ಟ್ರಂಪ್ ಸುಂಕ | ಇಂದಿನಿಂದ ಭಾರತದ ಸರಕುಗಳಿಗೆ 50% ತೆರಿಗೆ ಜಾರಿ; ಅಮೆರಿಕ ನೋಟಿಸ್‌

Date:

Advertisements

ಭಾರತದಿಂದ ಅಮೆರಿಕಗೆ ರಫ್ತಾಗುವ ಸರಕುಗಳ ಮೇಲೆ ಟ್ರಂಪ್ ವಿಧಿಸಿರುವ 50% ಸುಂಕ ನೀತಿಯು ಇಂದಿನಿಂದ (ಆಗಸ್ಟ್‌ 27) ಜಾರಿಗೆ ಬರಲಿದೆ ಎಂದು ಅಮೆರಿಕ ಘೋಷಿಸಿದೆ. ಭಾರತದ ಸರಕುಗಳಿಗೆ 50% ಆಮದು ತೆರಿಗೆಯನ್ನು ಜಾರಿಗೆ ತರಲಾಗಿದೆ ಎಂದು ಅಮೆರಿಕದ ಕಸ್ಟಮ್ಸ್ ಹಾಗೂ ಗಡಿ ರಕ್ಷಣಾ (ಸಿಬಿಪಿ) ಇಲಾಖೆಯು ನೋಟಿಸ್‌ ಜಾರಿಗೊಳಿಸಿದೆ.

ರಷ್ಯಾದೊಂದಿಗೆ ಇಂಧನ ಮತ್ತು ಶಸ್ತ್ರಾಸ್ತ್ರ ವ್ಯಾಪಾರ ವಹಿವಾಟು ನಡೆಸುತ್ತಿರುವ ಕಾರಣಕ್ಕಾಗಿ ಭಾರತದ ಮೇಲೆ 25% ಸುಂಕ ಮತ್ತು 25% ದಂಡ ಒಟ್ಟು 50% ತೆರಿಗೆ ವಿಧಿಸುವುದಾಗಿ ಟ್ರಂಪ್ ಆಗಸ್ಟ್‌ 6ರಂದು ಘೋಷಿಸಿದ್ದರು. ಅವರ ತೆರಿಗೆ ನೀತಿಯು ಇಂದಿನಿಂದ ಜಾರಿಯಾಗಲಿದೆ.

ಭಾರತವು ವಾರ್ಷಿಕ 87.3 ಶತಕೋಟಿ ಡಾಲರ್ ಮೊತ್ತದ ಸರಕುಗಳನ್ನು ಅಮೆರಿಕಗೆ ರಫ್ತು ಮಾಡುತ್ತಿದೆ. ಈ ಮೊತ್ತದಲ್ಲಿ ಬರೋಬ್ಬರಿ 50% ಮೊತ್ತವು ಈಗ ಸುಂಕ ಪಾವತಿಗೆ ವ್ಯಯವಾಗಲಿದೆ. ಪರಿಣಾಮವಾಗಿ, ಭಾರತದ ಪ್ರಮುಖ ರಫ್ತು ಸರಕುಗಳಾದ ಜವಳಿ, ಉಡುಪುಗಳು, ರತ್ನಗಳು, ಆಭರಣ, ಸಮುದ್ರ ಆಹಾರ ಹಾಗೂ ಚರ್ಮ ಸೇರಿದಂತೆ ಹಲವಾರು ಸರಕುಗಳು ಬಾಧಿತವಾಗಲಿವೆ.

ಈ ಹೊರೆಯನ್ನು ನೀಗಿಸಿಕೊಳ್ಳಲು ಭಾರತವು ಅಮೆರಿಕದಲ್ಲಿ ತನ್ನ ಸರಕುಗಳ ಮಾರಾಟ ಮೌಲ್ಯವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ, ಇದು ಅಮೆರಿಕದಲ್ಲಿ ಭಾರತದ ಪ್ರತಿಸ್ಪರ್ಧಿಗಳಾದ ವಿಯೆಟ್ನಾಂ, ಬಾಂಗ್ಲಾದೇಶ ಹಾಗೂ ಚೀನಾದಂತಹ ರಾಷ್ಟ್ರಗಳಿಗೆ ಲಾಭ ಮಾಡಿಕೊಡಲಿದೆ. ಈ ರಾಷ್ಟ್ರಗಳ ಸರಕುಗಳ ಮೇಲೆ ಅಮೆರಿಕವು ಕಡಿಮೆ ತೆರಿಗೆ ವಿಧಿಸುತ್ತಿದ್ದು, ಆ ಸರಕುಳ ಮಾರಾಟ ಮೌಲ್ಯವು ಸ್ಥಿರವಾಗಿರಲಿದೆ.

ಈ ಲೇಖನ ಓದಿದ್ದೀರಾ?: OBC ಮೀಸಲಾತಿ ಮೈಲಿಗಲ್ಲು- ʼಮಂಡಲ್ ಆಯೋಗʼದ ವರದಿಗೆ 35 ವರ್ಷಗಳು

‘‘ಅಮೆರಿಕದ ಗ್ರಾಹಕರು ಈಗಾಗಲೇ ಭಾರತದ ಸರಕುಗಳ ಆಮದಿಗೆ ಹೊಸ ಆರ್ಡರ್ ಸಲ್ಲಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಅಮೆರಿಕದ ಹೆಚ್ಚುವರಿ ಸುಂಕದಿಂದಾಗಿ 20-30%ರಷ್ಟು ಸರಕುಗಳ ರಫ್ತು ಪ್ರಮಾಣ ಕಡಿಮೆಯಾಗುವ ಆತಂಕವಿದೆ’’ ಎಂದು ಎಂಜಿನಿಯರಿಂಗ್ ರಫ್ತುಗಳ ಉತ್ತೇಜನ ಮಂಡಳಿಯ ಅಧ್ಯಕ್ಷ ಪಂಕಜ್ ಚಡ್ಡಾ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೆಪೋ ದರ ಶೇ. 5.5 ಕ್ಕೆ ಸ್ಥಿರವಾಗಿರಿಸಿದ ಆರ್‌ಬಿಐ; ಸತತ ಎರಡನೇ ಬಾರಿಯೂ ಯಥಾಸ್ಥಿತಿ

ಶೇ.5.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಅಮೆರಿಕ | ಟ್ರಂಪ್ ಬಜೆಟ್‌ಗೆ ಸಿಗದ ಅನುಮೋದನೆ; ಸರ್ಕಾರದ ಕೆಲಸಗಳು ಸ್ಥಗಿತ!

ಅಮೆರಿಕ ಸೆನೆಟ್‌ನಲ್ಲಿ ಮಂಡಿಸಲಾದ ತಾತ್ಕಾಲಿಕ ಹಣಕಾಸು ಮಸೂದೆಗೆ (ಬಜೆಟ್‌) ಅನುಮೋದನೆ ದೊರೆಯದ...

ಎಲ್ಲರ ತಾಯಿ ಸಾಯುತ್ತಾರೆ; ರಜೆ ಕೇಳಿದ್ದಕ್ಕೆ ಮೇಲಧಿಕಾರಿಯ ಉಡಾಫೆಯ ಉತ್ತರ

ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ರಜೆ ಕೇಳಿದ ಬ್ಯಾಂಕ್ ಉದ್ಯೋಗಿಗೆ, “ಎಲ್ಲರ ತಾಯಿ...

Download Eedina App Android / iOS

X