ಇಸ್ರೇಲ್‌ ಸರ್ಕಾರದ ಪರವಾಗಿ ಬಿಬಿಸಿ ವರದಿಗಳು: 100ಕ್ಕೂ ಹೆಚ್ಚು ಬಿಬಿಸಿ ಸಿಬ್ಬಂದಿಯಿಂದ ನಿರ್ದೇಶಕರಿಗೆ ಪತ್ರ

Date:

ಸಿನಿಮಾ ನಿರ್ದೇಶಕರು, ನಿರ್ಮಾಪಕರು, ನಟರು ಹಾಗೂ ವಿವಿಧ ಕ್ಷೇತ್ರ ಗಣ್ಯರು ಒಳಗೊಂಡು ಬಿಬಿಸಿಯ 100ಕ್ಕೂ ಹೆಚ್ಚು ಸಿಬ್ಬಂದಿ, ಬಿಬಿಸಿಯ ನಿರ್ದೇಶಕ ಟಿಮ್ ಡೇವಿ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡೆಬೊರಾ ಟರ್ನೆಸ್ ಅವರಿಗೆ ಪತ್ರ ಬರೆದಿದ್ದು, ಬಿಬಿಸಿಯು ಇಸ್ರೇಲ್ ಸರ್ಕಾರ ಮತ್ತು ಸೇನೆಯ ಪರವಾಗಿ “ಪಿಆರ್” (ಸಾರ್ವಜನಿಕ ಸಂಪರ್ಕ) ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

- Advertisement -

ಗಾಜಾದ ಮೇಲಿನ ಇಸ್ರೇಲ್‌ನ ದಾಳಿಯ ಕುರಿತಾದ ಬಿಬಿಸಿಯ ವರದಿಗಳು, ಸಂಸ್ಥೆಯ ಸ್ವಂತ ಸಂಪಾದಕೀಯ ಮಾನದಂಡಗಳನ್ನು ಪದೇ ಪದೇ ಉಲ್ಲಂಘಿಸಿವೆ. ಈ ವಿಷಯದಲ್ಲಿ ಬಿಬಿಸಿಯ ಬಹುತೇಕ ವರದಿಗಳು ಪ್ಯಾಲೆಸ್ಟೀನ್‌ ವಿರೋಧಿ ರೀತಿಯಲ್ಲಿ ರೂಪುಗೊಂಡಿವೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

“ನಮ್ಮ ಪ್ರೇಕ್ಷಕರಿಗಾಗಿ ಬಿಬಿಸಿಯು ಉತ್ತಮವಾಗಿ ವರದಿ ಮಾಡಬೇಕು. ಪಕ್ಷಪಾತವಿಲ್ಲದೆ, ಭಯವಿಲ್ಲದೆ ಹಾಗೂ ನಿಷ್ಠೆಯಿಂದ ವರದಿ ಮಾಡುವ ನಮ್ಮ ಮೌಲ್ಯಗಳಿಗೆ ಬದ್ಧವಾಗಬೇಕು” ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿದೆ.

ನಟಿ ಮಿರಿಯಮ್ ಮಾರ್ಗೊಲಿಯೆಸ್, ಚಿತ್ರ ನಿರ್ಮಾಪಕ ಮೈಕ್ ಲೀ, ನಟ ಚಾರ್ಲ್ಸ್ ಡಾನ್ಸ್ ಮತ್ತು ಇತಿಹಾಸಕಾರ ವಿಲಿಯಂ ಡಾಲ್‌ರಿಂಪಲ್ ಸೇರಿದಂತೆ ಹಲವರು ಪತ್ರಕ್ಕೆ ಸಹಿ ಹಾಕಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ತ ಮೋದಿ ಕೃಷಿಕರ ಕತ್ತು ಹಿಸುಕಿದ್ದಾರೆ, ಇತ್ತ ಸಿದ್ದು ಕೈ ಜೋಡಿಸಿದ್ದಾರೆ!

ಬಿಬಿಸಿಯು ತಾನೇ ಪ್ರಸಾರ ಮಾಡಲು ನಿರ್ಧರಿಸಿದ್ದ “ಗಾಜಾ: ಡಾಕ್ಟರ್ಸ್ ಅಂಡರ್ ಅಟ್ಯಾಕ್” ಎಂಬ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಿರಲು ನಿರ್ಧರಿಸಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಸಾಕ್ಷ್ಯಚಿತ್ರವನ್ನು ಈಗ ಚಾನಲ್ 4 ಪ್ರಸಾರ ಮಾಡಲಿದೆ. ಈ ಸಾಕ್ಷ್ಯಚಿತ್ರವು ಪಕ್ಷಪಾತದ ಗ್ರಹಿಕೆಯನ್ನು ಸೃಷ್ಟಿಸಬಹುದು ಹಾಗೂ ಪತ್ರಿಕೋದ್ಯಮದ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ” ಎಂದು ತಿರಸ್ಕರಿಸಲಾಗಿದೆ ಪತ್ರದಲ್ಲಿ ತಿಳಿಸಲಾಗಿದೆ.

“ಆದರೆ ಈ ನಿರ್ಧಾರವು ಇಸ್ರೇಲ್ ಸರ್ಕಾರದ ವಿರುದ್ಧ ಟೀಕೆ ಮಾಡುವುದನ್ನು ಕಾಣಿಸಿಕೊಳ್ಳುವ ಭಯದಿಂದ ಬಿಬಿಸಿಯು ನಿಷ್ಕ್ರಿಯವಾಗಿರುವುದನ್ನು ತೋರಿಸುತ್ತದೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ಇಸ್ರೇಲ್ ಸರ್ಕಾರವನ್ನು ಟೀಕಿಸುವ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಕೆಲವು ಸಿಬ್ಬಂದಿಯ ವಿರುದ್ಧ ಆರೋಪ ಮಾಡಲಾಗಿದೆ.

ಈ ಆರೋಪಗಳಿಗೆ ಬಿಬಿಸಿ ಪ್ರತಿಕ್ರಿಯೆ ನೀಡಿದ್ದು, “ನಮ್ಮ ಸಂಪಾದಕೀಯ ತಂಡಗಳ ನಡುವೆ ಉಂಟಾಗುವ ಚರ್ಚೆಗಳು ಬಿಬಿಸಿಯ ಕಾರ್ಯಪದ್ಧತಿಯ ಪ್ರಮುಖ ಭಾಗವಾಗಿವೆ. ನಾವು ನಿರಂತರವಾಗಿ ನಮ್ಮ ವರದಿಗಳ ಬಗ್ಗೆ ಪರಿಶೀಲನೆ ಮಾಡುತ್ತೇವೆ ಮತ್ತು ಸಿಬ್ಬಂದಿಗಳ ಪ್ರತಿಕ್ರಿಯೆಗಳಿಗೆ ಸ್ಪಂದಿಸುತ್ತೇವೆ. ಇವು ಆಂತರಿಕವಾಗಿ ನಡೆಸಬೇಕಾದ ಮಾತುಕತೆಗಳು. ಅಲ್ಲದೆ ಬಿಬಿಸಿ ತನ್ನ ಗಾಜಾ ಕುರಿತ ವರದಿಗೆ ಸಂಪೂರ್ಣವಾಗಿ ನಿಷ್ಠೆಯನ್ನು ಅನುಸರಿಸುತ್ತಿದೆ” ಎಂದು ಹೇಳಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕ ಹಿಂದಿಕ್ಕಿ ಭಾರತದ ನಂ.1 LNG ಪೂರೈಕೆದಾರನಾದ ಓಮನ್‌!

ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಅನಿಲ ಪೂರೈಕೆಯಲ್ಲಿ...

ರಷ್ಯಾದಿಂದ ತೈಲ ಖರೀದಿಸಿದ ಅಮೆರಿಕ -ಜಾಗತಿಕ ಸೋಜಿಗ

ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿ,...

ಲಡಾಖ್ ಭಾರತದ ಅವಿಭಾಜ್ಯ ಅಂಗ, ಚೀನಾ ನಿರಾಕರಿಸಿದರೂ‌ ಇದೇ ಸತ್ಯ; ಡ್ರ್ಯಾಗನ್‌ಗೆ ಭಾರತ ತಿರುಗೇಟು!

ಲಡಾಖ್ ಕೇಂದ್ರಾಡಳಿತ ಪ್ರದೇಶದ 28 ಪ್ರಮುಖ ಹಾಗೂ ಕಾರ್ಯತಂತ್ರದ (Strategic) ಸ್ಥಳಗಳಿಗೆ...