ಅಮೆರಿಕ: ಟ್ರಂಪ್ ವಿರುದ್ಧ ಭಾರತೀಯ ಮೂಲದ ನಿಕ್ಕಿ ಹ್ಯಾಲೆಗೆ ಮೊದಲ ಗೆಲುವು

Date:

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಬಲ ಸ್ಪರ್ಧಿ ನಿಕ್ಕಿ ಹ್ಯಾಲೆ ಅವರು ವಾಷಿಂಗ್ಟನ್ ಡಿಸಿಯ ಪ್ರಾಥಮಿಕ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗೆಲುವು ಸಾಧಿಸಿದ್ದಾರೆ.

- Advertisement -

ವಿಶ್ವಸಂಸ್ಥೆಯ ಮಾಜಿ ರಾಯಭಾರಿಯಾದ ನಿಕ್ಕಿ ಹ್ಯಾಲೆ ಅವರು ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಮೊದಲ ಸಾಂಕೇತಿಕ ಗೆಲುವು ಪಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ...

ನಾಟಕಕಾರ, ಬರಹಗಾರ ಅಡ್ಡಂಡ ಕಾರ್ಯಪ್ಪ ಹಿಂದಿನಿಂದಲೂ ಒಂದಲ್ಲೊಂದು ಕಾರಣಕ್ಕೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿರುವ ಹೆಸರು. ಇತಿಹಾಸದ ನಿರೂಪಣೆ, ರಂಗಭೂಮಿಯ ಬಳಕೆ, ಧಾರ್ಮಿಕ ಮತ್ತು ರಾಜಕೀಯ ವಿಚಾರಗಳ ಅಭಿವ್ಯಕ್ತಿ ಹಾಗೂ ಕೋಮು ಸೌಹಾರ್ದದ...

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ...

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕಲೆ ಮತ್ತೊಮ್ಮೆ ಅತ್ಯಂತ ಸುಂದರವಾಗಿ ಸಾಬೀತುಪಡಿಸಿದೆ. ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು 'ಮಹಿಷಾಸುರ...

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ...

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ ಮತದಾನ ಅಕ್ಟೋಬರ್ 23ರಂದು ನಡೆಯಲಿದೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆರಿಸಲು ಪ್ರಾಶಸ್ತ್ಯ ಮತದಾನ ಪದ್ಧತಿಯನ್ನು ಅನುಸರಿಸಬೇಕು. ಈ ಸಂದರ್ಭದಲ್ಲಿ...

ಡೊನಾಲ್ಡ್ ಟ್ರಂಪ್ ವಿರುದ್ಧ ಉಳಿದುಕೊಂಡಿರುವ ಏಕೈಕ ಸ್ಪರ್ಧಿ ನಿಕ್ಕಿ ಹ್ಯಾಲೆ, ಶೇ 62.9 ಮತಗಳನ್ನು ಪಡೆದರೆ, ಟ್ರಂಪ್ ಶೇ.33.2 ಮತಗಳನ್ನು ಗಳಿಸಿದರು.

ನವೆಂಬರ್ನಲ್ಲಿ ಮತ್ತೊಬ್ಬ ಪ್ರಬಲ ಸ್ಪರ್ಧಿ ಡೆಮಾಕ್ರಟಿಕ್ ಅಭ್ಯರ್ಥಿ ಹಾಲಿ ಅಧ್ಯಕ್ಷ ಜೋ ಬೈಡನ್ ವಿರುದ್ಧ ರಿಪಬ್ಲಿಕನ್ ಸ್ಪರ್ಧಿಯಾಗಿರುವ ನಿಕ್ಕಿ ಹ್ಯಾಲೆ ಅವರು ಪ್ರಬಲ ಪೈಪೋಟಿ ಎದುರಿಸಬೇಕಿದೆ.

ಟ್ರಂಪ್ ಇಲ್ಲಿಯವರೆಗೂ ಎಂಟು ಅಭ್ಯರ್ಥಿಗಳನ್ನು ಗಮನಾರ್ಹ ಅಂತರದಲ್ಲಿ ಸೋಲಿಸಿದ್ದು, ಹ್ಯಾಲೆ ಅವರನ್ನು ಕೂಡ ಕ್ಯಾಪಿಟಲ್ ಸಿಟಿಯಿಂದ ಪರಾಭವಗೊಳಿಸಿದ್ದರು.

ಟ್ರಂಪ್ ಅವರು ಮುಂಬರುವ ಸುತ್ತಿನಲ್ಲಿ ಎಲ್ಲ ಎದುರಾಳಿಗಳನ್ನು ಮಣಿಸುವ ನಿರೀಕ್ಷೆಯಿದೆ ಎಂದು ಚುನಾವಣಾ ಸಮೀಕ್ಷೆಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಬ್ರ್ಯಾಂಡ್ ಬೆಂಗಳೂರು’ ಬಡವರು ಬದುಕಲು ಯೋಗ್ಯವಾದ ನಗರವೂ ಆಗಲಿ

ವಾಷಿಂಗ್ಟನ್ ಡಿಸಿ ಶೇ.100 ರಷ್ಟು ನಗರ ಪ್ರದೇಶವಾಗಿದ್ದು, ಹೆಚ್ಚಿನ ಪ್ರಮಾಣದ ನಾಗರಿಕರು ಪದವೀಧರರಾಗಿದ್ದಾರೆ. ಟ್ರಂಪ್ ಅವರ ನೆಲೆ ಗ್ರಾಮಿಣ ಪ್ರದೇಶವನ್ನು ಅವಲಂಭಿಸಿದೆ. ಇವರು ಕಡಿಮೆ ಶಿಕ್ಷಣ ಹೊಂದಿರುವ ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ.

ನಗರ ಪ್ರದೇಶವು ಗಮನಾರ್ಹ ಸಂಖ್ಯೆ ಫೆಡರಲ್ ಕಾರ್ಮಿಕರ ನೆಲೆಯಾಗಿದೆ. ಒಂದು ನವೆಂಬರ್‌ನಲ್ಲಿ ತಾವು ಜಯಗಳಿಸಿದರೆ ತಮ್ಮ ನಿಷ್ಠರಿಗೆ ಅಧಿಕಾರ ನೀಡುವುದಾಗಿ ಟ್ರಂಪ್ ವಾಗ್ದಾನ ಮಾಡಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಕೆಲವು ವರ್ಗದ ಫೆಡರಲ್‌ ಕಾರ್ಮಿಕರು ಜೀವ ಬೆದರಿಕೆ ಎದುರಿಸುತ್ತಿದ್ದಾರೆ.

ಹ್ಯಾಲೆ ಅವರು ತಮ್ಮ ಗೆಲುವಿನಿಂದ 19 ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ, ನಾಮನಿರ್ದೇಶನವನ್ನು ಪಡೆಯಲು ಅಗತ್ಯವಿರುವ 1,215 ಪ್ರತಿನಿಧಿಗಳ ಒಂದು ಸಣ್ಣ ಭಾಗವಾಗಿದೆ. ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಗೆಲ್ಲುತ್ತಿಲ್ಲ ಎಂಬ ವಾದಕ್ಕೆ ಈ ಗೆಲುವು ಹ್ಯಾಲೆ ಅವರಿಗೆ ಶಕ್ತಿ ನೀಡಬಹುದು.

ರಾಜಧಾನಿಯಲ್ಲಿ ರಿಪಬ್ಲಿಕನ್ನರು ಟ್ರಂಪ್ ಅವರನ್ನು ತಿರಸ್ಕರಿಸಿದ್ದು ಇದೇ ಮೊದಲಲ್ಲ. 2016 ರಲ್ಲಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾದಲ್ಲಿ ನಡೆದ ಕೊನೆಯ ಸ್ಪರ್ಧಾತ್ಮಕ ರಿಪಬ್ಲಿಕನ್ ನಾಮನಿರ್ದೇಶನ ಸ್ಪರ್ಧೆಯಲ್ಲಿ, ಟ್ರಂಪ್ ಅವರು ಶೇ. 14 ಕ್ಕಿಂತ ಕಡಿಮೆ ಮತಗಳನ್ನು ಪಡೆದರು ಮತ್ತು ಅವರು ನಾಮನಿರ್ದೇಶದಲ್ಲಿ ಗೆದ್ದರೂ ಸಹ ಯಾವುದೇ ಪ್ರತಿನಿಧಿಗಳು ಇರಲಿಲ್ಲ.

ಮಾ.05 ರಂದು ಅಮೆರಿಕದ ಒಂದು ಭಾಗವಾದ 15 ರಾಜ್ಯಗಳಲ್ಲಿಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಚುನಾವಣೆ ನಡೆಯಲಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ ನಡುವೆ ಟ್ರಂಪ್‌ಗೆ ಅಗ್ನಿಪರೀಕ್ಷೆ!

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್...

ಮಸೀದಿ ಪಾವಿತ್ರ್ಯಕ್ಕೆ ಧಕ್ಕೆ ಆರೋಪ; ಮೆಕ್ಕಾದಲ್ಲಿ ಇಬ್ಬರು ಬಾಂಗ್ಲಾದೇಶಿಗರಿಗೆ ಗಲ್ಲು

ಸೌದಿ ಅರೇಬಿಯಾದ ಪವಿತ್ರ ನಗರ ಮೆಕ್ಕಾ ಪ್ರದೇಶದಲ್ಲಿ ಮಸೀದಿಯೊಂದರ ಒಳಗೆ ಅನುಚಿತ...

ಅಮೆರಿಕನ್ನರಿಗೆ ಉದ್ಯೋಗ ವಂಚನೆ: ಕ್ಲೌಡೆರಾ ಕಂಪನಿಗೆ ಭಾರಿ ದಂಡ, ಗ್ರೀನ್ ಕಾರ್ಡ್ ಪ್ರೋಗ್ರಾಂನಿಂದ ನಿಷೇಧ

ಅಮೆರಿಕ ಸರ್ಕಾರವು ಸ್ಥಳೀಯ ಕಾರ್ಮಿಕರಿಗೆ ತಾರತಮ್ಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ 'ಕ್ಲೌಡೆರಾ'...