ಕುವೈತ್ ಅಗ್ನಿ ದುರಂತ| ಮೂವರು ಭಾರತೀಯರು, ನಾಲ್ವರು ಈಜಿಪ್ಟ್ ಪ್ರಜೆಗಳ ಬಂಧನ

Date:

ಸುಮಾರು 46 ಭಾರತೀಯರು ಸೇರಿದಂತೆ 50 ಜನರ ಸಾವಿಗೆ ಕಾರಣವಾದ ಕುವೈತ್ ಅಗ್ನಿ ದುರಂತ ಪ್ರಕರಣದಲ್ಲಿ ಮೂವರು ಭಾರತೀಯರು, ನಾಲ್ವರು ಈಜಿಪ್ಟಿನವರು ಮತ್ತು ಕುವೈತ್ ಪ್ರಜೆಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

- Advertisement -

ಜೂನ್ 12ರಂದು ಮಂಗಾಫ್ ನಗರದ ಆರು ಅಂತಸ್ತಿನ ಕಟ್ಟಡದಲ್ಲಿ ಭಾರೀ ಬೆಂಕಿ ಅವಘಡದ ಸಂಭವಿಸಿದ್ದು, ನೆಲ ಮಹಡಿಯಲ್ಲಿನ ಸಿಬ್ಬಂದಿ ಕೊಠಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಉಂಟಾಗಿದೆ. ಈ ಕಟ್ಟಡದಲ್ಲಿ 196 ವಲಸೆ ಕಾರ್ಮಿಕರು ವಾಸವಾಗಿದ್ದು, ಹೆಚ್ಚಿನವರು ಭಾರತೀಯರಾಗಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದನ್ನು ಓದಿದ್ದೀರಾ? ಕುವೈತ್‌ನಿಂದ 45 ಭಾರತೀಯರ ಮೃತದೇಹಗಳನ್ನು ಕೇರಳಕ್ಕೆ ಕರೆತಂದ ವಿಮಾನ

“ಅಲ್-ಮಂಗಾಫ್ ಕಟ್ಟಡ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಪ್ರಾಸಿಕ್ಯೂಷನ್ ಕುವೈತ್ ಪ್ರಜೆ, ಮೂವರು ಭಾರತೀಯ ಪ್ರಜೆಗಳು ಮತ್ತು ನಾಲ್ಕು ಈಜಿಪ್ಟ್ ಪ್ರಜೆಗಳನ್ನು ಎರಡು ವಾರಗಳ ಕಾಲ ಬಂಧನದಲ್ಲಿರಿಸಲು ಆದೇಶಿಸಿದೆ” ಎಂದು ಆಂಗ್ಲ ಭಾಷೆಯ ದೈನಿಕ ಅರಬ್ ಟೈಮ್ಸ್ ವರದಿಯಾಗಿದೆ.

ಆರೋಪಿಗಳ ಮೇಲೆ ನರಹತ್ಯೆ ಮತ್ತು ನಿರ್ಲಕ್ಷ್ಯದ ಆರೋಪ ಹೊರಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಕುವೈತ್‌ನ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆದೇಶದ ಮೇರೆಗೆ ಸಂತ್ರಸ್ತರ ಕುಟುಂಬಗಳಿಗೆ ತಲಾ 15,000 ಯುಎಸ್ ಡಾಲರ್ (12.5 ಲಕ್ಷ ರೂ) ಪರಿಹಾರವನ್ನು ನೀಡಲಾಗುತ್ತದೆ. ಪರಿಹಾರ ಮೊತ್ತವನ್ನು ಸಂತ್ರಸ್ತರ ರಾಯಭಾರ ಕಚೇರಿಗಳಿಗೆ ತಲುಪಿಸಲಾಗುವುದು. ಎಂದು ಪತ್ರಿಕೆ ವರದಿ ಮಾಡಿದೆ.

ಇನ್ನು ಮೃತರಲ್ಲಿ ನಲವತ್ತಾರು ಮಂದಿ ಭಾರತೀಯರಾಗಿದ್ದರೆ, ಮೂವರು ಫಿಲಿಪಿನೋಸ್ ಆಗಿದ್ದಾರೆ. ಮೃತರಲ್ಲಿ ಒಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ.

 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂಡಿಯಾ ಒಕ್ಕೂಟದತ್ತ ಮುಖ ಮಾಡಿದರೇ ಜಗನ್?

ಆಂಧ್ರಪ್ರದೇಶದ ರಾಜಕಾರಣದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೊಸದೊಂದು ರಾಜಕೀಯ ಸಮೀಕರಣ ರೂಪುಗೊಳ್ಳುವ...

ನಮ್ಮ ದೇಶದಲ್ಲಿ ಅಲ್ಲದೆ ಪಾಕಿಸ್ತಾನದಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕೇ?; ಕೇಂದ್ರದ ವಿರುದ್ಧ ಕೇಜ್ರಿವಾಲ್‌ ಕಿಡಿ

ನಮ್ಮ ದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸದಿದ್ದರೆ ಪಾಕಿಸ್ತಾನದಲ್ಲಿ ಹಾರಿಸಬೇಕೇ? ಭಾರತದ ತ್ರಿವರ್ಣ...

ಭಾರತದ ಮೇಲೆ 100% ಸುಂಕ ಹೇರುವ ನಿರ್ಧಾರ ರದ್ದು: ಟ್ರಂಪ್

ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುತ್ತಿರುವ ಭಾರತ ಸೇರಿದಂತೆ ವಿಶ್ವದ ಪ್ರಮುಖ...

CEC ರಾಜೀನಾಮೆಗೆ ಆಗ್ರಹ; ಅ.23ರಂದು ಸಂಯುಕ್ತ ಕಿಸಾನ್‌ ಮೋರ್ಚಾದಿಂದ ದೆಹಲಿ ಚಲೋ

SIR ಪ್ರಕ್ರಿಯೆಯನ್ನು ವಿರೋಧಿಸಿ, CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್...