ಇರಾನಿನ ಕ್ಷಿಪಣಿ ಶಕ್ತಿ ಪ್ರಚಂಡ; ಇಸ್ರೇಲ್ ಈಗಾಗಲೇ ರುಚಿ ಕಂಡಿದೆ

Date:

ಇರಾನ್‌ನ ಕ್ಷಿಪಣಿ ಶಕ್ತಿ, ಮಧ್ಯಪ್ರಾಚ್ಯದಲ್ಲಿ ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನಗಳಲ್ಲಿ ಒಂದಾಗಿದೆ. ವಿಶೇಷವಾಗಿ, ಅಮೆರಿಕ ಮತ್ತು ಇಸ್ರೇಲ್‌ಗಳ ಸೈನಿಕ ಒತ್ತಡದ ನಡುವೆಯೂ, ಇರಾನ್ ತನ್ನ ‘ಅಸಮಾನ ಯುದ್ಧ ತಂತ್ರ’ದ (Asymmetrical Warfare) ಭಾಗವಾಗಿ ದೀರ್ಘ ವ್ಯಾಪ್ತಿಯ ಮತ್ತು ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಿರ್ಮಿಸಿದೆ. ಸಣ್ಣ ವ್ಯಾಪ್ತಿಯ ಕ್ಷಿಪಣಿ ಫತೇಹ್-110(ಸುಮಾರು 300 ಕಿಮೀ), ಜೋಲ್ಫಘಾರ್ (700 ಕಿಮೀ), ಮತ್ತು 1,300–2,000 ಕಿಮೀ ವ್ಯಾಪ್ತಿಯ ಮಧ್ಯಮ ಕ್ಷಿಪಣಿ ಶಹಾಬ್-3, ಸುಮಾರು 2,000–2,500 ಕಿಮೀ ವ್ಯಾಪ್ತಿಯ ಸೆಜ್ಜಿಲ್ ಮತ್ತು ಸುಮಾರು 2,000–3,000 ಕಿಮೀ ವ್ಯಾಪ್ತಿಯ ಖೊರಂಶಹರ್ ಕ್ಷಿಪಣಿಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಿಟ್ಟುಕೊಂಡಿದೆ. ಅಂದರೆ, ಸುಮಾರು 2,000–3,000 ಕಿಮೀ ವ್ಯಾಪ್ತಿಯೊಳಗಿನ ಬಹುತೇಕ ಎಲ್ಲ ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳ ಸೈನಿಕ ನೆಲೆಗಳು ಇರಾನ್‌ನ ಕ್ಷಿಪಣಿಗಳ ವ್ಯಾಪ್ತಿಯಲ್ಲಿವೆ.

- Advertisement -

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಇರಾನ್‌ ದೇಶದ ಅತ್ಯಂತ ಅಗ್ಗದ ಡೋನ್‌ ಶಾಹಿದ್‌ ಸರಣಿಯ Shahed-136, Shahed-131 ಡ್ರೋನ್‌ಗಳು ಮಹತ್ವದ ಪಾತ್ರ ವಹಿಸಿವೆ. ಇವು ಕಡಿಮೆ ವೆಚ್ಚದಲ್ಲಿ ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿರುವುದರಿಂದ, ಇರಾನ್ ವಿಶ್ವದ ಪ್ರಮುಖ ಡ್ರೋನ್ ತಂತ್ರಜ್ಞಾನ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಜೂನ್‌ 2025ರಲ್ಲಿ ಇರಾನ್ 12 ದಿನಗಳ ಅವಧಿಯಲ್ಲಿ ಇಸ್ರೇಲ್ ಕಡೆಗೆ 1,000ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿತ್ತು. ಈ ದಾಳಿಗಳು ದೊಡ್ಡ ಪ್ರಮಾಣದ ಗುಂಪುಗಳಲ್ಲಿ ನಡೆದ ಕಾರಣ, ಇಸ್ರೇಲ್ ಮತ್ತು ಅಮೆರಿಕಾದ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ಭಾರೀ ಒತ್ತಡ ಉಂಟಾಯಿತು. ಇಸ್ರೇಲ್‌ನ ಬಹುಪದರ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಕೆಲವು ಕ್ಷಿಪಣಿಗಳನ್ನು ತಡೆದರೂ, ಗಣನೀಯ ಸಂಖ್ಯೆಯ ಕ್ಷಿಪಣಿಗಳು ರಕ್ಷಣೆಯನ್ನು ಭೇದಿಸಿ ಗುರಿಗಳನ್ನು ತಲುಪಿದವು.

ಈ ಲೇಖನ ಓದಿದ್ದೀರಾ?: ಎಪ್‌ಸ್ಟೀನ್‌ ಪ್ರಕರಣ: ಟ್ರಂಪ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕಡತಗಳೇ ನಾಪತ್ತೆ

ಇಸ್ರೇಲ್‌ನ ಟೆಲ್ ಅವೀವ್ ಉಪನಗರಗಳಾದ ಬಾಟ್ ಯಾಮ್ ಮತ್ತು ರಮತ್ ಗಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ನೂರಾರು ಕಟ್ಟಡಗಳು ಹಾನಿಗೊಳಗಾದವು. ಕೆಲವು ಕಟ್ಟಡಗಳು ತೀವ್ರ ಹಾನಿಗೊಳಗಾದ ಕಾರಣ ನಂತರ ಅವುಗಳನ್ನು ಕೆಡವಬೇಕಾಯಿತು. ಟೆಲ್ ಅವೀವ್ ನಗರದಲ್ಲೇ ವಿವಿಧ ದಾಳಿ ಪ್ರದೇಶಗಳಲ್ಲಿ ಸುಮಾರು 480 ಕಟ್ಟಡಗಳು ಹಾನಿಗೀಡಾಗಿದ್ದವು. ಇರಾನ್‌ನ ಕ್ಷಿಪಣಿ ದಾಳಿಗಳು, ಇಸ್ರೇಲ್‌ನ ಪ್ರಮುಖ ಸಾರ್ವಜನಿಕ, ಸೈನಿಕ ಮತ್ತು ಇಂಧನ ಮೂಲಸೌಕರ್ಯಗಳಿಗೆ ಗಂಭೀರ ನಷ್ಟ ಉಂಟು ಮಾಡಿದ್ದವು. ಬೆರ್ ಶೇವಾದ ಸೋರೋಕಾ ಮೆಡಿಕಲ್ ಸೆಂಟರ್ ಹಾನಿಗೊಂಡು ರಾಸಾಯನಿಕ ಸೋರಿಕೆ ಸಂಭವಿಸಿತು ಮತ್ತು ವಿಭಾಗವನ್ನು ಖಾಲಿ ಮಾಡಲಾಯಿತು. ರೆಹೋವೋಟ್‌ನ ವೈಜ್‌ಮನ್ ವಿಜ್ಞಾನ ಸಂಸ್ಥೆಯ ಸುಮಾರು 90% ಕಟ್ಟಡಗಳು ಹಾನಿಗೊಂಡು ಹಲವಾರು ಪ್ರಯೋಗಾಲಯಗಳು ನಾಶವಾದವು. ಸ್ವತಂತ್ರ ವರದಿಗಳ ಪ್ರಕಾರ, ಕೆಲವು IDF ಸೈನಿಕ ತಾಣಗಳು ಮತ್ತು ವಾಯುನೆಲೆಗಳು ದಾಳಿಗೆ ಒಳಗಾದವು. ಹೈಫಾ ಬೇಯ ಬಜಾನ್ ತೈಲ ಶೋಧನಾ ಘಟಕ ಮತ್ತು ಪೈಪ್‌ಲೈನ್‌ಗಳು ಹಾನಿಗೊಂಡು, ಇಸ್ರೇಲ್‌ನ ಇಂಧನ ಮತ್ತು ಮೂಲಸೌಕರ್ಯ ವ್ಯವಸ್ಥೆಗೆ ಗಂಭೀರ ವ್ಯತ್ಯಯ ಉಂಟಾಗಿತ್ತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಟಾರ್ಕ್ಟಿಕದಲ್ಲಿ ಪೆಂಗ್ವಿನ್ ಎಣಿಸುವ ಅಪರೂಪದ ಉದ್ಯೋಗ: ಲಕ್ಷಗಳ ಸಂಭಾವನೆ, ಹೇಗಿರುತ್ತದೆ ಹಿಮದ ನಾಡಿನ ಬದುಕು?

ಜನಜಂಗುಳಿ, ಟ್ರಾಫಿಕ್ ಕಿರಿಕಿರಿ ಹಾಗೂ ದೈನಂದಿನ ಯಾಂತ್ರಿಕ ಬದುಕಿನಿಂದ ದೂರ ಸರಿದು,...

ಯಮೆನ್ ರಾಷ್ಟ್ರಪತಿ ಭವನದ ಮೇಲೆ ಹೂತಿಗಳ ಕ್ಷಿಪಣಿ ದಾಳಿ: ಐವರ ಸಾವು

ಯಮೆನ್‌ನ ದಕ್ಷಿಣ ಭಾಗದ ಪ್ರಮುಖ ನಗರವಾದ ಅದನ್‌ನಲ್ಲಿರುವ ಅಲ್-ಮಾಶಿಕ್ ರಾಷ್ಟ್ರಪತಿ ಭವನದ...

ಭಾರತದ ಮೇಲೆ ಶೇ.100 ಸುಂಕ: 10 ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅಂತಿಮ ತೀರ್ಮಾನ!

ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಶೇ. 100ರಷ್ಟು ಭಾರಿ ಆಮದು...