ಮೇ 10ರ ನಂತರ ಭಾರತೀಯ ಸೇನೆ ತಮ್ಮ ನಾಗರಿಕ ಉಡುಪುಗಳೊಂದಿಗೆ ಸಹ ಇರುವಂತಿಲ್ಲ: ಮಾಲ್ಡೀವ್ಸ್ ಅಧ್ಯಕ್ಷ

Date:

ಚೀನಾದೊಂದಿಗೆ ಉಚಿತ ಸೇನಾ ನೆರವು ಸ್ವೀಕರಿಸುವ ಒಪ್ಪಂದ ಮಾಡಿಕೊಂಡ ನಂತರ ಭಾರತೀಯ ಸೇನೆಗೆ ಮಾಲ್ಡೀವ್ಸ್ ಸಂಪೂರ್ಣ ತಡೆಯೊಡ್ಡಲು ನಿರ್ಧರಿಸಿದೆ.

- Advertisement -

ಮೇ 10ರ ನಂತರ ಸೇನಾ ಉಡುಪು ಮಾತ್ರವಲ್ಲ ನಾಗರಿಕ ಉಡುಪುಗಳಲ್ಲೂ ನಮ್ಮ ದ್ವೀಪಕ್ಕೆ ಕಾಲಿಡುವಂತಿಲ್ಲ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಭಾರತೀಯರ ಅಧಿಕಾರಿಗಳ ತಂಡ ಮಾಲ್ಡೀವ್ಸ್ ನ ಮೂರು ವಾಯುಪಡೆಯ ವಿಭಾಗದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮೊಹಮ್ಮದ್ ಮೊಯಿಝು ಈ ಹೇಳಿಕೆ ನೀಡಿದ್ದಾರೆ. ಮಾರ್ಚ್‌ 10ರೊಳಗೆ ಎರಡೂ ರಾಷ್ಟ್ರಗಳು ತಮ್ಮ ಸೇನಾ ಸಿಬ್ಬಂದಿಯನ್ನು ವಾಪಸ್‌ ಕರೆಸಿಕೊಳ್ಳಬೇಕು ಗಡುವಿನ ಒಪ್ಪಂದವಿದೆ.

ಸಮಾರಂಭವೊಂದರಲ್ಲಿ ಮಾತನಾಡಿದ ಮೊಯಿಝು, ಕೆಲವರು ಭಾರತೀಯ ಪಡೆಗಳನ್ನು ಮಾಲ್ಡೀವ್ಸ್‌ನಿಂದ ಉಚ್ಚಾಟಿಸಿರುವುದಕ್ಕೆ ಸರ್ಕಾರದ ಯಶಸ್ಸು ಎಂದು ಸುಳ್ಳುಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ತಿಳಿಸಿದರು.

“ಭಾರತೀಯ ಪಡೆ ನಿರ್ಗಮಿಸುತ್ತಿಲ್ಲ, ಅವರು ತಮ್ಮ ಸೇನಾ ಉಡುಪುಗಳೊಂದಿಗೆ ಬದಲಿಸಿ ವಾಪಸಾಗುತ್ತಾರೆ. ನಮ್ಮ ಹೃದಯದೊಳಗೆ  ಅನುಮಾನಗಳನ್ನು ತುಂಬಿಕೊಳ್ಳುವ ಹಾಗೂ ಸುಳ್ಳುಗಳ ನ್ನು ಹಂಚಿಕೊಳ್ಳುವ ಆಲೋಚನೆಗಳಲ್ಲಿ ತೊಡಗಬಾರದು” ಎಂದು ಮೊಯಿಝು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳು ಸೃಷ್ಟಿಸಿ, ಬೆಂಕಿ ಹಚ್ಚಿ, ಭಯ ಬಿತ್ತುವವರು ಯಾರು?

“ಸೇನಾ ವಸ್ತ್ರ ಹಾಗೂ ನಾಗರಿಕ ಉಡುಪುಗಳಲ್ಲೂ ಭಾರತೀಯ ಪಡೆಗಳು ಮೇ 10 ರ ನಂತರ ಬರುವಂತಿಲ್ಲ. ಭಾರತೀಯ ಸೇನೆ ತಮ್ಮ ಸಾಮಾನ್ಯ ಬಟ್ಟೆಯನ್ನು ಧರಿಸಿ ಈ ದೇಶದಲ್ಲಿ ಉಳಿದುಕೊಳ್ಳುವಂತಿಲ್ಲ. ನಾನು ವಿಶ್ವಾಸದೊಂದಿಗೆ ಹೇಳುತ್ತಿದ್ದೇನೆ” ಎಂದು ಮಾಲ್ಡೀವ್ಸ್ ಅಧ್ಯಕ್ಷರು ಹೇಳಿದರು.

“ನಾವು ಇದನ್ನು ಸಾಧಿಸುತ್ತೇವೆಂದು ನನಗೆ ಆತ್ಮವಿಶ್ವಾಸವಿದೆ. ಕೆಲವೊಂದು ನಿಯಮಾವಳಿಗಳ ಕಾರಣದಿಂದ ಈ ಯೋಜನೆ ಜಾರಿಗೊಳಿಸಲು ತಡವಾಗಲಿದೆ” ಎಂದು ಮೊಹಮ್ಮದ್ ಮುಯಿಝು ತಿಳಿಸಿದರು.

ಜನವರಿಯಲ್ಲಿ ಭಾರತದ ಪ್ರಧಾನಿ ಲಕ್ಷದ್ವೀಪಕ್ಕೆ ಭೇಟಿ ಕೊಟ್ಟ ನಂತರ ಎರಡೂ ರಾಷ್ಟ್ರಗಳಲ್ಲಿ ಉಂಟಾದ ರಾಜತಾಂತ್ರಿಕ ವಿವಾದಗಳ ನಂತರ ಮಾಲ್ಡೀವ್ಸ್‌ ಅಧ್ಯಕ್ಷರ ಹೇಳಿಕೆ ಹೊರಬಿದ್ದಿದೆ.

ಕಳೆದ ಕೆಲವು ವರ್ಷಗಳಿಂದ ಎರಡು ಹೆಲಿಕಾಪ್ಟರ್ ಹಾಗೂ ಡ್ರೋನರ್‌ ವಾಯುಪಡೆ ಬಳಸಿಕೊಂಡು ಜನರಿಗೆ ಮಾನವೀಯ ಹಾಗೂ ವೈದ್ಯಕೀಯ ಸ್ಥಳಾಂತರಿಸುವಿಕೆಯ ಸೇವೆ ಒದಗಿಸಲು ಭಾರತೀಯ ಮೂರು ವಿಭಾಗಗಳ 88 ಸೇನಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದೆ.

ಫೆ.2 ರಂದು ದೆಹಲಿಯಲ್ಲಿ ನಡೆದ ಎರಡೂ ದೇಶಗಳ ಉನ್ನತ ಮಟ್ಟದ ಸಭೆಯ ನಂತರ ಉಭಯ ದೇಶಗಳ ಸೇನಾ ಪಡೆ ಮೇ 10ರೊಳಗೆ ವಾಪಸ್‌ ಆಗಲಿವೆ. ಮೊದಲ ಹಂತವು ಮಾ.10ರೊಳಗೆ ಪೂರ್ಣಗೊಳ್ಳಬೇಕಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದ ಮೊಯಿಝು ಭಾರತದ ಪಡೆಗಳನ್ನು ತಮ್ಮ ದ್ವೀಪ ರಾಷ್ಟ್ರದಿಂದ ವಾಪಸ್‌ ಕಳಿಸುವುದಾಗಿ ಜನತೆಗೆ ವಾಗ್ದಾನ ನೀಡಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಿಹಾರ್ ಜೈಲಿನಲ್ಲಿ ಸಿಜೆಪಿ ನಾಯಕರಿಗೆ ಹೈ ಸೆಕ್ಯುರಿಟಿ; ಇತರ ಕೈದಿಗಳಿಂದ ಪ್ರತ್ಯೇಕ ವಾಸ

ಅನುಮತಿಯಿಲ್ಲದೆ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ...

ಒಂದೇ ಕುಟುಂಬದ ಐವರು ಶವವಾಗಿ ಪತ್ತೆ; ವಿಷಾಹಾರ ಸೇವಿಸಿದ ಶಂಕೆ

ಒಂದೇ ಕುಟುಂಬದ ಐವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ...

‘ಮಹಿಳೆಯರನ್ನು ಗೌರವಿಸುವ ಯುವಜನತೆಯ ಮುಂದೆ ಬಿಜೆಪಿಯ ನಿಜಬಣ್ಣ ಬಯಲಾಗಿದೆ’: ಪ್ರಕಾಶ್ ರಾಜ್

ದೇಶದ ವಿವಿಧ ಭಾಗಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಯುವಜನತೆಯನ್ನು ಶ್ಲಾಘಿಸಿರುವ ನಟ...

SIR | ಯುವಜನರ ಮೇಲಿನ ದಮನಕಾರಿ ಕ್ರಮಗಳ ಕುರಿತು ಅಮೆರಿಕದ 6 ಡೆಮಾಕ್ರಟಿಕ್ ಸಂಸದರ ಕಳವಳ; ವಿದೇಶಾಂಗ ಕಾರ್ಯದರ್ಶಿಗೆ ಪತ್ರ

ದೆಹಲಿ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳ ವೇಳೆ ಅತಿಯಾದ...