ಭಾರತ ಅವಮಾನ ಸ್ವೀಕರಿಸದು: ಅಮೆರಿಕಕ್ಕೆ ಪುಟಿನ್‌ ತಿರುಗೇಟು

Date:

Advertisements

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಗುರುವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತವನ್ನು ತಮ್ಮ ವ್ಯಾಪಾರಿ ಪಾಲುದಾರ ಭಾರತವನ್ನು ರಷ್ಯಾದೊಂದಿಗಿನ ತೈಲ ವ್ಯಾಪಾರವನ್ನು ಕಡಿಮೆ ಮಾಡಲು ಒತ್ತಡ ಹೇರಿದ್ದಕ್ಕಾಗಿ ತೀವ್ರವಾಗಿ ಟೀಕಿಸಿದ್ದಾರೆ. ಈ ಕ್ರಮವು ವಾಷಿಂಗ್ಟನ್‌ಗೆ ತಿರುಗುಬಾಣವಾಗಿ ಪರಿಣಮಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ದಕ್ಷಿಣ ರಷ್ಯಾದ ಕಪ್ಪು ಸಮುದ್ರ ತೀರದ ಸೋಚಿಯಲ್ಲಿ ನಡೆದ ಅಂತಾರಾಷ್ಟ್ರೀಯ ವಾಲ್ಡೈ ಚರ್ಚಾ ವೇದಿಕೆಯಲ್ಲಿ, 140 ದೇಶಗಳ ತಜ್ಞರ ಸಮ್ಮುಖದಲ್ಲಿ ಮಾತನಾಡಿದ ಪುಟಿನ್‌, ಭಾರತ ಸೇರಿದಂತೆ ರಷ್ಯಾದ ವ್ಯಾಪಾರಿ ಪಾಲುದಾರರ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸಿದರೆ, ಜಾಗತಿಕ ಇಂಧನ ಬೆಲೆಗಳು ಏರಿಕೆಯಾಗಲಿವೆ. ಇದರಿಂದಾಗಿ ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ, ಇದು ಅಮೆರಿಕದ ಆರ್ಥಿಕತೆಯನ್ನು ನಿಧಾನಗತಿಗೆ ಸಿಲುಕುತ್ತದೆ” ಎಂದು ಎಚ್ಚರಿಸಿದರು.

ಪುಟಿನ್‌ ತಮ್ಮ ಡಿಸೆಂಬರ್‌ ಆರಂಭದಲ್ಲಿ ಭಾರತಕ್ಕೆ ಯೋಜಿತ ಭೇಟಿಯ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದರು. ಭಾರತದಿಂದ ಭಾರಿ ಪ್ರಮಾಣದ ಕಚ್ಚಾ ತೈಲ ಆಮದಿನಿಂದಾಗಿ ಉಂಟಾಗಿರುವ ವ್ಯಾಪಾರ ಅಸಮತೋಲನವನ್ನು ಸರಿದೂಗಿಸಲು ಕ್ರಮ ಕೈಗೊಳ್ಳುವಂತೆ ರಷ್ಯಾದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Advertisements

“ನಾವು ಭಾರತದೊಂದಿಗೆ ಎಂದಿಗೂ ಯಾವುದೇ ಸಂಘರ್ಷ ಹೊಂದಿಲ್ಲ. ಭಾರತವು ಹೊರಗಿನ ಒತ್ತಡಕ್ಕೆ ತಲೆಬಾಗುವುದಿಲ್ಲ. ಅದರ ಜನತೆ ತಮ್ಮ ನಾಯಕರ ನಿರ್ಧಾರಗಳನ್ನು ನಿಕಟವಾಗಿ ಗಮನಿಸುತ್ತಾರೆ ಮತ್ತು ಎಂದಿಗೂ ಅವಮಾನವನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನರಮೇಧ ನಡೆಸಿದವರೊಂದಿಗೆ ಭಾರತ ನಿಲ್ಲುವುದು ಅಕ್ಷಮ್ಯ ಅಪರಾಧ

ಭಾರತವು ರಷ್ಯಾದ ಇಂಧನ ಖರೀದಿಯನ್ನು ನಿಲ್ಲಿಸಿದರೆ, 9 ರಿಂದ 10 ಶತಕೋಟಿ ಡಾಲರ್‌ ನಷ್ಟವನ್ನು ಎದುರಿಸಬೇಕಾಗುತ್ತದೆ. ಭಾರತದಂತಹ ದೇಶದ ಜನರು, ರಾಜಕೀಯ ನಾಯಕತ್ವದಿಂದ ತೆಗೆದುಕೊಳ್ಳುವ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಾರೆ ಮತ್ತು ಯಾವುದೇ ರೀತಿಯ ಅವಮಾನವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪುಟಿನ್ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ತಮ್ಮ ಸ್ನೇಹಿತ ಎಂದು ಕರೆದ ಪುಟಿನ್‌, ತಮ್ಮ ಸಂವಾದವು ವಿಶ್ವಾಸಾರ್ಹ ಮತ್ತು ಆರಾಮದಾಯಕವಾಗಿದೆ ಎಂದು ತಿಳಿಸಿದರು.

ಅಮೆರಿಕದ ಸಂಕ ವಿಧಾನದಿಂದ ಭಾರತಕ್ಕೆ ಆಗುವ ನಷ್ಟವನ್ನು ರಷ್ಯಾದಿಂದ ಕಚ್ಚಾ ತೈಲ ಆಮದಿಯಿಂದ ಸರಿದೂಗಿಸಬಹುದು. ಇದರಿಂದ ಭಾರತವು ಸಾರ್ವಭೌಮ ರಾಷ್ಟ್ರವಾಗಿ ಗೌರವವನ್ನೂ ಗಳಿಸಲಿದೆ. ವ್ಯಾಪಾರ ಅಸಮತೋಲನವನ್ನು ಸರಿಪಡಿಸಲು ರಷ್ಯಾವು ಭಾರತದಿಂದ ಹೆಚ್ಚಿನ ಕೃಷಿ ಉತ್ಪನ್ನಗಳು ಮತ್ತು ಔಷಧಿಗಳನ್ನು ಖರೀದಿಸಬಹುದು. ಭಾರತದಿಂದ ಹೆಚ್ಚಿನ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು ಎಂದು ಪುಟಿನ್‌ ತಿಳಿಸಿದರು.

ಅಮೆರಿಕವು ಭಾರತದಂತಹ ದೇಶಗಳ ಮೇಲೆ ರಷ್ಯಾದ ಇಂಧನ ಆಮದಿಗೆ ಒತ್ತಡ ಹೇರಿದರೂ, ಸ್ವತಃ ರಷ್ಯಾದಿಂದ ಇತರ ಸಂಪನ್ಮೂಲಗಳನ್ನು ಆಮದು ಮಾಡಿಕೊಳ್ಳುತ್ತಿರುವ ದ್ವಿಮುಖ ನೀತಿಯನ್ನು ಪುಟಿನ್‌ ಟೀಕಿಸಿದರು. “ಅಮೆರಿಕವು ಅತಿದೊಡ್ಡ ಪರಮಾಣು ಶಕ್ತಿ ರಾಷ್ಟ್ರವಾಗಿದ್ದು, ಇದಕ್ಕೆ ಬೇಕಾಗುವ ಇಂಧನದಲ್ಲಿ ರಷ್ಯಾವು ಎರಡನೇ ಅತಿದೊಡ್ಡ ಪೂರೈಕೆದಾರ. ಯುರೇನಿಯಂನ ಆಮದಿನಲ್ಲಿ ರಷ್ಯಾದ ಪಾಲು ಗಮನಾರ್ಹವಾಗಿದೆ,” ಎಂದು ಅವರು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದಲ್ಲಿ ಪ್ರತಿ ಗಂಟೆಗೆ ಓರ್ವ ರೈತ ಆತ್ಮಹತ್ಯೆ: NCRB ವರದಿ

ಭಾರತದಲ್ಲಿನ ಅಪರಾಧ ಪ್ರಕರಣಗಳ ಕುರಿತಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)...

ಗಾಝಾದ ನೆರವಿಗೆ ಹೊರಟಿದ್ದ ‘ಸುಮುದ್ ಫ್ಲೋಟಿಲ್ಲಾ’ಗೆ ಇಸ್ರೇಲ್ ತಡೆ; ಹಲವು ಹೋರಾಟಗಾರರ ಬಂಧನ

ಕಳೆದ ಮೂರು ವರ್ಷಗಳಿಂದ ಇಸ್ರೇಲ್‌ನ ಕ್ರೌರ್ಯಕ್ಕೆ ತುತ್ತಾಗಿರುವ ಗಾಝಾಗೆ ಮಾನವೀಯ ನೆರವು...

ಸರ್ಕಾರಿ ಕೆಲಸಕ್ಕಾಗಿ ಮಗುವನ್ನು ಕಾಡಿಗೆ ಎಸೆದ ಪೋಷಕರು; ಬಂಡೆ ಕೆಳಗೆ ಬದುಕುಳಿದ ಶಿಶು

ಕಾಡಿನ ತಂಪಾದ ನೆಲದಲ್ಲಿ, ತೆರೆದ ಆಕಾಶದ ಕೆಳಗೆ ಆ ಮಗು ಕೂಗುತ್ತಿತ್ತು....

ಬಜೆಟ್‌ ಇಲ್ಲದೆ ಅಮೆರಿಕ ಅತಂತ್ರ; ಸರ್ಕಾರಿ ಚಟುವಟಿಕೆಗಳು ‘ಶಟ್‌ಡೌನ್‌’

ಟ್ರಂಪ್ ಸರ್ಕಾರ ಮಂಡಿಸಿದ ತಾತ್ಕಾಲಿಕ ಬಜೆಟ್‌ಗೆ ಅಮೆರಿಕ ಸೆನೆಟ್‌ನಲ್ಲಿ ಅನುಮೋದನೆ ದೊರೆತಿಲ್ಲ....

Download Eedina App Android / iOS

X