ಭಾರತ-ಅಮೆರಿಕ ಸುಂಕ ಜಟಾಪಟಿ, ರಿಫೈನರ್‌ಗಳಿಗೆ ಲಾಭ: ರಘುರಾಮ್ ರಾಜನ್

Date:

ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಕಾರಣಕ್ಕಾಗಿ ಭಾರತದ ಮೇಲೆ ಅಮೆರಿಕ 50% ಸುಂಕ ವಿಧಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ಸುಂಕ ನೀತಿಯನ್ನು ಆರ್‌ಬಿಐ ಮಾಜಿ ಗವರ್ನರ್‌ ಡಾ. ರಘುರಾಮ್ ರಾಜನ್ ಅವರು ‘ಪವರ್‌ ಪ್ಲೇ’ (ಶಕ್ತಿ ಆಟ) ಎಂದು ಬಣ್ಣಿಸಿದ್ದಾರೆ. ಇದು, ವ್ಯಾಪಾರ ಆರ್ಥಿಕತೆಯನ್ನು ಮೀರಿ ರಾಜಕೀಯ ಮತ್ತು ಆರ್ಥಿಕ ಶಕ್ತಿಯನ್ನು ಮತ್ತೊಬ್ಬರ ಮೇಲೆ ಹೇರುವ ದುರುದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.

- Advertisement -

ಹೌದು, ಆಗಸ್ಟ್‌ 27ರಂದು ‘ಬ್ಯುಸಿನೆಸ್ ಟುಡೆ’ ಸುದ್ದಿವಾಹಿನಿಯ ಚರ್ಚೆಯಲ್ಲಿ ಭಾಗಿಯಾಗಿದ್ದ ರಘುರಾಮ್ ರಾಜನ್ ಹಲವು ಪ್ರಮುಖ ವಿಚಾರಗಳ ಬಗ್ಗೆ ಗಮನ ಸೆಳೆದಿದ್ದಾರೆ. ಟ್ರಂಪ್ ಸುಂಕ ಹೇರಿಕೆಯ ನಡುವೆಯೂ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದು ಸಾರ್ವಭೌಮತ್ವದ ವಿಚಾರವೇ ಅಥವಾ ದೇಶದ ಬೃಹತ್ ಬಂಡವಾಳ ಶಕ್ತಿಗಳಿಗೆ ಅನುಕೂಲ ಮಾಡುವ ಉದ್ದೇಶವಾ ಎಂಬ ಬಗ್ಗೆ ಅವರು ಹೆಚ್ಚು ಮಾತನಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

“ಅಮೆರಿಕದ ಬೆದರಿಕೆಯ ನಡುವೆಯೂ ಭಾರತವು ರಷ್ಯದಿಂದ ತೈಲ ಖರೀದಿಯನ್ನು ಮುಂದುವರೆಸಿದೆ. ಇದರಿಂದ ಯಾರಿಗೆ ಉಪಯೋಗ, ಯಾರು ಲಾಭ ಪಡೆಯುತ್ತಾರೆ. ಸಾಮಾನ್ಯ ಜನರೇ? ಅಥವಾ ಅಂಬಾನಿ ರಿಲಯನ್ಸ್ ನಂತಹ ತೈಲ ಕಂಪನಿಗಳೇ? ರಿಲಯನ್ಸ್, ನಾಯರಾ ಎನರ್ಜಿ, ಇಂಡಿಯನ್ ಆಯಿಲ್ ರೀತಿಯ ರಿಫೈನರ್‌ಗಳು ರಷ್ಯನ್ ತೈಲ ಖರೀದಿಯಿಂದ ಅತಿಯಾದ ಲಾಭ ಪಡೆಯುತ್ತಿವೆ. ಇದರಿಂದ, ದೇಶದ ಜನರಿಗೆ ಲಾಭವಾಗುತ್ತಿದೆಯೇ?” ಎಂದು ರಾಜನ್ ಪ್ರಶ್ನಿಸಿದ್ದಾರೆ.

“ಈಗ, ಟ್ರಂಪ್‌ ಭಾರತದ ಮೇಲೆ 50% ತೆರಿಗೆ ವಿಧಿಸಿದ್ದಾರೆ. ಇದರಿಂದ, ಜವಳಿ, ಕೈಷಿ ಹಾಗೂ ಆಭರಣ ಕ್ಷೇತ್ರಗಳು ಹೆಚ್ಚು ಹೊಡೆತ ಅನುಭವಿಸಲಿವೆ. ಜೊತೆಗೆ, ಅಮೆರಿಕಗೆ ಜವಳಿ, ಕೃಷಿ ಹಾಗೂ ಆಭರಣ ಉತ್ಪನ್ನಗಳನ್ನು ರಫ್ತು ಮಾಡುವ ಸಣ್ಣ ರಫ್ತುದಾರರು ಭಾರೀ ನಷ್ಟ ಮತ್ತು ಹೊರೆ ಅನುಭವಿಸಲಿದ್ದಾರೆ. ರಷ್ಯಾದ ತೈಲದಿಂದ ಲಾಭ ಪಡೆಯುವವರು ತಮ್ಮ ಲಾಭದಲ್ಲಿ ನಷ್ಟ ಎದುರಿಸುತ್ತಿರುವ ಸಣ್ಣ ರಫ್ತುದಾರರಿಗೆ ಪಾಲು ಹಂಚುವರೇ” ಎಂದು ಕೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಭಾರತ-ಚೀನಾ ‘ಭಾಯಿ ಭಾಯಿ’ ಎನ್ನುತ್ತಿದ್ದಾರೆ ಮೋದಿ; ಇದು ಸಾಧ್ಯವೇ?

“ಭಾರತವು ರಷ್ಯದಿಂದ ತೈಲ ಖರೀದಿರುವ ವಿಚಾರವನ್ನು ‘ಸಾರ್ವಭೌಮತ್ವ’ ವಿಚಾರ ಎನ್ನುತ್ತಿದೆ. ಆದರೆ, ಅದು ಸಾರ್ವಭೌಮತ್ವದ ಪ್ರಶ್ನೆಯಲ್ಲ. ಬದಲಿಗೆ ‘ಸ್ಮಾರ್ಟ್ ಪಾಲಿಸಿ ಮೇಕಿಂಗ್’ (ಬುದ್ಧಿವಂತ ನೀತಿ ರಚನೆ)ಗೆ ಸಂಬಂಧಿಸಿದ್ದಾಗಿದೆ. ನಾವು ಯಾವುದೇ ಒಂದು ದೇಶದ ಮೇಲೆ ಹೆಚ್ಚು ಅವಲಂಬಿತರಾಗಬಾರದು. ಈ ಸುಂಕವು ನಮಗೆ ಎಚ್ಚರಿಕೆಯ ಗಂಟೆಯಾಗಿದೆ. 8-8.5% ಅಭಿವೃದ್ಧಿ ಸಾಧಿಸಲು ದೇಶವು ನಾನಾ ಸುಧಾರಣೆಗಳನ್ನು ತರಬೇಕು” ಎಂದು ಹೇಳಿದ್ದಾರೆ.

ಇದೇ ವಿಚಾರವನ್ನು ಲಿಂಕ್ಡ್‌ ಇನ್‌ನಲ್ಲಿ ಪೋಸ್ಟ್‌ ಮಾಡಿರುವ ರಾಜನ್, “ರಷ್ಯನ್ ತೈಲದಿಂದ ಲಾಭ ಪಡೆಯುತ್ತಿರುವ ರಿಫೈನರ್‌ಗಳು ತಮ್ಮ ಲಾಭದಲ್ಲಿ ಸುಂಕದಿಂದ ನಷ್ಟ ಎದುರಿಸುತ್ತಿರುವ ರಫ್ತುದಾರರಿಗೆ ಸಹಾಯ ಮಾಡಬೇಕು. ಸರ್ಕಾರವು ರಷ್ಯನ್ ತೈಲ ಖರೀದಿಯ ಮೇಲೆ ವಿಂಡ್‌ಫಾಲ್ ಟ್ಯಾಕ್ಸ್ (ಅಧಿಕ ಲಾಭ ತೆರಿಗೆ) ವಿಧಿಸಿ, ಅದನ್ನು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹಂಚಬೇಕು” ಎಂದು ಸಲಹೆ ನೀಡಿದ್ದಾರೆ.

ರಘುರಾಮ್ ರಾಜನ್ ಅವರ ಮಾತುಗಳು ಭಾರತದ ಆರ್ಥಿಕ ನೀತಿಯನ್ನು ಪುನರ್‌ವಿಮರ್ಶೆ ಮಾಡಲು ಕರೆ ಕೊಡುತ್ತವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಎಂಆರ್‌ಎಲ್ ಲಂಚ ಪ್ರಕರಣ: ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್‌ಗೆ ಇ.ಡಿ ಸಮನ್ಸ್

ಬಹುಚರ್ಚಿತ ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಅಕ್ರಮ ಹಣ...

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...