ಇಸ್ರೇಲ್ – ಹಮಾಸ್ ಹೋರಾಟಗಾರರ ನಡುವೆ ನಡೆಯುತ್ತಿರುವ ಯುದ್ಧವು ತೀವ್ರಗೊಳ್ಳುತ್ತಿದ್ದಂತೆ, ಚೀನಾ ತನ್ನ ಆನ್ಲೈನ್ ನಕ್ಷೆಗಳಿಂದ ಇಸ್ರೇಲ್ಅನ್ನು ತೆಗೆದುಹಾಕಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಂತಾರಾಷ್ಟ್ರೀಯ ಮಟ್ಟದ ಹೆಸರುಗಳಿಸಿರುವ ಬೈದು ಮತ್ತು ಅಲಿಬಾಬಾದಂತಹ ಚೀನಾದ ಕಂಪನಿಗಳು ಇಸ್ರೇಲ್ಅನ್ನು ತನ್ನ ಆನ್ಲೈನ್ ವೆಬ್ಸೈಟ್ ನಕ್ಷೆಗಳಲ್ಲಿ ಕೈಬಿಟ್ಟಿವೆ.
ವರದಿಯ ಪ್ರಕಾರ, ಬೈದುನಲ್ಲಿನ ಡಿಜಿಟಲ್ ನಕ್ಷೆಗಳು ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ಪ್ರಾಂತ್ಯಗಳ ನಡುವಿನ ಗಡಿರೇಖೆಗಳನ್ನು ತೋರಿಸುತ್ತವೆ. ಆದರೆ ಹೆಸರಿನಿಂದ ದೇಶವನ್ನು ಗುರುತಿಸುವುದಿಲ್ಲ. ಅಲಿಬಾಬಾ ವೆಬ್ಸೈಟ್ ಲಕ್ಸೆಂಬರ್ಗ್ನಂತಹ ಸಣ್ಣ ದೇಶಗಳನ್ನು ಸಹ ಸ್ಪಷ್ಟವಾಗಿ ಗುರುತಿಸಲಾಗಿದೆ. ಆದರೆ ಇಸ್ರೇಲ್ ಹೆಸರು ಗುರುತಿಸಿಲ್ಲ.
🇨🇳🇮🇱 China has REMOVED ISRAEL from its online maps, including Baidu and Alibaba! pic.twitter.com/UwcD86N3Pz
— Hend F Q (@LadyVelvet_HFQ) October 31, 2023
ಚೀನಾ ದೇಶದ ಹಲವು ಇಂಟರ್ನೆಟ್ ಬಳಕೆದಾರರು ಈ ಪ್ರಮುಖ ಲೋಪವನ್ನು ಗಮನಿಸಿದ್ದಾರೆ. ಇದು ಈಗ ದೇಶದಲ್ಲಿ ಚರ್ಚೆಯ ಟ್ರೆಂಡಿಂಗ್ ವಿಷಯವಾಗಿದೆ. ಅಲಿಬಾಬಾ ಮತ್ತು ಬೈದು ಈ ಬದಲಾವಣೆಗೆ ಅಧಿಕೃತ ವಿವರಣೆಯನ್ನು ನೀಡಿಲ್ಲ.
ಈ ಸುದ್ದಿ ಓದಿದ್ದೀರಾ? ವಾಟ್ಸಾಪ್ನಲ್ಲಿ ಹೊಸ ಫೀಚರ್ ಪ್ರಕಟ: ಏಕ ಕಾಲದಲ್ಲಿ ಎರಡು ಮೊಬೈಲ್ ನಂಬರ್ ಅಕೌಂಟ್ ಬಳಸುವ ಆಯ್ಕೆ
ಗಾಜಾದ ಮೇಲಿನ ಇಸ್ರೇಲ್ ಯುದ್ಧ ಆರಂಭಿಸಿದ ದಿನದಿದಲೂ ಅಮಾಯಕರಿಗೆ ಆಗುತ್ತಿರುವ ಸಂಕಷ್ಟ ತಪ್ಪಿಸುವ ಸಲುವಾಗಿ ಚೀನಾ ಕದನ ವಿರಾಮವನ್ನು ಬೆಂಬಲಿಸಿದೆ.
ಈ ಮೊದಲು, ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಈಜಿಪ್ಟ್ ಮತ್ತು ಇತರ ಅರಬ್ ರಾಷ್ಟ್ರಗಳೊಂದಿಗೆ ಸಾಧ್ಯವಾದಷ್ಟು ಬೇಗ ಪ್ಯಾಲೆಸ್ತೀನ್ ಸಮಸ್ಯೆಗೆ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸುವುದರ ಜೊತೆಗೆ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದರು.
ಚೀನಾವು ಈಜಿಪ್ಟ್ನೊಂದಿಗೆ ಸಂವಹನ ಮತ್ತು ಸಮನ್ವಯವನ್ನು ಕಾಪಾಡಿಕೊಳ್ಳಲು ಸಿದ್ಧವಾಗಿದೆ. ಯುದ್ಧವನ್ನು ತಡೆಯಲು ಮತ್ತು ಸಾಧ್ಯವಾದಷ್ಟು ಬೇಗ ಹಿಂಸಾಚಾರವನ್ನು ನಿಲ್ಲಿಸಲು ಎರಡು ಕಡೆಯವರಿಗೆ ಒತ್ತಾಯ ಮಾಡುತ್ತೇವೆ ಎಂದು ಚೀನಾದ ಮಧ್ಯಪ್ರಾಚ್ಯ ರಾಯಭಾರಿ ಝೈ ಜುನ್ ಹೇಳಿದ್ದಾರೆ.