ಗ್ರೀನ್‌ಲ್ಯಾಂಡ್ ಸ್ವಾಧೀನ | ಸುಲಭವಾಗಿ ಸಿಗದಿದ್ದರೆ ‘ಕಠಿಣ ಮಾರ್ಗ’ ಅನಿವಾರ್ಯ: ಟ್ರಂಪ್ ಎಚ್ಚರಿಕೆ

Date:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಅನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಕುರಿತು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಗ್ರೀನ್‌ಲ್ಯಾಂಡ್‌ಗೆ ಇಷ್ಟವಿರಲಿ, ಇಲ್ಲದಿರಲಿ, ನಾನು ಈ ವಿಚಾರದಲ್ಲಿ ಒಂದು ತೀರ್ಮಾನಕ್ಕೆ ಬರುವುದು ಖಚಿತ,” ಎಂದು ಅವರು ಘೋಷಿಸಿದ್ದಾರೆ.

- Advertisement -

​ಶ್ವೇತಭವನದಲ್ಲಿ ಶುಕ್ರವಾರ ನಡೆದ ತೈಲ ಮತ್ತು ಅನಿಲ ಉದ್ಯಮದ ಪ್ರಮುಖರೊಂದಿಗಿನ ಸಭೆಯಲ್ಲಿ ಮಾತನಾಡಿದ ಟ್ರಂಪ್, ವೆನೆಜುವೆಲಾದ ತೈಲ ನಿಕ್ಷೇಪಗಳ ಮೇಲೆ ಅಮೆರಿಕದ ಕಂಪನಿಗಳು ಹಿಡಿತ ಸಾಧಿಸುವ ಯೋಜನೆಯನ್ನು ಚರ್ಚಿಸುತ್ತಲೇ, ಗ್ರೀನ್‌ಲ್ಯಾಂಡ್ ವಿಚಾರವನ್ನೂ ಪ್ರಸ್ತಾಪಿಸಿದರು. ಪ್ರತಿಸ್ಪರ್ಧಿ ರಾಷ್ಟ್ರಗಳು ಆಕ್ರಮಿಸಿಕೊಳ್ಳುವ ಮೊದಲೇ ಆಯಕಟ್ಟಿನ ಪ್ರದೇಶಗಳ ಮೇಲೆ ಅಮೆರಿಕ ಪ್ರಭುತ್ವ ಸಾಧಿಸಬೇಕು ಎಂಬ ತಮ್ಮ ಸಾಮ್ರಾಜ್ಯಶಾಹಿ ವಿದೇಶಾಂಗ ನೀತಿಯನ್ನು ಅವರು ಸಮರ್ಥಿಸಿಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಇಂಟರ್ನೆಟ್‌ನಿಂದ AIವರೆಗೆ.. ದಶಕಗಳ ಹಿಂದೆಯೇ ಜಗತ್ತಿನ ಭವಿಷ್ಯ ಕಂಡಿದ್ದ...

ತಂತ್ರಜ್ಞಾನ ನಮ್ಮ ಕೈಸೇರುವ, ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗುವ ದಶಕಗಳ ಹಿಂದೆಯೇ, ಅಂದಿನ ಕಾಲದ ಕಲಾವಿದರು ತಮ್ಮ ಗೀತೆಗಳ ಸಾಲುಗಳ ಮೂಲಕ ಮುಂದಿನ ಜಗತ್ತು ಹೀಗೇ ಇದ್ದೀತೆಂದು ಖಚಿತವಾಗಿ ಹೇಳಿದ್ದರು. ಮಾನವಕುಲವು ಮುಂದೆ...

ಕೊಪ್ಪಳ | ದಸರಾ ಪುರಾಣ ಪ್ರವಚನಕ್ಕೆ ಮುಸ್ಲಿಂ ಕಲಾವಿದನ...

ಧರ್ಮಗಳು ಬೇರೆ ಬೇರೆಯಾದರೂ ಕಲೆ, ಸಂಸ್ಕೃತಿ ಮತ್ತು ಮಾನವೀಯತೆಯ ಮುಂದೆ ಧರ್ಮದ ಗಡಿಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮ ಸಾಕ್ಷಿ. ಇಲ್ಲಿನ ಕಂಪ್ಲಿಯಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ನಡೆಯುವ ದಸರಾ ಪುರಾಣ...

“ಒಂದು ವೇಳೆ ನಾವು ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳದಿದ್ದರೆ, ರಷ್ಯಾ ಅಥವಾ ಚೀನಾ ಅದನ್ನು ಆಕ್ರಮಿಸಿಕೊಳ್ಳಲಿವೆ,” ಎಂದು ಟ್ರಂಪ್ ಆತಂಕ ವ್ಯಕ್ತಪಡಿಸಿದರು. ಗ್ರೀನ್‌ಲ್ಯಾಂಡ್ ಸುತ್ತಲೂ ಚೀನಾ ಮತ್ತು ರಷ್ಯಾದ ಯುದ್ಧನೌಕೆಗಳು ಸುತ್ತುವರಿದಿವೆ ಎಂದು ಅವರು ಸುಳ್ಳು ಮಾಹಿತಿ ನೀಡಿದರು. ವಾಸ್ತವದಲ್ಲಿ, ಆರ್ಕ್ಟಿಕ್ ವಲಯದಲ್ಲಿ ರಷ್ಯಾ ಮತ್ತು ಚೀನಾ ಸಕ್ರಿಯವಾಗಿದ್ದರೂ, ಗ್ರೀನ್‌ಲ್ಯಾಂಡ್ ಅವುಗಳ ನೌಕೆಗಳಿಂದ ಸುತ್ತುವರಿದಿಲ್ಲ. ಬದಲಾಗಿ, ಅಲ್ಲಿ ಅಮೆರಿಕದ ಸೇನಾ ನೆಲೆ ಈಗಾಗಲೇ ಅಸ್ತಿತ್ವದಲ್ಲಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌; ಸರ್ಕಾರದ ಹೆಂಗರುಳಿನ ಯೋಜನೆಗೆ ಬೇಕಿದೆ ಅಧಿಕಾರಿಗಳ ಬದ್ಧತೆ

ಗ್ರೀನ್‌ಲ್ಯಾಂಡ್ ಸ್ವಾಧೀನದ ಟ್ರಂಪ್ ಅವರ ಪ್ರಸ್ತಾಪವನ್ನು ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ಅಧಿಕಾರಿಗಳು ಈ ಹಿಂದೆಯೇ ಕಟುವಾಗಿ ವಿರೋಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, “ನಾನು ಸುಲಭವಾಗಿ (ಮಾತುಕತೆಯ ಮೂಲಕ) ಒಪ್ಪಂದ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ಆದರೆ ಅದು ಸಾಧ್ಯವಾಗದಿದ್ದರೆ, ನಾವು ‘ಕಠಿಣ ಮಾರ್ಗ’ವನ್ನು (ಬಲ ಪ್ರಯೋಗ) ಹಿಡಿಯಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದ್ದಾರೆ.
​
ನ್ಯಾಟೋ ಒಪ್ಪಂದಕ್ಕೆ ಅಪಾಯ

ಗ್ರೀನ್‌ಲ್ಯಾಂಡ್ ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶವಾಗಿದೆ. ಡೆನ್ಮಾರ್ಕ್ ಮತ್ತು ಅಮೆರಿಕಗಳೆರಡೂ ‘ನ್ಯಾಟೋ’ (NATO) ಒಕ್ಕೂಟದ ಸ್ಥಾಪಕ ಸದಸ್ಯ ರಾಷ್ಟ್ರಗಳು. ನ್ಯಾಟೋ ಒಪ್ಪಂದದ ಪ್ರಕಾರ, ಒಂದು ಸದಸ್ಯ ರಾಷ್ಟ್ರದ ಮೇಲಿನ ದಾಳಿಯನ್ನು ಎಲ್ಲಾ ಸದಸ್ಯರ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಟ್ರಂಪ್ ಅವರು ಬಲವಂತವಾಗಿ ಗ್ರೀನ್‌ಲ್ಯಾಂಡ್ ಪಡೆಯಲು ಮುಂದಾದರೆ, ಈ ಪ್ರಮುಖ ಸೇನಾ ಮೈತ್ರಿಕೂಟದ ತತ್ವವೇ ಮುರಿದು ಬೀಳುವ ಸಾಧ್ಯತೆಯಿದೆ.
​

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದ ಸರ್ಕಾರಿ ಐಟಿ ವ್ಯವಸ್ಥೆಗಳಲ್ಲಿ ಚೀನಾದ ಎಐ ‘ಡೀಪ್‌ಸೀಕ್’ ಬಳಕೆಗೆ ನಿಷೇಧ

ಅಮೆರಿಕದ ನಾಗರಿಕ ಸರ್ಕಾರಿ ಏಜೆನ್ಸಿಗಳ ಐಟಿ ವ್ಯವಸ್ಥೆಗಳಿಂದ ಚೀನಾ ಮೂಲದ ಕೃತಕ...

ಫ್ರಾನ್ಸ್‌ | ಭುಗಿಲೆದ್ದ ಪ್ರತಿಭಟನೆ: 2,400ಕ್ಕೂ ಅಧಿಕ ಮಂದಿ ಬಂಧನ, ಸಾವಿರಕ್ಕೂ ಹೆಚ್ಚು ಪೊಲೀಸರಿಗೆ ಗಾಯ

ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಫ್ರಾನ್ಸ್‌ನಲ್ಲಿ ಜೀವನ ವೆಚ್ಚದ ಏರಿಕೆ, ಸಾರ್ವಜನಿಕ...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು...