ಮೋದಿಗೆ ನೆತನ್ಯಾಹು ಸರ್ಕಾರ ಕೊಟ್ಟ ‘ನೆಸ್ಸೆಟ್ ಪ್ರಶಸ್ತಿ’ ಇಸ್ರೇಲ್‌ನಲ್ಲಿ ಇರಲೇ ಇಲ್ಲ!

Date:

ಬುಧವಾರ, ಪ್ರಧಾನಿ ಮೋದಿ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ‘ನೆಸ್ಸೆಟ್ ಪದಕ’ವನ್ನು ಪ್ರದಾನ ಮಾಡಿ, ಗೌರವಿಸಿದ್ದಾರೆ. ಆದರೆ, ಈ ಪದಕವನ್ನು ನೀಡಲಾದ ಕೆಲವೇ ಗಂಟೆಗಳಲ್ಲಿ ನಿರೀಕ್ಷೆಯಂತೆ ಭಾರತೀಯ ಮಾಧ್ಯಮಗಳು ತಮ್ಮ ಮುಖ್ಯಾಂಶಗಳಲ್ಲಿ ‘ಮೋದಿಗೆ ಇಸ್ರೇಲ್ ತನ್ನ ಅತ್ಯುನ್ನತ ಸಂಸದೀಯ ಗೌರವ ನೀಡಿದೆ’ ಎಂದು ಘೋಷಿಸಿದವು. ಕೊಂಡಾಡಿದವು. ಆದರೆ, ಇದೀಗ, ಆ ಪ್ರಶಸ್ತಿಯ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಯಾಕೆಂದರೆ, ಮೋದಿಗೆ ನೀಡಲಾಗಿರುವ ‘ನೆಸ್ಸೆಟ್‌ ಪ್ರಶಸ್ತಿ’ ಈವೆರೆಗೆ ಇಸ್ರೇಲ್‌ನಲ್ಲಿ ಇರಲೇಯಿಲ್ಲ. ಇದು, ಮೋದಿ ಭೇಟಿಯ ಬಳಿಕವಷ್ಟೇ ಸೃಷ್ಠಿಯಾದ ಪ್ರಶಸ್ತಿಯೆಂದು ಹೇಳಲಾಗುತ್ತಿದೆ.

- Advertisement -

ಇಸ್ರೇಲ್‌ ನೆಸ್ಸೆಟ್‌ನ ಸ್ಪೀಕರ್ ಅಮೀರ್ ಒಹಾನಾ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ  ‘ನೆಸ್ಸೆಟ್ ಪ್ರಶಸ್ತಿ’ಯನ್ನು ಘೋಷಿಸುವವರೆಗೆ ಅಂತಹ ಪ್ರಶಸ್ತಿಯ ಬಗ್ಗೆ ಸ್ವತಃ ಇಸ್ರೇಲ್‌ ಸಂಸದರೂ ಸೇರಿದಂತೆ ಯಾರಿಗೂ ತಿಳಿದಿರಲಿಲ್ಲ. ಚಿನ್ನ ಲೇಪಿತ ಕಂಚಿನ ಪದಕವನ್ನು ಮೋದಿಯವರ ಕುತ್ತಿಗೆಗೆ ಸುತ್ತುವವರೆಗೂ, ಯಾರೂ ಆ ಪದಕವನ್ನು ನೋಡಿಯೂ ಇರಲಿಲ್ಲವೆಂಬುದು ಈಗ ಬಹಿರಂಗವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇಸ್ರೇಲಿ ವಿರೋಧ ಪಕ್ಷದ ಸದಸ್ಯರ ಪ್ರಕಾರ, “ಈ ಪ್ರಶಸ್ತಿಯ ಹೆಸರು ಯಾವುದೇ ನಿಯಮಾವಳಿಗಳಲ್ಲಿ ಇಲ್ಲ. ಈ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಯಾವುದೇ ಸಮಿತಿ ಇಲ್ಲ. ಅಧ್ಯಕ್ಷರ ಅನುಮೋದನೆ ಇಲ್ಲ. ಮೋದಿ ಭೇಟಿಗೂ ಮೊದಲು, ಈ ಪ್ರಶಸ್ತಿ ಅಸ್ತಿತ್ವದಲ್ಲಿರಲಿಲ್ಲ. ನೆಸ್ಸೆಟ್‌ನ ಸ್ಪೀಕರ್ ಓಹಾನಾ ಅವರು ಅದನ್ನು ಸೃಷ್ಟಿಸಿದ್ದಾರೆ.”

ಇದಲ್ಲದೆ, ಈ ಪ್ರಶಸ್ತಿಯನ್ನು ಇಸ್ರೇಲಿ ಸಂಸತ್ತಿನ ಅತ್ಯುನ್ನತ ಗೌರವವಾಗಿದೆ ಎಂಬುದಕ್ಕೆ ಯಾವುದೇ ಪುರವೆ ಅಥವಾ ಸೂಚನೆಗಳೂ ಇಲ್ಲ ಎಂದು ಇಸ್ರೇಲಿ ವಿಪಕ್ಷಗಳು ಹೇಳಿವೆ.

ಆದಾಗ್ಯೂ, “ಇದು ನೆಸ್ಸೆಟ್ ಮತ್ತು ಅದರ ಸ್ಪೀಕರ್ ಪರವಾಗಿ ನೀಡಲಾಗಿರುವ ಗೌರವವಾಗಿದೆ. ಇಸ್ರೇಲ್ ಮತ್ತು ಯಹೂದಿ ಜನರಿಗೆ ಮೋದಿ ನೀಡಿದ ಮಹತ್ವದ ಕೊಡುಗೆಗಾಗಿ, ನೆಸ್ಸೆಟ್‌ನ ಮೂಲ ಮೌಲ್ಯಗಳನ್ನು ಮುನ್ನಡೆಸಲು ಅವರು ಮಾಡಿದ ಪ್ರಯತ್ನಗಳಿಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ” ಎಂದು ನೆಸ್ಸೆಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ಪ್ರಧಾನಿ ಮೋದಿಯವರನ್ನು ಪದಕ ಸ್ವೀಕರಿಸುವ ಮೊದಲ ವ್ಯಕ್ತಿಯಾಗಿ ಆಯ್ಕೆ ಮಾಡಿದ ಸಮಿತಿಯು ಅವರು ‘ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧಗಳನ್ನು ಗಮನಾರ್ಹವಾಗಿ ಬಲಪಡಿಸಿದ್ದಾರೆ ಮತ್ತು ದೇಶಗಳ ನಡುವಿನ ಕಾರ್ಯತಂತ್ರದ ಸಹಕಾರವನ್ನು ಗಾಢವಾಗಿಸಿದ್ದಾರೆಂದು ಹೇಳಿದೆ” ಎಂದು ನೆಸ್ಸೆಟ್‌ ಹೇಳಿದೆ.

ಈ ಬೆಳವಣಿಗೆಯನ್ನು ಇಸ್ರೇಲಿಗರು ವಿಚಿತ್ರವೆಂದು ಪರಿಗಣಿಸುತ್ತಾರೆ. ಬುಧವಾರವೇ ಪ್ರಶಸ್ತಿ ನೀಡಿದರೂ, ಗುರುವಾರ ಬೆಳಿಗ್ಗೆಯವರೆಗೂ ನೆಸ್ಸೆಟ್ ವೆಬ್‌ಸೈಟ್‌ನಲ್ಲಿ ಪ್ರಶಸ್ತಿಯನ್ನು ಘೋಷಿಸುವ/ಘೋಷಿಸಿದ ಅಧಿಕೃತ ಪುಟವು ತೆರೆದೇ ಇರಲಿಲ್ಲ. ಗುರುವಾರ ಮಧ್ಯಾಹ್ನದ ಆ ಪುಟವನ್ನು ರಚಿಸಲಾಗಿದೆ. ಅಲ್ಲದೆ, ಹೊಸ ಪ್ರಶಸ್ತಿಯ ಕುರಿತಾದ ವಿಕಿಪೀಡಿಯಾ ಪುಟವು ಕೆಲವು ವಿವರಗಳನ್ನು ನೀಡಿದೆ. ಆದರೆ, ಅದನ್ನು ಗುರುವಾರ ಬೆಳಗಿನ ಜಾವದಲ್ಲಿ ತರಾತುರಿಯಾಗಿ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

ಈ ಲೇಖನ ಓದಿದ್ದೀರಾ?: ಕೇಂದ್ರದ ಜಾತಿವಾರು ಸಮೀಕ್ಷೆಯಲ್ಲಿ ಅಲೆಮಾರಿಗಳ ಪ್ರಶ್ನೆ

ಮೋದಿ ಅವರಿಗೆ ‘ಅಸ್ತಿತ್ವದಲ್ಲಿಲ್ಲದ’ ಗೌರವ ನೀಡಿರುವುದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನೆಸ್ಸೆಟ್‌ನಲ್ಲಿ ಅಸಾಮಾನ್ಯ ಕ್ರಿಯೆಗಳನ್ನು ನಡೆಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ನೆಸ್ಸೆಟ್ ಸ್ವತಂತ್ರ ಸಂಸ್ಥೆಯ ಪಾತ್ರವನ್ನು ನಿರ್ವಹಿಸುವ ಬದಲು ಸರ್ಕಾರಿ ನೀತಿಯ ಸಾಧನವಾಗಿ ಮಾರ್ಪಟ್ಟಿರುವುದು ತುಂಬಾ ದುರದೃಷ್ಟಕರ ಎಂದು ವಿಪಕ್ಷಗಳು ಹೇಳಿವೆ.

ನೆಸ್ಸೆಟ್ ಪ್ರಕಾರ, ಪದಕವು ಇಸ್ರೇಲ್‌ನ ರಾಜ್ಯ ಲಾಂಛನ, ನೆಸ್ಸೆಟ್ ಕಟ್ಟಡ ಮತ್ತು ನೆಸ್ಸೆಟ್ ಪ್ಲಾಜಾದಲ್ಲಿನ ಧ್ವಜಗಳನ್ನು ಒಳಗೊಂಡಿದೆ.

“ನೆಸ್ಸೆಟ್ ಪದಕವನ್ನು ಸ್ವೀಕರಿಸಲು ನನಗೆ ಸಿಕ್ಕ ದೊಡ್ಡ ಗೌರವ ಇದು. ನಾನು ಅದನ್ನು ನಮ್ರತೆ ಮತ್ತು ತುಂಬುಹೃದಯದ ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಇದು ಒಬ್ಬ ವ್ಯಕ್ತಿಗೆ ನೀಡಲಾದ ಪ್ರಶಸ್ತಿಯಲ್ಲ, ಆದರೆ ಭಾರತ ಮತ್ತು ಇಸ್ರೇಲ್ ನಡುವಿನ ಬಲವಾದ ಮತ್ತು ಶಾಶ್ವತ ಸ್ನೇಹದ ಅಭಿವ್ಯಕ್ತಿಯಾಗಿದೆ” ಎಂದು ಮೋದಿ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಎಂಆರ್‌ಎಲ್ ಲಂಚ ಪ್ರಕರಣ: ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್‌ಗೆ ಇ.ಡಿ ಸಮನ್ಸ್

ಬಹುಚರ್ಚಿತ ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಅಕ್ರಮ ಹಣ...

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...