್ತದೆ ಹಿಮದ ನಾಡಿನ ಬದುಕು?

ಜನಜಂಗುಳಿ, ಟ್ರಾಫಿಕ್ ಕಿರಿಕಿರಿ ಹಾಗೂ ದೈನಂದಿನ ಯಾಂತ್ರಿಕ ಬದುಕಿನಿಂದ ದೂರ ಸರಿದು,...

ಯಮೆನ್ ರಾಷ್ಟ್ರಪತಿ ಭವನದ ಮೇಲೆ ಹೂತಿಗಳ ಕ್ಷಿಪಣಿ ದಾಳಿ: ಐವರ ಸಾವು

ಯಮೆನ್‌ನ ದಕ್ಷಿಣ ಭಾಗದ ಪ್ರಮುಖ ನಗರವಾದ ಅದನ್‌ನಲ್ಲಿರುವ ಅಲ್-ಮಾಶಿಕ್ ರಾಷ್ಟ್ರಪತಿ ಭವನದ...

ಭಾರತದ ಮೇಲೆ ಶೇ.100 ಸುಂಕ: 10 ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅಂತಿಮ ತೀರ್ಮಾನ!

ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಶೇ. 100ರಷ್ಟು ಭಾರಿ ಆಮದು...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ – ಜಯಂತ್‌ ಪರ್ಮಾರ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ...