ಮಹಿಳೆಯನ್ನು ಗುಂಡಿಕ್ಕಿ ಕೊಂದ ಐಸಿಇ‌ ಅಧಿಕಾರಿಗಳು; ಆತ್ಮ ರಕ್ಷಣೆಯ ಕ್ರಮವೆಂದು ಟ್ರಂಪ್ ಸಮರ್ಥನೆ

Date:

ಮಹಿಳೆಯೊಬ್ಬರನ್ನು ವಲಸೆ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಅಧಿಕಾರಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಅಮೆರಿಕದ ಮಿನಿಸೋಟಾ ರಾಜ್ಯದ ಮಿನಿಯಾಪೊಲಿಸ್‌ನಲ್ಲಿ ನಡರದಿದೆ. ಘಟನೆಯು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಕೃತ್ಯವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ‘ಇದು ಆತ್ಮ ರಕ್ಷಣೆಯ ಕ್ರಮ’ ಎಂದಿದ್ದಾರೆ.

- Advertisement -

ಹತ್ಯೆಗೀಡಾದ ಮಹಿಳೆಯನ್ನು 37 ವರ್ಷದ ರಿನೀ ನಿಕೊಲೆ ಗುಡ್ ಎಂದು ಗುರುತಿಸಲಾಗಿದೆ. ಅವರು ಕಾರಿನಲ್ಲಿ ತೆರಳುತ್ತಿದ್ದಾರೆ, ಅವರ ಕಾರನ್ನು ಐಸಿಇ ಅಧಿಕಾರಿಗಳು ಸುತ್ತುವರಿದಿದ್ದಾರೆ. ಈ ವೇಳೆ, ರಿನೀ ಅವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಅವರ ಮೇಲೆ ಅಧಿಕಾರಿಯೊಬ್ಬರು ಗುಂಡು ಹಾರಿಸಿ, ಹತ್ಯೆಗೈದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕೈಲೊಂದು ಕ್ಯಾಮೆರಾ, ಜೀವಂತ ಬದುಕಿಗೆ ಮುಖಾಮುಖಿ

ಸಿನೆಮಾದ ಶಕ್ತಿ ಅದರ ಹಿಂದೆ ನಿಂತಿರುವ ತಂತ್ರಜ್ಞರ ಸಂಖ್ಯೆಯಲ್ಲಾಗಲಿ, ದುಬಾರಿ ಉಪಕರಣಗಳಲ್ಲಾಗಲಿ ಇಲ್ಲ. ಕನಿಷ್ಠ ಉಪಕರಣಗಳು ಮತ್ತು ಸಣ್ಣ ತಂಡದೊಂದಿಗೆ ಕೆಲಸ ಮಾಡುವುದು ಕೇವಲ ಆರ್ಥಿಕ ಅನಿವಾರ್ಯತೆಯಲ್ಲ; ಸಾಂಪ್ರದಾಯಿಕ ಸಿನೆಮಾ ವ್ಯವಸ್ಥೆಯ ಮಿತಿಗಳನ್ನು...

‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ...

ನಾಟಕಕಾರ, ಬರಹಗಾರ ಅಡ್ಡಂಡ ಕಾರ್ಯಪ್ಪ ಹಿಂದಿನಿಂದಲೂ ಒಂದಲ್ಲೊಂದು ಕಾರಣಕ್ಕೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿರುವ ಹೆಸರು. ಇತಿಹಾಸದ ನಿರೂಪಣೆ, ರಂಗಭೂಮಿಯ ಬಳಕೆ, ಧಾರ್ಮಿಕ ಮತ್ತು ರಾಜಕೀಯ ವಿಚಾರಗಳ ಅಭಿವ್ಯಕ್ತಿ ಹಾಗೂ ಕೋಮು ಸೌಹಾರ್ದದ...

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ...

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕಲೆ ಮತ್ತೊಮ್ಮೆ ಅತ್ಯಂತ ಸುಂದರವಾಗಿ ಸಾಬೀತುಪಡಿಸಿದೆ. ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು 'ಮಹಿಷಾಸುರ...

ಘಟನೆಯ ವಿರುದ್ಧ ಅಮೆರಿಕದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಆದಾಗ್ಯೂ, ಘಟನೆಯನ್ನು ಟ್ರಂಪ್‌ ಸಮರ್ಥಿಸಿಕೊಂಡಿದ್ದಾರೆ. ‘”ರಿನೀ ವಲಸೆ ಅಧಿಕಾರಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ. ಆ ಸಮಯದಲ್ಲಿ, ಅಧಿಕಾರಿ ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾರೆ” ಎಂದಿದ್ದಾರೆ.

“ಮಹಿಳೆಯು ಭಯಾನಕವಾಗಿ ವರ್ತಿಸಿದರು. ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದರು. ಮಹಿಳೆ ತಪ್ಪು ಮಾಡಿದ್ದಾರೆ. ಇದು‌ ದೇಶಿಯ ಭಯೋತ್ಪಾದನೆಯ ಕ್ರಮ. ಇಂತಹ ಘಟನೆಗಳು ಸಂಭವಿಸುವುದು ದುಃಖಕರ” ಎಂದು ಟ್ರಂಪ್ ಹೇಳಿದ್ದಾರೆ.

“ಪ್ರಾಣ ಭಯ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಐಸಿಇ ಅಧಿಕಾರಿಯೊಬ್ಬರು, ಆತ್ಮರಕ್ಷಣೆಗಾಗಿ ಗುಂಡುಹಾರಿಸಿದ್ದಾರೆ. ಅವರು ತಮ್ಮನ್ನು ರಕ್ಷಿಸಿಕೊಳ್ಳುವ ಜೊತೆಗೆ ಸಹ ಅಧಿಕಾರಿಗಳನ್ನೂ ರಕ್ಷಿಸಿದ್ದಾರೆ” ಎಂದು‌ ಟ್ರಂಪ್‌ ಪ್ರತಿಪಾದಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯರೊಂದಿಗೆ ಗರ್ಬಾ ಹೆಜ್ಜೆ ಹಾಕಿದ ನ್ಯೂಯಾರ್ಕ್‌ ಮೇಯರ್‌ ಜೋಹ್ರಾನ್ ಮಮ್ದಾನಿ

ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಅವರು ನವರಾತ್ರಿ ಆಚರಣೆಯಲ್ಲಿ ಭಾರತೀಯರೊಂದಿಗೆ...

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ ನಡುವೆ ಟ್ರಂಪ್‌ಗೆ ಅಗ್ನಿಪರೀಕ್ಷೆ!

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್...

ಮಸೀದಿ ಪಾವಿತ್ರ್ಯಕ್ಕೆ ಧಕ್ಕೆ ಆರೋಪ; ಮೆಕ್ಕಾದಲ್ಲಿ ಇಬ್ಬರು ಬಾಂಗ್ಲಾದೇಶಿಗರಿಗೆ ಗಲ್ಲು

ಸೌದಿ ಅರೇಬಿಯಾದ ಪವಿತ್ರ ನಗರ ಮೆಕ್ಕಾ ಪ್ರದೇಶದಲ್ಲಿ ಮಸೀದಿಯೊಂದರ ಒಳಗೆ ಅನುಚಿತ...